ಸಾಂಪ್ರದಾಯಿಕ ವೃತ್ತಿಯೊಂದಿಗೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಿ

ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ.ಸುಜ್ಞಾನಮೂರ್ತಿ ಅಭಿಮತ
ತಿ.ನರಸೀಪುರ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಇತ್ತೀಚೆಗೆ ಶ್ರೀ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು. ಪಿ.ಸುಜ್ಞಾನಮೂರ್ತಿ, ಡಾ.ಎಚ್.ವಿ.ಉದಯ್‌ಕುಮಾರ್, ಟಿ.ಜಿ.ಸುರೇಶಾಚಾರ್, ಎ.ಎನ್.ಸ್ವಾಮಿ, ಪಿ.ಪ್ರಭಾಕರ್, ಸಿದ್ದಪ್ಪಾಜಿ, ಮಹೇಶ್‌ಕುಮಾರ್ ಇತರರು ಇದ್ದರು.
ತಿ.ನರಸೀಪುರ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಇತ್ತೀಚೆಗೆ ಶ್ರೀ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು. ಪಿ.ಸುಜ್ಞಾನಮೂರ್ತಿ, ಡಾ.ಎಚ್.ವಿ.ಉದಯ್‌ಕುಮಾರ್, ಟಿ.ಜಿ.ಸುರೇಶಾಚಾರ್, ಎ.ಎನ್.ಸ್ವಾಮಿ, ಪಿ.ಪ್ರಭಾಕರ್, ಸಿದ್ದಪ್ಪಾಜಿ, ಮಹೇಶ್‌ಕುಮಾರ್ ಇತರರು ಇದ್ದರು.
Published on: 

ತಿ.ನರಸೀಪುರ: ವಿಶ್ವವನ್ನೇ ಸೃಷಿಸಿದ ಭಗವಾನ್ ಶ್ರೀ ವಿಶ್ವಕರ್ಮರು ಜಗತ್ತಿನ ನಿರ್ಮಾತೃ ಎಂದು ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ಸುಜ್ಞಾನಮೂರ್ತಿ ಬಣ್ಣಿಸಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಶ್ರೀ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವಕರ್ಮ ಪುರಾಣದಲ್ಲಿ ವಿಶ್ವಕರ್ಮ ದೇವರ ಸ್ವರೂಪ, ಸೃಷ್ಟಿಕರ್ತನಾಗಿ ಅವರ ಪಾತ್ರ, ದೇವತೆಗಳಿಗೆ ನಿರ್ಮಿಸಿದ ನಗರಗಳು ಮತ್ತು ಆಯುಧಗಳು, ಹಾಗೂ ವಿಶ್ವಕರ್ಮ ವಂಶಪರಂಪರೆಯ ಕುರಿತು ಹಲವು ಉಲ್ಲೇಖಗಳಿವೆ ಎಂದರು.

ವಿಶ್ವಕರ್ಮ ಸಮುದಾಯವು ಕಲೆ, ಕರಕುಶಲತೆ ಹಾಗೂ ವೃತ್ತಿಪರ ಕೌಶಲದ ಮೂಲಕ ಸಮಾಜದ ಅಭಿವೃದ್ಧಿಗೆ ಶತಮಾನಗಳಿಂದ ಕೊಡುಗೆ ನೀಡಿದೆ. ಇಂದಿನ ಕಾಲಘಟ್ಟದಲ್ಲಿ ಸಾಂಪ್ರದಾಯಿಕ ವೃತ್ತಿಗಳೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಯುವಜನತೆ ಉದ್ಯೋಗ ಹಾಗೂ ಉದ್ಯಮದ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು. ಸಮುದಾಯದ ಆರ್ಥಿಕ ಸ್ಥಿತಿ ಸುಧಾರಿಸಲು ಸರ್ಕಾರ ಹಾಗೂ ವಿಶ್ವಕರ್ಮ ನಿಗಮದ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವುದು ಮುಖ್ಯ ಎಂದು ಹೇಳಿದರು.

ಮುಖ್ಯ ಭಾಷಣಕಾರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ವಿ.ಉದಯ್‌ಕುಮಾರ್ ಮಾತನಾಡಿ, ವಿಶ್ವಕರ್ಮ ಸಮುದಾಯದ ಪರಂಪರೆ ಕಲೆ, ಸೃಜನಶೀಲತೆ ಹಾಗೂ ವೃತ್ತಿಪರ ಕೌಶಲದೊಂದಿಗೆ ಬೆಸೆದುಕೊಂಡಿದೆ. ಕಾಲ ಬದಲಾದಂತೆ ವೃತ್ತಿ ಕ್ಷೇತ್ರದಲ್ಲೂ ಬದಲಾವಣೆಗಳಾಗಿದ್ದು, ಸಾಂಪ್ರದಾಯಿಕ ಜ್ಞಾನವನ್ನು ಉಳಿಸಿಕೊಂಡು ಹೊಸ ತಂತ್ರಜ್ಞಾನ ಹಾಗೂ ಕೌಶಲಗಳನ್ನು ರೂಢಿಸಿಕೊಳ್ಳುವುದು ಅಗತ್ಯವಾಗಿದೆ. ಯುವಕರು ಶಿಕ್ಷಣದ ಜತೆಗೆ ವೃತ್ತಿಪರ ಕೌಶಲವನ್ನು ಬೆಳೆಸಿಕೊಂಡು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಸ್ವಯಂ ಉದ್ಯೋಗ ಹಾಗೂ ಉದ್ಯಮದ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಮಾತನಾಡಿ, ಸಾಮಾಜಿಕವಾಗಿ ಹಿಂದುಳಿದ ವಿಶ್ವಕರ್ಮ ಸಮುದಾಯ ಶಿಕ್ಷಣಕ್ಕೆ ಪ್ರಾಮುಖ್ಯತೆಯನ್ನು ನೀಡಬೇಕು. ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಹಾಗೂ ಅವುಗಳ ಅರ್ಹತೆಗಳ ಕುರಿತು ಫಲಾನುಭವಿಗಳು ಮಾಹಿತಿ ಪಡೆದು ಪ್ರಯತ್ನಿಸಬೇಕು. ಯಾವುದೇ ಪ್ರಯತ್ನವಿಲ್ಲದೆ ಸೌಲಭ್ಯ ದೊರೆಯುವುದಿಲ್ಲ. ಸಂಬಂಧಪಟ್ಟ ಇಲಾಖೆಗಳ ಮೂಲಕ ಮಾಹಿತಿ ಪಡೆದು ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದರು.

ಜಯಂತಿ ಕಾರ್ಯಕ್ರಮಕ್ಕೂ ಮೊದಲು ಶ್ರೀ ಗುಂಜಾನರಸಿಂಹಸ್ವಾಮಿ ದೇವಾಲಯದಿಂದ ಅಲಂಕೃತ ತೆರೆದ ವಾಹನದಲ್ಲಿ ಶ್ರೀ ವಿಶ್ವಕರ್ಮ ಭಾವಚಿತ್ರವನ್ನು ಮಂಗಳವಾದ್ಯ ಸೇರಿದಂತೆ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.

ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಎ.ಎನ್.ಸ್ವಾಮಿ ಮಾತನಾಡಿದರು. ಬನ್ನೂರು ಪುರಸಭೆ ಮುಖ್ಯಾಧಿಕಾರಿ ಕೆ. ಸತೀಶ್, ಸಂಘದ ಗೌರವಾಧ್ಯಕ್ಷ ಪಿ.ಪ್ರಭಾಕರ್, ವಿಶ್ವಕರ್ಮ ಸಂಘದ ತಾಲೂಕು ಅಧ್ಯಕ್ಷ ಸಿದ್ದಪ್ಪಾಜಿ, ಕಾರ್ಯದರ್ಶಿ ಮಹೇಶ್ ಕುಮಾರ್, ಸಹ ಕಾರ್ಯದರ್ಶಿ ಪ್ರಭಾಕರ್ ಮೂಗೂರು, ಖಜಾಂಚಿ ಚಿಟಗಯ್ಯನಕೊಪ್ಪಲು ರವಿ, ಸಂಘಟನಾ ಕಾರ್ಯದರ್ಶಿ ರಾಜಶೇಖರ ಮೂರ್ತಿ, ತಾಲೂಕು ಅಂಬೇಡ್ಕರ್ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ, ಸಮಾಜದ ಮುಖಂಡರಾದ ಶ್ರೀನಿವಾಸ, ಶೇಖರ್, ಮೆಕಾನಿಕ್ ಸೋಮಣ್ಣ, ಕೆಂಪಯ್ಯನಹುಂಡಿ ಶಿವಕುಮಾರ್, ಸಿದ್ದಪ್ಪಾಜಿ, ತಿ.ನರಸೀಪುರ ಶ್ರೀನಿವಾಸಾಚಾರಿ, ರಾಜಪ್ಪಾಜಿ, ತಲಕಾಡು ರಾಜು, ತಲಕಾಡು ನಾಗೇಂದ್ರ, ಕೆಂಪೇಗೌಡನ ಕೊಪ್ಪಲು ಸಿದ್ದರಾಜು, ಬನ್ನೂರು ನಾಗರಾಜಾಚಾರಿ, ಚಲುವರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net