ಲಕ್ಷ್ಮಣತೀರ್ಥ ನದಿ ಉಳಿವಿಗೆ ಮ್ಯಾರಥಾನ್

ವಿಜೇತೆ ಕೆ.ಎಸ್.ಶಿಲ್ಪಾ ಚಾಲನೆ
ಹುಣಸೂರಿನಲ್ಲಿ ಲಕ್ಷ್ಮಣತೀರ್ಥ ಉಳಿವಿಗಾಗಿ ಆಯೋಜಿಸಿದ್ದ ಜಾಗೃತಿ ಮ್ಯಾರಥಾನ್‌ಗೆ ಪ್ಯಾರಾ ಅಥ್ಲೆಟಿಕ್‌ನ ಕಂಚಿನ ಪದಕ ವಿಜೇತೆ ಕೆ.ಎಸ್.ಶಿಲ್ಪಾ ಚಾಲನೆ ನೀಡಿದರು. ಸಂಸ್ಥೆಯ ಮುಖ್ಯಸ್ಥ ಫಾ. ಸನೀಶ್‌ಆಲ್ಪಟ್ ಇತರರಿದ್ದರು.
ಹುಣಸೂರಿನಲ್ಲಿ ಲಕ್ಷ್ಮಣತೀರ್ಥ ಉಳಿವಿಗಾಗಿ ಆಯೋಜಿಸಿದ್ದ ಜಾಗೃತಿ ಮ್ಯಾರಥಾನ್‌ಗೆ ಪ್ಯಾರಾ ಅಥ್ಲೆಟಿಕ್‌ನ ಕಂಚಿನ ಪದಕ ವಿಜೇತೆ ಕೆ.ಎಸ್.ಶಿಲ್ಪಾ ಚಾಲನೆ ನೀಡಿದರು. ಸಂಸ್ಥೆಯ ಮುಖ್ಯಸ್ಥ ಫಾ. ಸನೀಶ್‌ಆಲ್ಪಟ್ ಇತರರಿದ್ದರು. Marathon for the preservation of the Lakshmanatirtha River
Published on: 

ಹುಣಸೂರು: ಲಕ್ಷ್ಮಣತೀರ್ಥ ನದಿ ಉಳಿವಿಗಾಗಿ ತಾಲೂಕಿನ ಮರದೂರು ಲಾಸಲೆಟ್ ವಿದ್ಯಾನಿಕೇತನ್ ಸಂಸ್ಥೆಯಿಂದ ಆಯೋಜಿಸಿದ್ದ ಜಾಗೃತಿ ಮ್ಯಾರಥಾನ್‌ಗೆ ಕಾಮನ್ ವೆಲ್ತ್ ಕ್ರೀಡಾಕೂಟದ ಪ್ಯಾರಾ ಅಥ್ಲೆಟಿಕ್‌ನ ಕಂಚಿನ ಪದಕ ವಿಜೇತೆ ಕೆ.ಎಸ್.ಶಿಲ್ಪಾ ಚಾಲನೆ ನೀಡಿದರು.

ನಗರದ ಸಂವಿಧಾನ ವೃತ್ತದಲ್ಲಿ ಶನಿವಾರ ಮ್ಯಾರಥಾನ್‌ಗೆ ಹಸಿರು ನಿಶಾನೆ ತೋರಿದ ಕೆ.ಎಸ್.ಶಿಲ್ಪಾ ಮಾತನಾಡಿ, ಕಲುಷಿತವಾಗುತ್ತಿರುವ ಲಕ್ಷ್ಮಣತೀರ್ಥ ನದಿ ಉಳಿವಿಗಾಗಿ ಮ್ಯಾರಥಾನ್ ಆಯೋಜಿಸಿರುವುದು ಅಭಿನಂದನಾರ್ಹ ಎಂದರು.

ಸಂಸ್ಥೆಯ ಮುಖ್ಯಸ್ಥ ಫಾ. ಸನೀಶ್ ಆಲ್ಪಟ್ ಮಾತನಾಡಿ, ನಾಗರಿಕರು, ಸರ್ಕಾರ ನದಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಾಚಾರ್ಯ ರವಿದೀಪಕ್ ಮಾತನಾಡಿದರು. ಈ ವೇಳೆ ಸಂಸ್ಥೆಯ ಅಲೆಕ್ಸ್ ಸೆಬಾಸ್ಟಿನ್, ಜೋಬಿನ್ಸ್, ಮುಖ್ಯಶಿಕ್ಷಕಿ ಸಂಗೀತಾ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.