ರೈತ ಮಹಿಳೆಯರು ಸಂಘಟಿತರಾಗಲಿ

ಸಂಘದ ತಾಲೂಕು ಅಧ್ಯಕ್ಷೆ ಎಂ.ವಿ.ಬೇಬಿ ಹೇಳಿಕೆ
ಬನ್ನೂರಿನ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಮಹಿಳಾ ಘಟಕದ ಸಭೆ ಶನಿವಾರ ನಡೆಯಿತು. ತಾಲೂಕು ಅಧ್ಯಕ್ಷೆ ಎಂ.ವಿ.ಬೇಬಿ ಮಾತನಾಡಿದರು. ಹೋಬಳಿ ಅಧ್ಯಕ್ಷೆ ಪ್ರೇಮಾ, ಭಾಗ್ಯಮ್ಮ, ರಘು, ಸತೀಶ್, ಶಾಮಲಾ ಅರಸ್, ಕೆ.ಜಿ. ಶಿವಪ್ರಕಾಶ ಇದ್ದರು.
ಬನ್ನೂರಿನ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಮಹಿಳಾ ಘಟಕದ ಸಭೆ ಶನಿವಾರ ನಡೆಯಿತು. ತಾಲೂಕು ಅಧ್ಯಕ್ಷೆ ಎಂ.ವಿ.ಬೇಬಿ ಮಾತನಾಡಿದರು. ಹೋಬಳಿ ಅಧ್ಯಕ್ಷೆ ಪ್ರೇಮಾ, ಭಾಗ್ಯಮ್ಮ, ರಘು, ಸತೀಶ್, ಶಾಮಲಾ ಅರಸ್, ಕೆ.ಜಿ. ಶಿವಪ್ರಕಾಶ ಇದ್ದರು.
Published on: 

ಬನ್ನೂರು: ರೈತ ಮಹಿಳೆಯರು ಸಂಘಟಿತರಾದಾಗ ಮಾತ್ರ ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ತಾಲೂಕು ಅಧ್ಯಕ್ಷೆ ಎಂ.ವಿ.ಬೇಬಿ ತಿಳಿಸಿದರು.

ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಬನ್ನೂರು ಹೋಬಳಿ ಮಹಿಳಾ ಘಟಕಕ್ಕೆ ಸೇರ್ಪಡೆಯಾದ ರೈತ ಮಹಿಳೆಯರನ್ನು ಸ್ವಾಗತಿಸಿ ಮಾತನಾಡಿದರು. ಮಹಿಳೆಯರು ಜಾಗೃತರಾದಾಗ ಮಾತ್ರ ಸಾಧನೆ ಸಾಧ್ಯ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹಸಿರುಸೇನೆ ಸೇರುವ ಮೂಲಕ ರೈತರ ಹಕ್ಕುಗಳನ್ನು ರಕ್ಷಣೆ ಮಾಡಬೇಕು ಎಂದರು. ನಂತರ ಹೋಬಳಿ ಅಧ್ಯಕ್ಷೆ ಪ್ರೇಮ ಮಾತನಾಡಿದರು.

ಸಂಘದ ರಾಜ್ಯ ಉಪಾಧ್ಯಕ್ಷ ರಘು, ಜಿಲ್ಲಾ ಅಧ್ಯಕ್ಷ ಸತೀಶ್, ಮುಖಂಡರಾದ ಕೆ.ಆರ್.ಪೇಟೆ ಭಾಗ್ಯಮ್ಮ, ಮೈಸೂರಿನ ಶಾಮಲಾ ಅರಸ್, ಕೆ.ಜಿ.ಶಿವಪ್ರಕಾಶ, ವಿದ್ಯಾಸಾಗರ್, ರಾಮಕೃಷ್ಣ, ಅತ್ತಳ್ಳಿ ರಂಗಸ್ವಾಮಿ, ಮಹದೇವಸ್ವಾಮಿ, ಅಲಗೂಡು ಮಹದೇವ, ಗಿರಿಜಾ, ವರಕೂಡು ಕೃಷ್ಣೇಗೌಡ, ಚಂದ್ರಪ್ಪ, ಕರಿಯಪ್ಪ, ಜಗದೀಶ್, ರಾಜೇಂದ್ರ ಪ್ರಸಾದ್, ಮಹದೇವಸ್ವಾಮಿ, ಮಹದೇವನಾಯಕ್, ರಮೇಶ್ ಸೇರಿದಂತೆ ಹಲವರು ಇದ್ದರು.