ಮೈಸೂರು:ಮೂಢನಂಬಿಕೆಗಳಿಂದ ಮುಕ್ತರಾಗಿ ಮಾನಸಿಕ ಗುಲಾಮಗಿರಿಯಿಂದ ಶೋಷಿತರು ಹೊರ ಬರಬೇಕು ಎಂದು ಲೋಕೋಪಂೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದಿಂದ ನಗರದ ಕಲಾಮಂದಿರದಲ್ಲಿ ಆಂೋಜಿಸಿದ್ದ ವಾರ್ಷಿಕ ಮಹಾಸಭೆ ಹಾಗೂ ಎಸ್‌ಎಸ್‌ಎಲ್‌ಸಿ, ದ್ವಿತೀಂು ಪಿಂುು ಉತ್ತೀರ್ಣರಾದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾಂರ್ುಕ್ರಮ ಉದ್ಘಾಟಿಸಿ ವಾತನಾಡಿದರು.
ಬುದ್ಧ, ಬಸವಣ್ಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರು ಶತವಾನಗಳ ಹಿಂದೆಂೆುೀ ಸಾಮಾಜಿಕ ಪರಿವರ್ತನೆಂು ಹಾದಿ ತೋರಿಸಿದ್ದರೂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಂುಗಳು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಿಲ್ಲ ಎಂದು ವಿಷಾಧಿಸಿದರು.
ಈ ಪರಿಸ್ಥಿತಿಗೆ ಬೇರೆಂುವರನ್ನು ದೂಷಿಸುವ ಬದಲು ಸಮುದಾಂುದೊಳಗಿನ ನ್ಯೂನತೆಗಳನ್ನು ಗುರುತಿಸಿ, ಸಂಘಟಿತವಾಗಿ ಪರಿಹರಿಸಿಕೊಳ್ಳುವ ಅಗತ್ಯವಿದೆ. ಡಾ.ಅಂಬೇಡ್ಕರ್ ನಮ್ಮನ್ನು ವಾನಸಿಕ ಗುಲಾಮಗಿರಿಯಿಂದ ಹೊರಬರುವಂತೆ ಸಲಹೆ ನೀಡಿದ್ದರು. ಆದರೆ ಇಂದಿಗೂ ಮೂಢ ನಂಬಿಕೆಯಿಂದ ನೀವು ಹೊರ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಎವಿಎಸ್‌ಎಸ್ ಸಂಸ್ಥಾಪಕ ಅಧ್ಯಕ್ಷ ತುಂಬಲ ರಾಮಣ್ಣ ವಾತನಾಡಿ, ಎಸ್ಸಿ, ಎಸ್ಟಿ ಸಮುದಾಂುದವರಿಗೆ ಸ್ವಂುಂ ಉದ್ಯೋಗ ಕೈಗೊಳ್ಳಲು ತರಬೇತಿ ಹಾಗೂ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ಎವಿಎಸ್‌ಎಸ್ ಸ್ಥಾಪಿಸಲಾಯಿತು. ಈಗ ರಾಜ್ಯಾದ್ಯಂತ ವಿಸ್ತರಿಸಿದ್ದು, ಒಂಬತ್ತು ಜಿಲ್ಲೆಗಳಲ್ಲಿ 22 ಸಾವಿರ ಸದಸ್ಯರಿದ್ದು, ಸುವಾರು 37 ಕೋಟಿ ರೂ.ವಹಿವಾಟು ನಡೆದಿದೆ ಎಂದು ಹೇಳಿದರು.
ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಭಂತೇ ಬೋಧಿದತ್ತ ಸ್ವಾಮೀಜಿ, ಶ್ರೀ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಡಾ.ಪುಷ್ಪಾ ಅಮರನಾಥ್, ಬಿಎಸ್‌ಪಿ ರಾಜ್ಯಾಧ್ಯಕ್ಷ ಎನ್.ಕೃಷ್ಣಮೂರ್ತಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ವಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ಜಿಪಂ ವಾಜಿ ಅಧ್ಯಕ್ಷ ಅಚ್ಚುತ್ಯಾಂದನ್, ಉದ್ಯಮಿ ಸುರೇಶ್, ಕೆಪಿಸಿಸಿ ಸಂಂೋಜಕ ಎನ್.ಭಾಸ್ಕರ್, ಅರವಳಿಕೆ ತಜ್ಞ ಡಾ.ಶ್ಯಾಂ ಪ್ರಸಾದ್ ಇನ್ನಿತರರು ಇದ್ದರು.