ಮಕ್ಕಳ ಕಲಾ ಪ್ರೌಢಿಮೆಗೆ ಪ್ರತಿಭಾ ಕಾರಂಜಿ ವೇದಿಕೆ

'Pratibha Karanji': A Platform for Children's Artistic Proficiency
ಮೂಗೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಮೂಗೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಕ್ಕಳು ವಿವಿಧ ವೇಷಧಾರಿಗಳಾಗಿ ಗಮನಸೆಳೆದರು. ಎಂ.ಕೆ. ಬಾಲಶಂಕರ್, ಬಸವರಾಜು, ಶಿವಮೂರ್ತಿ, ಸೋಮಣ್ಣ, ರಂಗಸ್ವಾಮಿ ಇತರರು ಇದ್ದರು.
ಮೂಗೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಮೂಗೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಕ್ಕಳು ವಿವಿಧ ವೇಷಧಾರಿಗಳಾಗಿ ಗಮನಸೆಳೆದರು. ಎಂ.ಕೆ. ಬಾಲಶಂಕರ್, ಬಸವರಾಜು, ಶಿವಮೂರ್ತಿ, ಸೋಮಣ್ಣ, ರಂಗಸ್ವಾಮಿ ಇತರರು ಇದ್ದರು. 'Pratibha Karanji': A Platform for Children's Artistic Proficiency
Published on: 

ಮೂಗೂರು: ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಸಮಾಜಕ್ಕೆ ಪರಿಚಯಿಸಲು ಪ್ರತಿಭಾ ಕಾರಂಜಿ ಉತ್ತಮ ಅವಕಾಶವಾಗಿವೆ ಎಂದು ಕೆಪಿಎಸ್‌ನ ಎಸ್‌ಡಿಎಂಸಿ ಅಧ್ಯಕ್ಷ ಎಂ.ಕೆ. ಬಾಲಶಂಕರ್ ಹೇಳಿದರು

ಮೂಗೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಮೂಗೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಅಪಾರ ಪ್ರತಿಭೆಯಿದೆ. ಸೂಕ್ತ ವೇದಿಕೆ ಪ್ರೋತ್ಸಾಹದ ಕೊರತೆಯಿಂದ ಅನೇಕ ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ತಮ್ಮಲ್ಲಿರುವ ಕಲಾ ಪ್ರೌಢಿಮೆಯನ್ನು ವೃದ್ಧಿಸಿಕೊಳ್ಳಲು ಕರೆ ನೀಡಿದರು.

ಶಿಕ್ಷಣ ಸಂಯೋಜಕ ಬಸವರಾಜು ಮಾತನಾಡಿ, ಪ್ರತಿಭಾ ಕಾರಂಜಿ ಮಕ್ಕಳಲ್ಲಿ ಸ್ವರ್ಧಾತ್ಮಕ ಮನೋಭಾವ ಬೆಳೆಸುವುದರ ಜತೆಗೆ ಆತ್ಮವಿಶ್ವಾಸ, ಧೈರ್ಯ ಹಾಗೂ ವೇದಿಕೆಯಲ್ಲಿ ತನ್ನ ಸಾಮರ್ಥ್ಯವನ್ನು ವೃದ್ಧಿಸುತ್ತದೆ ಎಂದರು

ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ, ಕೆಪಿಎಸ್ ಉಪಾಧ್ಯಕ್ಷ ಸೋಮಣ್ಣ, ರಂಗಸ್ವಾಮಿ, ರಾಜ್ಯ ಪರಿಷತ್ ಸದಸ್ಯ ರೇವಣ್ಣ, ತಾಲೂಕು ನೌಕರರ ಸಂಘದ ಉಪಾಧ್ಯಕ್ಷ ಮಹದೇವ ಸ್ವಾಮಿ, ಸಿಆರ್‌ಪಿ ಶಿವರಾಜು, ಸಿದ್ದಮಲ್ಲಪ್ಪ, ಮಾಜಿ ಅಧ್ಯಕ್ಷ ಸಿದ್ದರಾಜು, ಸಮಿತಿ ಸದಸ್ಯ ಮಾಧು, ಜಗದೀಶ್, ಪರಶಿವ, ಶಶಿರೇಖಾ , ಮುಖ್ಯ ಶಿಕ್ಷಕರಾದ ಗೋವಿಂದ ರಾಜು, ಶಿಕ್ಷಕ ವೃಂದ ಹಾಗೂ ಪಾಲಕರು ಉಪಸ್ಥಿತರಿದ್ದರು.