ಪ್ಲಾಸ್ಟಿಕ್ ನಿಯಂತ್ರಣಕ್ಕೆ ನೂತನ ಆವಿಷ್ಕಾರ ಅಗತ್ಯ

ಎಸಿಎಫ್ ವೈ.ಕೆ.ಕಿರಣ್‌ಕುಮಾರ್ ಅಭಿಪ್ರಾಯ
ಹುಣಸೂರು ನಗರದ ಅರಣ್ಯ ಇಲಾಖೆ ಡಿಸಿಎಫ್(ಪ್ರಾದೇಶಿಕ ವಿಭಾಗ) ಕಚೇರಿ ಆವರಣದಲ್ಲಿ ವನ್ಯಜೀವಿ ಸಪ್ತಾಹದ ಅಂಗವಾಗಿ ಸಂತ ಜೋಸೆಫರ ಪಿಯು ಕಾಲೇಜಿನ ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ಸ್ವಚ್ಛತಾ ಆಂದೋಲನ ಆಯೋಜಿಸಲಾಗಿತ್ತು. ಡಿಸಿಎಫ್ ಆರ್.ಟಿ.ಕಿರುಬನಂತನ್, ಎಸಿಎಫ್ ವೈ.ಕೆ.ಕಿರಣ್‌ಕುಮಾರ್, ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ರಾಜೇಶ್ ಇತರರಿದ್ದರು.
ಹುಣಸೂರು ನಗರದ ಅರಣ್ಯ ಇಲಾಖೆ ಡಿಸಿಎಫ್(ಪ್ರಾದೇಶಿಕ ವಿಭಾಗ) ಕಚೇರಿ ಆವರಣದಲ್ಲಿ ವನ್ಯಜೀವಿ ಸಪ್ತಾಹದ ಅಂಗವಾಗಿ ಸಂತ ಜೋಸೆಫರ ಪಿಯು ಕಾಲೇಜಿನ ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ಸ್ವಚ್ಛತಾ ಆಂದೋಲನ ಆಯೋಜಿಸಲಾಗಿತ್ತು. ಡಿಸಿಎಫ್ ಆರ್.ಟಿ.ಕಿರುಬನಂತನ್, ಎಸಿಎಫ್ ವೈ.ಕೆ.ಕಿರಣ್‌ಕುಮಾರ್, ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ರಾಜೇಶ್ ಇತರರಿದ್ದರು.
Published on: 

ಹುಣಸೂರು : ಪರಿಸರ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿರುವ ಪ್ಲಾಸ್ಟಿಕ್‌ನ ಬಳಕೆ ನಿಯಂತ್ರಣಕ್ಕೆ ನೂತನ ಆವಿಷ್ಕಾರಗಳ ಅಗತ್ಯವಿದೆ ಎಂದು ಅರಣ್ಯ ಇಲಾಖೆ ಹುಣಸೂರು ಪ್ರಾದೇಶಿಕ ವಿಭಾಗದ ಎಸಿಎಫ್ ವೈ.ಕೆ.ಕಿರಣ್‌ಕುಮಾರ್ ಅಭಿಪ್ರಾಯಪಟ್ಟರು.

ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ(ಪ್ರಾದೇಶಿಕ ವಿಭಾಗ) ಆವರಣದಲ್ಲಿ ವನ್ಯಜೀವಿ ಸಪ್ತಾಹದ ಅಂಗವಾಗಿ ಸಂತ ಜೋಸೆಫರ ಪಿಯು ಕಾಲೇಜಿನ ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು. 72ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ವಾರಕಾಲ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಪ್ಲಾಸ್ಟಿಕ್ ಇಂದು ನಮ್ಮೆಲ್ಲರ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ಅಂತ್ಯ ಉತ್ಪನ್ನವಾಗಿ ಪ್ಲಾಸ್ಟಿಕ್ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿದ್ದು, ಅದರ ಬಳಕೆಗಿಂತ ದುರ್ಬಳಕೆಯೇ ಪರಿಸರ ಮಾಲಿನ್ಯಕ್ಕೆ ಮೂಲ ಕಾರಣವಾಗುತ್ತಿದೆ. ಜನಸಾಮಾನ್ಯರಿಂದ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಲು ಹೊಸ ಆವಿಷ್ಕಾರಗಳ ಅಗತ್ಯವಿದೆ. ಉದಾಹರಣೆಗೆ ಪ್ಲಾಸ್ಟಿಕ್ ಇಟ್ಟಿಗೆ, ಸೀಮೆಂಟ್ ಕಾಂಕ್ರೀಟ್‌ನಲ್ಲಿ ಪ್ಲಾಸ್ಟಿಕ್‌ಗಳ ಬಳಕೆ ಹೀಗೆ ನೂತನ ಆವಿಷ್ಕಾರಗಳ ಮೂಲಕ ಅನಿವಾರ್ಯವಾಗಿ ಉತ್ಪಾದನೆಯಾಗುತ್ತಿರುವ ಪ್ಲಾಸ್ಟಿಕ್‌ನ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಪರಿಸರ ಮಾಲಿನ್ಯ ಮತ್ತು ಅನಗತ್ಯ ಬಳಕೆ ತಡೆಯಬೇಕಿದೆ ಎಂದರು.

ಸ್ವಚ್ಛತಾ ಆಂದೋಲನ ಉದ್ಘಾಟಿಸಿ ಮಾತನಾಡಿದ ಡಿಸಿಎಫ್ ಆರ್.ಟಿ.ಕಿರುಬನಂತನ್, ಪ್ಲಾಸ್ಟಿಕ್‌ನಲ್ಲಿರುವ ಉಪ್ಪಿನ ಅಂಶದ ರುಚಿಯನ್ನು ಕಂಡುಕೊಂಡಿರುವ ವನ್ಯಪ್ರಾಣಿಗಳು ಕೂಡ ಕಾಡಂಚಿನಲ್ಲಿ ಸ್ಥಳೀಯರು ಬಳಸಿ ಬಿಸಾಡಿದ ಪ್ಲಾಸ್ಟಿಕ್‌ಗಳನ್ನು ತಿಂದು ಅನಾರೋಗ್ಯಕ್ಕೆ ತುತ್ತಾಗಿ ಜೀವ ಕಳೆದುಕೊಳ್ಳುತ್ತಿವೆ. ವನ್ಯಜೀವಿ ಸಪ್ತಾಹದ ಮೂಲ ಉದ್ದೇಶವೇ ಇಂತಹ ಅನಾಹುತಗಳನ್ನು ನಿಯಂತ್ರಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದಾಗಿದೆ. ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ಸಹ ಪರಿಸರ ಸಂರಕ್ಷಣೆಯ ಜವಾಬ್ದಾರಿ ಅರಿಯಬೇಕೆಂದು ಕೋರಿದರು.

ಕಾರ್ಯಕ್ರಮದಲ್ಲಿ ಸಂತ ಜೋಸೆಫರ ಪಿಯು ಕಾಲೇಜಿನ ಎನ್‌ಎಸ್‌ಎಸ್ ಘಟಕದ ಸಂಯೋಜನಾಧಿಕಾರಿ ರಾಜೇಶ್, ಆರ್‌ಎಫ್‌ಒ ಸಂತೋಷ್‌ಹೂಗಾರ್, ಡಿಆರ್‌ಎಫ್‌ಒ ಮಂಜುನಾಥ್ ಸೇರಿದಂತೆ ಅರಣ್ಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net