ಪೌರಕಾರ್ಮಿಕರಿಗೆ ನಿವೇಶನ ಹಂಚಲು ಕ್ರಮ

ಶಾಸಕ ಡಿ.ರವಿಶಂಕರ್ ಭರವಸೆ
 ಪುರಸಭೆ
ಕೆ.ಆರ್.ನಗರದ ಪುರಸಭೆ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಡಿ.ರವಿಶಂಕರ್ ಉದ್ಘಾಟಿಸಿದರು. ಡಿ.ಆರ್.ರಾಜು, ನಂಜಪ್ಪ ಬಸವನಗುಡಿ, ಎಂ.ಎಸ್.ಮಹದೇವ್, ಕೋಳಿಪ್ರಕಾಶ್, ಸೈಯದ್‌ಸಿದ್ದಿಕ್, ಮಿಕ್ಸರ್ ಶಂಕರ್, ಕೆ.ಎಸ್.ಶಂಕರ್, ಕೆ.ವಿನಯ್, ಜಿ.ಎಸ್.ರಮೇಶ್ ಇತರರು ಇದ್ದರು. ಕೆ.ಆರ್.ನಗರ
Published on: 

ಕೆ.ಆರ್.ನಗರ: ಪೌರಕಾರ್ಮಿಕರ ಬಡಾವಣೆ ನಿರ್ಮಾಣಕ್ಕೆ ಸರ್ಕಾರಿ ಜಮೀನು ಗುರುತಿಸುವಂತೆ ಪುರಸಭೆ ಮುಖ್ಯಾಧಿಕಾರಿ ಮತ್ತು ತಹಸೀಲ್ದಾರ್‌ಗೆ ಸೂಚಿಸಲಾಗಿದ್ದು, ಆ ಬಳಿಕ ನಿವೇಶನ ಹಂಚಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಿ.ರವಿಶಂಕರ್ ಭರವಸೆ ನೀಡಿದರು.

ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪೌರ ಕಾರ್ಮಿಕರು ವಾಸಿಸುತ್ತಿರುವ ಪಟ್ಟಣದ 5ನೇ ವಾರ್ಡ್‌ನ ಸಮಗ್ರ ಅಭಿವೃದ್ಧಿಗೆ ತೀರ್ಮಾನಿಸಲಾಗಿದೆ. ಅಲ್ಲದೆ ಸ್ಮಶಾನ ಅಭಿವೃದ್ಧಿಗೆ ಈಗಾಗಲೆ ಪೂರ್ವ ತಯಾರಿ ಪ್ರಗತಿಯಲ್ಲಿದೆ ಎಂದರು.

ಎಲ್ಲ ತಾಲೂಕು ಕೇಂದ್ರಗಳಲ್ಲಿಯೂ ಪೌರಕಾರ್ಮಿಕರಿಗೆ ಸಮುದಾಯ ಭವನ ನಿರ್ಮಿಸಲು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದು, ಮುಂದಿನ ವರ್ಷದಿಂದ ಭವನದ ಕಾಮಗಾರಿಗೆ ಅನುದಾನ ನೀಡಲಿದ್ದಾರೆ ಎಂದು ಶಾಸಕರು ತಿಳಿಸಿದರು.

ಕೆ.ಆರ್.ನಗರದ ಪುರಸಭೆ ಸ್ವಚ್ಛತೆಯಲ್ಲಿ ಮೂರು ಬಾರಿ ಕೇಂದ್ರ ಪುರಸ್ಕೃತ ಪ್ರಶಸ್ತಿ ಪಡೆಯಲು ಪೌರಕಾರ್ಮಿಕರು ಕಾರಣರಾಗಿದ್ದು, ಇವರನ್ನು ಅಭಿನಂದಿಸುವುದರ ಜತೆಗೆ ಅವರನ್ನು ಗೌರವಿಸುವ ಕೆಲಸವನ್ನು ಎಲ್ಲರು ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಪೌರಕಾರ್ಮಿಕರ ಸಂಘದ ಅಧ್ಯಕ್ಷ ಡಿ.ಆರ್.ರಾಜು, ಜಿಲ್ಲಾ ಸಫಾಯಿ ಕರ್ಮಚಾರಿಗಳ ಜಾಗೃತಿ ವೇದಿಕೆ ಸಂಚಾಲಕ ನಂಜಪ್ಪ ಬಸವನಗುಡಿ ಮಾತನಾಡಿದರು. ಇದೇ ವೇಳೆ ಪೌರಕಾರ್ಮಿಕರನ್ನು ಗೌರವಿಸಲಾಯಿತು.

ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಸ್.ಮಹದೇವ್, ಪುರಸಭೆ ಮಾಜಿ ಅಧ್ಯಕ್ಷರಾದ ಕೋಳಿಪ್ರಕಾಶ್, ಸೈಯದ್‌ಸಿದ್ದಿಕ್, ಮಾಜಿ ಸದಸ್ಯರಾದ ಮಿಕ್ಷರ್ ಶಂಕರ್, ಕೆ.ಎಸ್.ಶಂಕರ್, ಕೆ.ವಿನಯ್, ಮುಖ್ಯಾಧಿಕಾರಿ ಜಿ.ಎಸ್.ರಮೇಶ್, ಪೌರಕಾರ್ಮಿಕರ ಸಂಘದ ಪದಾಧಿಕಾರಿಗಳಾದ ಆರ್.ವಸಂತಕುಮಾರಿ, ದಿನೇಶ್‌ಕುಮಾರ್, ಮುಖಂಡರಾದ ನವೀದ್, ವೃಷಭೇಂದ್ರ, ಪುರಸಭೆ ಎಂಜಿನಿಯರ್‌ಗಳಾದ ಬಿ.ಎಸ್.ಮಧುಸೂದನ್, ಸೌಮ್ಯಾ, ಹಿರಿಯ ಆರೋಗ್ಯ ನಿರೀಕ್ಷಕ ಎಸ್.ಪಿ.ರಾಜೇಂದ್ರಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net