ಧರ್ಮಸ್ಥಳ ಯೋಜನೆಯಿಂದ ಜೀವನಮಟ್ಟ ಸುಧಾರಣೆ

ಮೈಮುಲ್ ಮಾಜಿ ಅಧ್ಯಕ್ಷ ಆರ್.ಚೆಲುವರಾಜು ಅಭಿಪ್ರಾಯ
ಬನ್ನೂರಿನ ಸಮೀಪದ ಕಗ್ಗಲೀಪುರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಶ್ರೀ ಅಷ್ಟ ಲಕ್ಷ್ಮೀ ಪೂಜಾ ಕಾರ್ಯಕ್ರಮವನ್ನು ಹೊನ್ನನಾಯ್ಕ ಉದ್ಘಾಟಿಸಿದರು. ಮೈಮುಲ್ ಮಾಜಿ ಅಧ್ಯಕ್ಷ ಆರ್. ಚೆಲುವರಾಜು, ಎಂ.ಮುರಳಿ ಸೇರಿದಂತೆ ಪ್ರಮುಖರು ಇದ್ದರು.
ಬನ್ನೂರಿನ ಸಮೀಪದ ಕಗ್ಗಲೀಪುರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಶ್ರೀ ಅಷ್ಟ ಲಕ್ಷ್ಮೀ ಪೂಜಾ ಕಾರ್ಯಕ್ರಮವನ್ನು ಹೊನ್ನನಾಯ್ಕ ಉದ್ಘಾಟಿಸಿದರು. ಮೈಮುಲ್ ಮಾಜಿ ಅಧ್ಯಕ್ಷ ಆರ್. ಚೆಲುವರಾಜು, ಎಂ.ಮುರಳಿ ಸೇರಿದಂತೆ ಪ್ರಮುಖರು ಇದ್ದರು.
Published on: 

ಬನ್ನೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೂರಾರು ಸಮಾಜಮುಖಿ ಸೇವೆಗಳು ನಿರಂತರವಾಗಿ ನಡೆಯುತ್ತಿದ್ದು, ಜನಸಾಮಾನ್ಯರ ಜೀವನ ಮಟ್ಟ ಸುಧಾರಿಸಲು ನೆರವಾಗುತ್ತದೆ ಎಂದು ಮೈಮುಲ್ ಮಾಜಿ ಅಧ್ಯಕ್ಷ ಆರ್. ಚೆಲುವರಾಜು ಅಭಿಪ್ರಾಯಪಟ್ಟರು.

ಪಟ್ಟಣದ ಕಗ್ಗಲೀಪುರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್, ಶ್ರೀ ಅಷ್ಟಲಕ್ಷ್ಮೀ ಪೂಜಾ ಸಮಿತಿ ಸೋಮನಾಥಪುರ ವಲಯ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀ ಅಷ್ಟ ಲಕ್ಷ್ಮೀ ಸಾಮೂಹಿಕ ಪೂಜೆ ಮತ್ತು ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆರಂಭವಾದ ನಂತರ ಹಳ್ಳಿಗಳಲ್ಲಿ ಮಹಿಳೆಯರು ಹೆಚ್ಚು ಸ್ವಾವಲಂಬನೆ ಬದುಕನ್ನು ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆಯರು ಕುಟುಂಬದ ಕಣ್ಣಾಗಿ ಅನಕ್ಷರಸ್ಥರು ಅಕ್ಷರಸ್ಥರಾಗಿ ಜೀವನ ನಡೆಸುವಂತಾಗಿದೆ. ಸಂಘಗಳ ಚಟುವಟಿಕೆಯಿಂದ ಉಳಿತಾಯ ಮಾಡಿ ಕುಟುಂಬವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಿಕೊಂಡು ಹೋಗುವಲ್ಲಿ ಸಫಲರಾಗಿದ್ದಾರೆ ಎಂದು ತಿಳಿಸಿದರು.

ಸಂಘದಿಂದ ದೊರೆಯುತ್ತಿರುವ ವಾತ್ಸಲ್ಯ ಯೋಜನೆ, ಮಾಸಾಶನ, ಪಾತ್ರೆ ಪರಿಕರಗಳ ವಿತರಣೆ, ಶಾಲೆಗಳಿಗೆ ಡೆಸ್ಕ್, ಬೆಂಚ್‌ಗಳ ವಿತರಣೆ, ಡೇರಿಯ ನಿರ್ಮಾಣಕ್ಕೆ ಸಹಾಯಧನ ಹೀಗೆ ನಾನಾ ಕ್ಷೇತ್ರಗಳಲ್ಲಿ ಕೊಡುಗೆ ನೀಡುವ ಮೂಲಕ ಇಂದು ಬಹಳಷ್ಟು ಹೆಸರುವಾಸಿಯಾಗಿದ್ದು, ಸಂಘದಿಂದ ದೊರಕುತ್ತಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಕಾರ್ಯಕ್ರಮವನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊನ್ನನಾಯಕ ಉದ್ಘಾಟಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಹಿರಿಯ ನಿರ್ದೇಶಕ ವಿ.ವಿಜಯ್ ಮಾತನಾಡಿದರು.

ತಾಲೂಕು ಯೊಜನಾಧಿಕಾರಿ ಉಮಾವತಿ, ಮೇಲ್ವೀಚಾರಕ ಎಂ.ಮುರುಳಿ, ಮುಖಂಡರಾದ ಗೋವಿಂದರಾಜು, ಕಾಂತರಾಜು, ನಿಂಗೇಗೌಡ, ಶಿವರಾಮು, ಆರ್.ರಾಜೇಶ್, ಉಮೇಶ್, ಎಸ್.ರಾಜೇಶ್, ವೆಂಕಟೇಶ್, ಮಂಜುನಾಥ್, ನಿಂಗರಾಜು, ಮಹದೇವಯ್ಯ, ನಾಗಮ್ಮ ಕರಿಯಪ್ಪ, ಶಿವಸ್ವಾಮಿ, ಚಂದ್ರಶೇಖರ್, ರಂಗಶೆಟ್ಟಿ, ಪರಮೇಶ್ವರ್, ಎಸ್.ಸಿದ್ದಪ್ಪ, ಮಲ್ಲೇಶ್, ಎಸ್.ವಿ. ಮಂಜುನಾಥ್ ಸೇರಿದಂತೆ ಪೂಜಾ ಸಮಿತಿಯ ಸದಸ್ಯರು, ಅಧ್ಯಕ್ಷರು, ವಲಯದ ಎಲ್ಲ ಸೇವಾ ಪ್ರತಿನಿಧಿಗಳು ಇದ್ದರು.