ದೇವಸ್ಥಾನ ಜೀರ್ಣೋದ್ಧಾರ, ರಸ್ತೆ ಅಭಿವೃದ್ಧಿಗೆ ಸಹಕಾರ

ಶಾಸಕ ಕೆ.ವೆಂಕಟೇಶ್ ಹೇಳಿಕೆ
bettadapura mla venkatesh
ಬೆಟ್ಟದಪುರ ಸಮೀಪದ ಕುಮಾರಿಕೊಪ್ಪಲು ಗ್ರಾಮದಲ್ಲಿ ನೂತನ ಸಮುದಾಯ ಭವನವನ್ನು ಶಾಸಕ ಕೆ.ವೆಂಕಟೇಶ್ ಉದ್ಘಾಟಿಸಿದರು. ಕೆ.ವಿ.ನಿತಿನ್ ವೆಂಕಟೇಶ್, ಸುಂದ್ರೇಶ್, ರಾಜಭೋವಿ, ಪುಟ್ಟಸ್ವಾಮಿಗೌಡ, ಪುನೀತ್ ಕುಮಾರ್, ಶಿವಣ್ಣಗೌಡ ಇದ್ದರು.
Published on: 

ಬೆಟ್ಟದಪುರ: ಗ್ರಾಮದ ದೇವಸ್ಥಾನ ಜೀರ್ಣೋದ್ಧಾರ ಹಾಗೂ ರಸ್ತೆ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಶಾಸಕ ಕೆ.ವೆಂಕಟೇಶ್ ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಕುಮಾರಿಕೊಪ್ಪಲು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸಮುದಾಯ ಭವನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಗ್ರಾಮಸ್ಥರ ಬೇಡಿಕೆಯಂತೆ ಸಮುದಾಯ ಭವನ ನಿರ್ಮಾಣಕ್ಕೆ ಈಗಾಗಲೇ ನೆರವು ನೀಡಿದ್ದೇನೆ. ಇದೀಗ ಲಕ್ಷ್ಮೀದೇವಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಗ್ರಾಮದ ಎರಡು ಕಿ.ಮೀ. ರಸ್ತೆ ನಿರ್ಮಾಣಕ್ಕೆ ಸಹಕಾರ ಕೋರಿದ್ದು, ಈ ಬೇಡಿಕೆಗಳನ್ನು ಈಡೇರಿಸಲು ಕ್ರಮ ವಹಿಸಲಾಗುವುದು. ಜನರು ನಮ್ಮ ಮೇಲೆ ಭರವಸೆ ಇಟ್ಟು ಅಭಿವೃದ್ಧಿ ಕಾರ್ಯಗಳಿಗೆ ಮನವಿ ಸಲ್ಲಿಸುತ್ತಿದ್ದಾರೆ. ಅವರ ನಿರೀಕ್ಷೆಯಂತೆ ಕೆಲಸ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಅದೇ ರೀತಿ ಮುಂದಿನ ದಿನಗಳಲ್ಲಿಯೂ ಗ್ರಾಮಸ್ಥರು ಸಹಕಾರ ಮತ್ತು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ತಾಲೂಕು ಆಶ್ರಯ ಮತ್ತು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ವಿ.ನಿತಿನ್ ವೆಂಕಟೇಶ್, ವಕೀಲರಾದ ಸುಂದ್ರೇಶ್, ಗ್ರಾಪಂ ಮಾಜಿ ಸದಸ್ಯ ರಾಜಭೋವಿ, ಮುಖಂಡರಾದ ಪುಟ್ಟಸ್ವಾಮಿಗೌಡ, ಪುನೀತ್ ಕುಮಾರ್, ಶಿವಣ್ಣಗೌಡ, ರಾಜಭೋವಿ, ಮಂಜಣ್ಣ, ಕೆ.ಎಸ್.ಬಾಲಕೃಷ್ಣ, ಈರಣ್ಣಭೋವಿ, ರಾಮಚಂದ್ರೇಗೌಡ, ಮುತ್ತುರಾಜು, ನಾಗರಾಜೇಗೌಡ, ಶ್ರೀನಿವಾಸ್, ಚಂದ್ರೇಶ್, ಚಂದ್ರು ಕುಮಾರ್, ಪೊಲೀಸ್ ರಘು, ಮಹೇಶ್, ಸಂಜು, ಅಭಿಷೇಕ್, ತಿಮ್ಮೇಗೌಡ, ಗೋವಿಂದೇಗೌಡ, ಧರಣೇಶ್, ತಮ್ಮಯ್ಯ, ರಾಜೇಶ್, ಜವರೇಗೌಡ, ಪುಟ್ಟಭೋವಿ, ಹನುಮಭೋವಿ, ಶಿವರಾಮೇಗೌಡ, ದೀಕ್ಷಿತ್, ಶಿವೇಶ್, ವಿಜೇಂದ್ರ, ಜಗದೀಶ್, ರಾಮಚಂದ್ರಭೋವಿ, ವೆಂಕಟೇಶ್, ಸ್ವಾಮಿ, ಗಿರೀಶ್ ಸೇರಿದಂತೆ ಗ್ರಾಮಸ್ಥರು ಇದ್ದರು.