ಜನರಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಿ

Develop the quality of being responsive to people.
ಬೆಟ್ಟದಪುರದಲ್ಲಿ ಸೇವಾ ಸಂಕಲ್ಪ ದಿನದ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಪಿರಿಯಾಪಟ್ಟಣ ಮಂಡಲ ಆಯೋಜಿಸಿದ್ದ ಆರೋಗ್ಯ, ಕಣ್ಣು ತಪಾಸಣೆ ಹಾಗೂ ರಕ್ತದಾನ ಶಿಬಿರ ಮತ್ತು ಜನಸೇವಾ ಕಾರ್ಯಕ್ರಮವನ್ನು ಸಂಸದ ಯದುವೀರ್ ಉದ್ಘಾಟಿಸಿದರು. ಕೂರ್ಗಲ್ಲು ಕೆಂಡಗಣ್ಣ, ಪರೀಕ್ಷಿತ್ ರಾಜ್, ಸವಿತಾ, ನಳಿನಿ, ಸುನೀಲ್ ಕುಮಾರ್, ಎಚ್.ಎಸ್.ರವಿ ಇತರರು ಇದ್ದರು.
ಬೆಟ್ಟದಪುರದಲ್ಲಿ ಸೇವಾ ಸಂಕಲ್ಪ ದಿನದ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಪಿರಿಯಾಪಟ್ಟಣ ಮಂಡಲ ಆಯೋಜಿಸಿದ್ದ ಆರೋಗ್ಯ, ಕಣ್ಣು ತಪಾಸಣೆ ಹಾಗೂ ರಕ್ತದಾನ ಶಿಬಿರ ಮತ್ತು ಜನಸೇವಾ ಕಾರ್ಯಕ್ರಮವನ್ನು ಸಂಸದ ಯದುವೀರ್ ಉದ್ಘಾಟಿಸಿದರು. ಕೂರ್ಗಲ್ಲು ಕೆಂಡಗಣ್ಣ, ಪರೀಕ್ಷಿತ್ ರಾಜ್, ಸವಿತಾ, ನಳಿನಿ, ಸುನೀಲ್ ಕುಮಾರ್, ಎಚ್.ಎಸ್.ರವಿ ಇತರರು ಇದ್ದರು.
Published on: 

ಬೆಟ್ಟದಪುರ: ತಂಬಾಕು ಬೆಳೆಗಾರರಿಗೆ ಈ ಬಾರಿ ಉತ್ತಮ ಬೆಲೆ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಸಂಬಂಧಿಸಿದವರ ಜತೆ ಚರ್ಚಿಸಲಾಗಿದ್ದು, ರೈತರ ಹಿತ ಕಾಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ಸೇವಾ ಸಂಕಲ್ಪ ದಿನದ ಅಂಗವಾಗಿ ಬಿಜೆಪಿ ಪಿರಿಯಾಪಟ್ಟಣ ಮಂಡಲ ಹಾಗೂ ಬೆಟ್ಟದಪುರ ಮಹಾಶಕ್ತಿ ಕೇಂದ್ರದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಆರೋಗ್ಯ, ನೇತ್ರ ತಪಾಸಣೆ, ರಕ್ತದಾನ ಶಿಬಿರ ಮತ್ತು ಜನಸೇವಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಗ್ರಾಮೀಣ ಭಾಗದ ಜನರ ಬಳಿಗೆ ಸೇವೆ ತಲುಪಿಸುವ ಉದ್ದೇಶದಿಂದ ಬಿಜೆಪಿ ಶಕ್ತಿ ಕೇಂದ್ರಗಳ ಮೂಲಕ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಸೇರಿ ಜನರ ಅಗತ್ಯಗಳಿಗೆ ಸ್ಪಂದಿಸುವುದು ಇದರ ಉದ್ದೇಶವಾಗಿದ್ದು, ಪಕ್ಷದ ಕಾರ್ಯಕರ್ತರು ರಾಜಕೀಯ ಚಟುವಟಿಕೆಗಳಿಗೆ ಸೀಮಿತವಾಗದೆ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಎಸ್‌ಐಆರ್ ಕಾನೂನುಬದ್ಧ: ಕಾನೂನುಬದ್ಧವಾಗಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಎಸ್‌ಐಆರ್ ಪ್ರಕ್ರಿಯೆ ಹೇಗೆ ನಡೆಯುತ್ತಿದೆ ಎಂಬುದು ಸಾರ್ವಜನಿಕರಿಗೆ ತಿಳಿದಿದೆ. ಇದು ಕೇವಲ ಅರ್ಜಿ ಸಲ್ಲಿಸುವ ಹಾಗೂ ಪರಿಶೀಲನೆ ನಡೆಸುವ ಕಾನೂನುಬದ್ಧ ಪ್ರಕ್ರಿಯೆಯಾಗಿದ್ದು, ಈ ಕುರಿತು ಅನಗತ್ಯ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ. ರಾಜ್ಯದಲ್ಲಿ ಬರ ಘೋಷಣೆಯಾಗಿರುವ ತಾಲೂಕುಗಳಲ್ಲಿ ಕೇಂದ್ರದಿಂದ ಆಗಮಿಸುವ ತಂಡಗಳು ಪರಿಸ್ಥಿತಿ ಪರಿಶೀಲಿಸಲಿದ್ದು, ವರದಿ ಆಧರಿಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಮಟ್ಟದಲ್ಲಿ ಅಗತ್ಯ ಕ್ರಮಗಳನ್ನು ರೂಪಿಸುವ ಸಾಧ್ಯತೆಯಿದೆ. ರೈತರು ಹಾಗೂ ಬರಪೀಡಿತ ಪ್ರದೇಶಗಳ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಯೋಧರು, ಆಶಾ ಕಾರ್ಯಕರ್ತರಿಗೆ ಗೌರವ: ಕಾರ್ಯಕ್ರಮದಲ್ಲಿ ಬೆಟ್ಟದಪುರದ ಸಮಾಜ ಸೇವಕ ಸುನೀಲ್ ಕುಮಾರ್ ಅವರು ನಿವೃತ್ತ ಯೋಧರು, ಹುತಾತ್ಮ ಯೋಧರ ಕುಟುಂಬದವರು ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಸಿಬ್ಬಂದಿಯನ್ನು ಸನ್ಮಾನಿಸಿ ಗೌರವಿಸಿದರು.

ಪಿರಿಯಾಪಟ್ಟಣ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾರ್ವಜನಿಕರು ಆರೋಗ್ಯ ತಪಾಸಣೆಗೆ ಒಳಗಾದರು. ಹಲವರು ರಕ್ತದಾನ ಶಿಬಿರದಲ್ಲೂ ಪಾಲ್ಗೊಂಡರು.

ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ರಾಜೇಂದ್ರ, ಕೂರ್ಗಲ್ಲು ಕೆಂಡಗಣ್ಣ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಪರೀಕ್ಷಿತ್ ರಾಜ್, ಸೇವಾ ಸಂಕಲ್ಪ ಉಸ್ತುವಾರಿ ಸವಿತಾ, ಮಹಿಳಾ ಅಧ್ಯಕ್ಷ ನಳಿನಿ, ಕಾರ್ಯದರ್ಶಿ ಸುನೀಲ್ ಕುಮಾರ್ ಬೆಟ್ಟದಪುರ, ಪ್ರದಾನ ಕಾರ್ಯದರ್ಶಿ ಎಚ್.ಎಸ್ ರವಿ, ನಗರ ಅಧ್ಯಕ್ಷ ರಮೇಶ್, ಮುಖಂಡರಾದ ಆರ್.ಟಿ ಸತೀಶ್, ರಾಜೇಗೌಡ, ಮೀನಾಕ್ಷಿ, ರವಿ, ಶುಭಗೌಡ, ಚನ್ನಕಲ್ ರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net