ಗ್ರಾಮಗಳಲ್ಲಿ ರಾಜ್ಯೋತ್ಸವ ನಿತ್ಯೋತ್ಸವವಾಗಲಿ

ಪ್ರಾಂಶುಪಾಲ ಮಹೇಶ್ ಆಶಯ
ಹೊನ್ನಾಪುರ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ಬೆಟ್ಟದಪುರ ಸಮೀಪದ ಹೊನ್ನಾಪುರ ಗ್ರಾಮದಲ್ಲಿ ವಿನಾಯಕ ಗೆಳೆಯರ ಬಳಗದಿಂದ ಶನಿವಾರ ಕನ್ನಡ ರಾಜ್ಯೋತ್ಸವ ಆಯೋಜಿಸಲಾಗಿತ್ತು. ಶಿವಣ್ಣ, ಶಾಂತರಾಜು, ಹರೀಶ್, ಮಂಜುನಾಥ್, ಸ್ವಾಮಿ ಇತರರು ಇದ್ದರು.
Published on: 

ಬೆಟ್ಟದಪುರ: ಗ್ರಾಮೀಣ ಭಾಗಗಳಲ್ಲಿ ಕನ್ನಡ ಭಾಷೆ, ನಾಡು-ನುಡಿಯ ಮೇಲಿನ ಅಭಿಮಾನ ಹೆಚ್ಚಾಗಲಿ, ರಾಜ್ಯೋತ್ಸವ ನಿತ್ಯೋತ್ಸವವಾಗಲಿ ಎಂದು ಕಣಗಾಲು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ್ ಆಶಿಸಿದರು.

ಸಮೀಪದ ಹೊನ್ನಾಪುರ ಗ್ರಾಮದಲ್ಲಿ ವಿನಾಯಕ ಗೆಳೆಯರ ಬಳಗ ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಯುವಕರು ಒಗ್ಗಟ್ಟಿನಿಂದ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿರುವುದು ಶ್ಲಾಘನೀಯ ಎಂದರು.

ಸಮಾಜ ಸೇವಕಿ ಅನುಪಮಾ ಆರ್ಯ ಕೊಪ್ಪ ಮಾತನಾಡಿದರು.

ಬಹುಮಾನ ವಿತರಣೆ:

ಕನ್ನಡ ರಾಜ್ಯೋತ್ಸವದ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಕಾರ್ಯಕ್ರಮದಲ್ಲಿ ಟ್ರೋಫಿ ಹಾಗೂ ಬಹುಮಾನ ವಿತರಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಮುಖಂಡರು ಹಾಗೂ ಗಣ್ಯರು ಧ್ವಜಾರೋಹಣ ನೆರವೇರಿಸಿದರು. ಶಾಲಾ ಮಕ್ಕಳು ನಾಡಗೀತೆ ಹಾಡುವ ಮೂಲಕ ಗಮನ ಸೆಳೆದರು.

ಗ್ರಾಮದ ಯಜಮಾನ ಶಿವಣ್ಣ, ನಿವೃತ್ತ ಯೋಧ ಶಾಂತರಾಜು, ಗ್ರಾಪಂ ಮಾಜಿ ಅಧ್ಯಕ್ಷ ಹರೀಶ್, ಮುಖ್ಯಶಿಕ್ಷಕ ಮಂಜುನಾಥ್, ಗ್ರಾಪಂ ಮಾಜಿ ಸದಸ್ಯರಾದ ಸ್ವಾಮಿ, ಜನ ಕಲ್ಯಾಣ ವಸತಿ ಶಾಲೆ ಮುಖ್ಯಶಿಕ್ಷಕ ವಿಜಯ್ ನಾಯಕ, ಡೇರಿ ಕಾರ್ಯದರ್ಶಿ ರವಿ, ನಿವೃತ್ತ ಪಿಡಿಒ ಶಿವಣ್ಣ, ಮುಖಂಡರಾದ ಈರಪ್ಪ, ಮಂಜುನಾಥ್, ಆಂಜನೇಯ, ಜಯರಾಮ್, ರಾಜಣ್ಣ, ಪುಟ್ಟಸ್ವಾಮಿ, ಜಲೆಂದ್ರ, ಹನುಮೇಗೌಡ, ತಿಮ್ಮಯ್ಯ ಇತರರು ಇದ್ದರು.