ಗಣಪತಿ, ಮಾರಮ್ಮ ದೇಗುಲ ವಾರ್ಷಿಕೋತ್ಸವ

ಬನ್ನೂರಿನ ಬಿಸಿಲು ಮಾರಮ್ಮ ಹಾಗೂ ಗಣಪತಿ ದೇವಾಲಯ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಕಿಟ್ಟಪ್ಪ ರಮೇಶ್, ಬಿ.ಸಿ.ಪಾರ್ಥಸಾರಥಿ, ಸೋಮು ಇತರರಿದ್ದರು.
ಬನ್ನೂರಿನ ಬಿಸಿಲು ಮಾರಮ್ಮ ಹಾಗೂ ಗಣಪತಿ ದೇವಾಲಯ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಕಿಟ್ಟಪ್ಪ ರಮೇಶ್, ಬಿ.ಸಿ.ಪಾರ್ಥಸಾರಥಿ, ಸೋಮು ಇತರರಿದ್ದರು.
Published on: 

ಬನ್ನೂರು: ಪಟ್ಟಣದ ಮೈಸೂರು- ಮಳವಳ್ಳಿ ಮುಖ್ಯ ರಸ್ತೆಯಲ್ಲಿರುವ ಬಿಸಿಲು ಮಾರಮ್ಮ ಹಾಗೂ ಕೆರೆ ಏರಿ ಗಣಪತಿ ದೇವಾಲಯಲ್ಲಿ ಶನಿವಾರ ವಾರ್ಷಿಕ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.

ಮುಂಜಾನೆಯಿಂದಲೇ ದೇವರಿಗೆ ವಿಶೇಷ ಪೂಜೆ, ಹೋಮ-ಹವನ ನಡೆದವು. ಬಿಸಿಲು ಮಾರಮ್ಮ, ಗಣಪತಿ ದೇವರ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸುತ್ತಲಿನ ಗ್ರಾಮಗಳಿಂದ ಭಕ್ತರು ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು. ಮಧ್ಯಾಹ್ನ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಕಿಟ್ಟಪ್ಪ ರಮೇಶ್, ಬಿ.ಸಿ.ಪಾರ್ಥಸಾರಥಿ, ಲಕ್ಷ್ಮೀನಾರಾಯಣ್, ಸೋಮು, ಅರ್ಚಕರು ಇದ್ದರು.