ಕನ್ನಡಕ್ಕೆ ವಿಷ್ಣುವರ್ಧನ್ ಕೊಡುಗೆ ಅಪಾರ: ನಗರ ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್‌ಗೌಡ ಅಭಿಮತ

ಪಾತಿ ಫೌಂಡೇಷನ್‌ನಿಂದ ಡಾ.ವಿಷ್ಣುವರ್ಧನ್ ಅವರ 76ನೇ ಜನ್ಮದಿನ ಆಚರಣೆ
Vishnuvardhan's contribution to Kannada is immense: Prashant Gowda Abhima, former member of the Municipal Corporation
ಡಾ. ವಿಷ್ಣುವರ್ಧನ್ ಅವರ 76ನೇ ಜನ್ಮದಿನ ಅಂಗವಾಗಿ ಪಾತಿ ಫೌಂಡೇಷನ್‌ನಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಸನ್ಮಾನಿಸಲಾಯಿತು. ಪ್ರಶಾಂತ್‌ಗೌಡ, ಕೆ.ರಘುರಾಮ ವಾಜಪಾಯಿ, ಡಿ.ಟಿ.ಪ್ರಕಾಶ್, ಕೆ.ಬಿ.ಲಿಂಗರಾಜು, ಎಂ.ಡಿ.ಪಾರ್ಥಸಾರಥಿ, ಜಗದೀಶ್ ಇತರರು ಇದ್ದರು.
Published on: 

ಮೈಸೂರು: ಕನ್ನಡ ನೆಲ, ಜಲ, ಭಾಷೆಯ ವಿಚಾರಕ್ಕೆ ಧಕ್ಕೆ ಬಂದಾಗ ಧ್ವನಿ ಎತ್ತುವ ಮೂಲಕ ಡಾ.ವಿಷ್ಣವರ್ಧನ್ ಮೊದಲ ಸಾಲಿನಲ್ಲಿ ನಿಲ್ಲುತ್ತಿದ್ದರು ಎಂದು ನಗರಪಾಲಿಕೆ ಮಾಜಿ ಸದಸ್ಯ ಪ್ರಶಾಂತ್‌ಗೌಡ ಹೇಳಿದರು.

ಪಾತಿ ಫೌಂಡೇಷನ್‌ನಿಂದ ಡಾ.ವಿಷ್ಣುವರ್ಧನ್ ಅವರ 76ನೇ ಜನ್ಮದಿನ ಅಂಗವಾಗಿ ಕುವೆಂಪುನಗರದ ರಮಣಶ್ರೀ ಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ವಿಷ್ಣುವರ್ಧನ್ ಅಭಿನಯಿಸಿರುವ ಚಿತ್ರಗಳ ಸಂಗೀತ ಸಂಜೆ ಹಾಗೂ ವಿವಿಧ ಕ್ಷೇತ್ರದ ಸಾಧನೆಗೈದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೂಲತಃ ಮೈಸೂರಿನವರಾದರೂ ಕೂಡ ವಿಶ್ವದೆಲ್ಲೆಡೆ ಜನಪ್ರಿಯರಾಗಿದ್ದಾರೆ. ಅವರ ಪ್ರತಿಯೊಂದು ಚಿತ್ರ ಕೌಟುಂಬಿಕ ಪ್ರಧಾನವಾಗಿದ್ದು, ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದವು. ಜತೆಯಲ್ಲೇ ಚಿತ್ರರಂಗದಲ್ಲಿ ಹೊಸ ಆಯಾಮ ಸೃಷ್ಟಿಸುವಲ್ಲಿ ಕಲಾವಿದರಿಗೆ ಮಾದರಿಯಾಗಿತ್ತು. ಕನ್ನಡ ನೆಲ ಜಲ ಭಾಷೆಯ ವಿಚಾರಕ್ಕೆ ಧಕ್ಕೆ ಬಂದಾಗ ಧ್ವನಿ ಎತ್ತುತ್ತಿದ್ದ ಮಹಾನ್ ವ್ಯಕ್ತಿ, ಕನ್ನಡಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ಬಣ್ಣಿಸಿದರು.

ಹಿರಿಯ ಸಮಾಜ ಸೇವಕ ಕೆ. ರಘುರಾಮ ವಾಜಪೇಯಿ ಮಾತನಾಡಿ, ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಕಲಾವಿದ ವಿಷ್ಣುವರ್ಧನ್ ಯುವಜನರಲ್ಲಿ ಭಾಷಾಭಿಮಾನ ಮತ್ತು ದೇಶಾಭಿಮಾನ ಮೂಡಿಸುವಂತಹ ಸದಭಿರುಚಿ ಚಿತ್ರಗಳಲ್ಲಿ ನಟಿಸಿ ಜನಮನ್ನಣೆ ಗಳಿಸಿದ್ದ ಅವರ ಜೀವನ ಕಿರಿಯ ನಟರಿಗೆ ಮಾದರಿ ಎಂದರು.

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ.ಪ್ರಕಾಶ್, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ.ಲಿಂಗರಾಜು, ಪಾತಿ ಫೌಂಡೇಷನ್ ಅಧ್ಯಕ್ಷ ಎಂ.ಡಿ.ಪಾರ್ಥಸಾರಥಿ, ನಗರಪಾಲಿಕ ಮಾಜಿ ಸದಸ್ಯ ಜಗದೀಶ್, ವಕೀಲರಾದ ಮಧ್ವರಾಜ್, ಶಿವರಾಜ್, ಶಶಿಕುಮಾರ್,ಕೃಷ್ಣಮೂರ್ತಿ, ಮಹಾದೇವ್, ಗಾಯಕರಾದ ರೇವಣ್ಣ, ಕೃಷ್ಣಮೂರ್ತಿ, ಭಾವನಾ ,ಮಹೇಶ್, ಮಂಜುನಾಥ್, ಬಾಲು ಇತರರು ಇದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜಯಲಕ್ಷ್ಮೀ ಅಯ್ಯಂಗಾರ್ (ಸಾಮಾಜಿಕ ಕ್ಷೇತ್ರ), ಅಲೋಕ್ ಆರ್. ಜೈನ್(ಕ್ರೀಡಾ ಕ್ಷೇತ್ರ), ಮಧುಸೂದನ್ (ಧಾರ್ಮಿಕ ಕ್ಷೇತ್ರ), ಕುಮಾರ ಆರಾಧ್ಯ (ಸಹಕಾರಿ ಕ್ಷೇತ್ರ), ಕುಮಾರ್ (ಸಾಮಾಜಿಕ ಕ್ಷೇತ್ರ), ಗಗನ್‌ಗೌಡ (ಸಂಘಟನಾ ಕ್ಷೇತ್ರ), ಅರ್ಜುನ್ (ಕಲಾ ಕ್ಷೇತ್ರ), ಅಮೃತಾ ಸತೀಶ್ (ಕ್ರೀಡೆ ಹಾಗೂ ಸಂಗೀತ ಕ್ಷೇತ್ರ) ಅವರಿಗೆ ವಿಷ್ಣುವರ್ಧನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net