ಆಸ್ತಿ ವಿಚಾರಕ್ಕಾಗಿ ಜಗಳ ಕೊಲೆಯಲ್ಲಿ ಅಂತ್ಯ

ಕುಂಬಾರಕೊಪ್ಪಲಿನ ಎನ್.ಬೋರಪ್ಪ(50) ಮೃತರು. ತಮ್ಮ ನಾಗೇಂದ್ರ ಕೊಲೆ ಆರೋಪಿ.
ಆಸ್ತಿ ವಿಚಾರಕ್ಕಾಗಿ ಜಗಳ ಕೊಲೆಯಲ್ಲಿ ಅಂತ್ಯ
ಕ್ರೈಮ್ Dispute over property ends in murder
Published on: 

ಮೈಸೂರು: ಕುವೆಂಪುನಗರದ ಅನಿಕೇತನ ರಸ್ತೆಯಲ್ಲಿ ಆಸ್ತಿ ವಿಚಾರಕ್ಕೆ ನಡೆದ ಜಗಳ ಅಣ್ಣನ ಕೊಲೆಯಲ್ಲಿ ಅಂತ್ಯ ಕಂಡಿದೆ.

ಕುಂಬಾರಕೊಪ್ಪಲಿನ ಎನ್.ಬೋರಪ್ಪ(50) ಮೃತರು. ಇವರ ತಮ್ಮ ನಾಗೇಂದ್ರ ಕೊಲೆ ಆರೋಪಿ.

ಬೋರಪ್ಪ ಅವರ ತಾಯಿ ಮಹಾಲಕ್ಷ್ಮಮ್ಮ ಹೆಸರಿನಲ್ಲಿ ಅನಿಕೇತನ ರಸ್ತೆಯಲ್ಲಿ ಮನೆ ಇದೆ. +

ಭೋಗ್ಯಕ್ಕೆ ಕೊಡಲಾಗಿದ್ದ ಈ ಮನೆಯನ್ನು ಬೋರಪ್ಪ ಬಿಡಿಸಿಕೊಂಡು ಸ್ವಚ್ಛತಾ ಕಾರ್ಯ ಮಾಡುತ್ತಿದ್ದರು. ಇಲ್ಲಿಗೆ ಬಂದ ತಮ್ಮ ನಾಗೇಂದ್ರ, ಆ ಮನೆಯಲ್ಲಿ ತನಗೂ ಭಾಗ ಬರಬೇಕೆಂದು ಗಲಾಟೆ ಮಾಡಿ, ಮಾತಿಗೆ ಮಾತು ಬೆಳೆದು ಬೋರಪ್ಪನ ಮೇಲೆ ಹಲ್ಲೆ ನಡೆಸಿದ್ದಾನೆ.

ಗಾಯಗೊಂಡ ಇವರನ್ನು ತಕ್ಷಣ ಅವರ ಸಂಬಂಧಿಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದರು.

ಮೃತ ಬೋರಪ್ಪ ಅವರ ಪತ್ನಿ ಎನ್.ರಮ್ಯಾ ನೀಡಿದ ದೂರಿನ ಅನ್ವಯ ಕುವೆಂಪುನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.