ಆಧುನಿಕತೆಗೆ ಸಂಸ್ಕೃತಿ, ಪರಂಪರೆ ಮರೆ

ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಅಭಿಪ್ರಾಯ
 ವಿಶ್ವಕರ್ಮ ಪೂಜಾ ಮಹೋತ್ಸವ
ಪಿರಿಯಾಪಟ್ಟಣದ ಡಿ.ದೇವರಾಜ ಅರಸು ಭವನದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ಶ್ರೀ ಜ್ಞಾನಗನ ಸ್ವಾಮೀಜಿ, ಪಿ.ಸುಜ್ಞಾನಮೂರ್ತಿ, ಈಶ್ವರ್ ಇದ್ದರು.
Published on: 

ಪಿರಿಯಾಪಟ್ಟಣ: ಭಾರತದಲ್ಲಿ ಹಿಂದೂ ಧರ್ಮ ನೆಲೆಗೆ ವಿಶ್ವಕರ್ಮ ಸಮಾಜದ ಕೊಡುಗೆಯೂ ಪ್ರಮುಖವಾಗಿದೆ ಕಾರಣ ಎಂದು ಅರೇಮಾದನಹಳ್ಳಿ ಮಠದ ವಿಶ್ವಕರ್ಮ ಜಗದ್ಗುರು ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಡಿ.ದೇವರಾಜ ಅರಸು ಭವನದಲ್ಲಿ ತಾಲೂಕು ವಿಶ್ವಕರ್ಮ ಸಮಾಜ ಹಾಗೂ ವಿಶ್ವಕರ್ಮ ಮಹಿಳಾ ಸಮಾಜದಿಂದ ಇತ್ತೀಚೆಗೆ ಆಯೋಜಿಸಿದ್ದ ವಿಶ್ವಕರ್ಮ ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ದೇಶದಲ್ಲಿರುವ ಗುಡಿ, ಗೋಪುರಗಳು, ಶಿಲ್ಪಕಲೆ ಕೆತ್ತನೆಗಳು ವಿದೇಶಿಗರನ್ನು ಆಕರ್ಷಿಸುತ್ತವೆ ಎಂದರೆ ಅಲ್ಲಿ ಪಂಚ ಕಸಬುಗಳ ನೇತಾರ ವಿಶ್ವಕರ್ಮನ ಪರಿಶ್ರಮವಿದೆ. ನಮ್ಮ ಹಿಂದೂ ಸಂಸ್ಕೃತಿ ವೈದಿಕ ನೆಲೆಗಟ್ಟಿನ ಮೇಲೆ ನಿಂತಿದೆ. ವೈದಿಕ ಹಾಗೂ ಶಿಲ್ಪಕಲೆ ಎರಡನ್ನು ಅಳವಡಿಸಿಕೊಂಡಿರುವ ಏಕೈಕ ಸಮಾಜವೇ ವಿಶ್ವಕರ್ಮ ಸಮಾಜ ಎಂದು ಪ್ರಶಂಸಿಸಿದರು.

ಆಧುನಿಕತೆಗೆ ಮಾರುಹೋಗಿ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಮಕ್ಕಳ ಮುಂದಿನ ಭವಿಷ್ಯಕ್ಕೋಸ್ಕರ ನಮ್ಮಲ್ಲಿರುವ ಧಾರ್ಮಿಕ ಕೇಂದ್ರಗಳನ್ನು ರಕ್ಷಣೆ ಮಾಡಿಕೊಳ್ಳುವಲ್ಲಿ ನಾವು ಹೋರಾಟ ಮಾಡಬೇಕಿದೆ. ಹಿಂದೂ ಧರ್ಮ ಸನಾತನ ಸಂಸ್ಕೃತಿಯ ಶಿಲ್ಪ ಕಲೆಗಳ ಮೇಲೆ ನಿಂತಿದೆ ಎಂದರು.

ವಿಶ್ವಕರ್ಮ ಮೂಲಮಠದ ಕಿರಿಯ ಶ್ರೀಗಳಾದ ಜ್ಞಾನಗನ ಸ್ವಾಮೀಜಿ ಮಾತನಾಡಿ, ವಿಶ್ವಕರ್ಮರು ಜ್ಞಾನದ ವಿಷಯದಲ್ಲಿ ಶ್ರೀಮಂತರು. ದೇಶಕ್ಕೆ ನಿಸ್ವಾರ್ಥ ಕೊಡುಗೆ ನೀಡಿದ ಸಮಾಜವೆಂದರೆ ಅದು ವಿಶ್ವಕರ್ಮ ಸಮಾಜ. ಇಂದು ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವಲ್ಲಿ ಸಮಾಜ ಹೋರಾಟ ಮಾಡಬೇಕಾದ ಸ್ಥಿತಿ ಬಂದಿದೆ. ನಾವೆಲ್ಲ ಒಟ್ಟು ಸೇರಿ ಬಲಪ್ರದರ್ಶನ ಮಾಡಬೇಕು ಎಂದರು.

ವಿಶ್ವಕರ್ಮ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಪಿ.ಸುಜ್ಞಾನಮೂರ್ತಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿರುವ ಮೂಲ ಕಸುಬುಗಳನ್ನ ನಾವೇ ಮೂಲೆ ಗುಂಪು ಮಾಡುತ್ತಿದ್ದೇವೆ. ನಮಗೆ ಬಣ್ಣದ ರಾಜಕೀಯ ಬೇಡ. ಬದುಕಿನ ರಾಜಕೀಯ ಬೇಕು ಎಂದು ಹೇಳಿದರು.

ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುನಲ್ಲಿ ಹೆಚ್ಚು ಅಂಕ ಪಡೆದ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ವಿಶ್ವಕರ್ಮ ಸಮಾಜದ ಮುಖಂಡ ಈಶ್ವರ್, ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ತಿರುನೀಲಕಂಠ ಸಮಾಜದ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಶಾಸಕ ಕೆ.ವೆಂಕಟೇಶ್ ಅವರಿಗೆ ನೀಡಿದರು.

ಮೈಸೂರು ಜಿಲ್ಲಾ ಕರಕುಶಲಕರ್ಮಿಗಳ ಸಂಘದ ಅಧ್ಯಕ್ಷ ಬನ್ನೂರು ನಾಗರಾಜ್, ಕುಶಾಲನಗರ ವಿಶ್ವಕರ್ಮ ಸಮಾಜದ ಅಧ್ಯಕ್ಷ ದುರ್ಗೇಶ್, ಹುಣಸೂರು ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಕುಮಾರ್, ಪಿರಿಯಾಪಟ್ಟಣ ತಾಲೂಕು ವಿಶ್ವಕರ್ಮ ಸಂಘದ ಗೌರವಾಧ್ಯಕ್ಷ ಅಣ್ಣಯ್ಯಚಾರ್, ಉಪಾಧ್ಯಕ್ಷ ರಮೇಶ್, ಕಾರ್ಯದರ್ಶಿ ಮನು , ಖಜಾಂಚಿ ಯೋಗೇಶ್, ಪುರೋಹಿತ್ ವಿರೂಪಾಕ್ಷ, ಹರೀಶ್, ತಾಲೂಕು ವಿಶ್ವಕರ್ಮ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಾ ಮಹದೇವ್, ಉಪಾಧ್ಯಕ್ಷೆ ಪುಷ್ಪಾಸ್ವಾಮಿ, ಕಾರ್ಯದರ್ಶಿ ಸುಂದರಮ್ಮ ತ್ಯಾಗರಾಜ್, ಖಜಾಂಚಿ ಪುಷ್ಪಲತಾ ಮೂರ್ತಿ, ರತ್ನಾ ಸತೀಶ್, ಜಿಲ್ಲಾ ಪದಾಧಿಕಾರಿಗಳಾದ ಮಂಡ್ಯ ಬಸವರಾಜ್, ಹರವೆ ಲೋಕೇಶ್, ಲೋಕಪಾಲಯ್ಯ, ನಾಗರಾಜ್, ಹುಣಸೂರು ಶ್ರೀನಿವಾಸ್, ಕಂದೇಗಾಲ ಸ್ವಾಮಿ, ನಟೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net