ಯುನಿಟಿ ಮಾಲ್ ನಿರ್ಮಾಣ ವಿಚಾರದಲ್ಲಿ ಗೊಂದಲ ಇಲ್ಲ: ಪ್ರಮೋದಾದೇವಿ ಒಡೆಯರ್

ಪ್ರಮೋದಾದೇವಿ ಒಡೆಯರ್
ಪ್ರಮೋದಾದೇವಿ ಒಡೆಯರ್
Published on

ಪ್ರಮುಖ ಮುಖ್ಯಾಂಶಗಳು

  • ವಿವಾದ ಬಹಳ ದಿನಗಳಿಂದ ಇದೆ
  • ವಿವಾದ ಇರುವಾಗ ಯುನಿಟಿ ಮಾಲ್ ನಿರ್ಮಾಣ ಆ ಜಾಗದಲ್ಲಿ ಬೇಡ
ಮೈಸೂರುಯುನಿಟಿ ಮಾಲ್ ನಿರ್ಮಾಣ ವಿಚಾರದಲ್ಲಿ ಏನೂ ಗೊಂದಲ ಇಲ್ಲ. ಮಾಲ್ ನಿರ್ಮಾಣಕ್ಕೆ ನನ್ನದೇನು ವಿರೋಧ ಇಲ್ಲ. ಆದರೆ ಆ ಜಾಗದ ವಿಚಾರ ಇನ್ನೂ ನ್ಯಾಯಾಲಯದಲ್ಲಿದೆ. ಈ ಸಂದರ್ಭದಲ್ಲಿ ಅಲ್ಲಿ ಕಾಮಗಾರಿ ಆರಂಭಿಸುವುದು ಬೇಡ ಎಂದಿದ್ದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದರು.
ಸದ್ಯ ಪ್ರಕರಣ ನ್ಯಾಯಾಲಯದಲ್ಲಿದೆ. ಅದರ ಬಗ್ಗೆ ನಾನು ಈಗಾಗಲೇ ಪತ್ರಿಕಾ ಪ್ರಕಟಣೆ ಹೊರಡಿಸಿದ್ದೇನೆ. ಅಲ್ಲೇ ನನ್ನ ಸ್ಪಷ್ಟನೆಯನ್ನೂ ಕೊಟ್ಟಿದ್ದೇನೆ. ಯಾವುದೇ ಗೊಂದಲ ಇಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡಿ ಸ್ಪಷ್ಟಪಡಿಸಿದರು. 
ಈ ಹಿಂದೆಯೇ ಕೋರ್ಟ್‌ನಲ್ಲಿ ಮೇಲ್ಮನವಿ ಹೋಗಲಾಗಿತ್ತು. ಸುಮಾರು 15 ದಿನಗಳ ಹಿಂದೆಯೇ ತಡೆಯಾಜ್ಞೆ ಆಗಿದೆ. ನಾನು ನಿನ್ನೆ ಮೊನ್ನೆ ಆಕ್ಷೇಪ ಎತ್ತಿಲ್ಲ. ಇದು ಹಲವು ದಿನಗಳಿಂದ ನಡೆಯುತ್ತಿದೆ. ಆದರೆ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ ಎಂದರು.
ಶಾಮನೂರರ ನಿಧನಕ್ಕೆ ಸಂತಾಪ: 
ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಪ್ರಮೋದಾದೇವಿ ಒಡೆಯರ್ ಸಂತಾಪ ಸೂಚಿಸಿದ್ದಾರೆ. ನಾನು ಕೂಡ ಅವರನ್ನು ಒಂದೆರೆಡು ಬಾರಿ ಭೇಟಿಯಾಗಿದ್ದೆ. ಸಜ್ಜನಿಕೆಯಿಂದ ಮಾತನಾಡಿಸಿದ್ದರು. ಅವರ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net