ಹರಿವಿದ್ಯಾಲಯ ಆಯೋಜಿಸಿದ್ದ ಜಿಎಸ್‌ಎಸ್ ವಿದ್ಯಾರ್ಥಿ ರನ್-2026 ಯಶಸ್ವಿ

Prizes were distributed to the winning athletes in the ‘GSS Student Run’. Srihari Dwarkanath, Dr. N. Chandrashekhar, Srinivas Hosamane, A.R.R. Bhagwan, N.B. Parasivamurthy were present.
‘ಜಿಎಸ್‌ಎಸ್ ವಿದ್ಯಾರ್ಥಿ ರನ್’ನಲ್ಲಿ ಗೆಲುವು ಪಡೆದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು. ಶ್ರೀಹರಿ ದ್ವಾರಕನಾಥ್, ಡಾ.ಎನ್.ಚಂದ್ರಶೇಖರ್, ಶ್ರೀನಿವಾಸ ಹೊಸಮನೆ, ಎ.ಆರ್.ಆರ್.ಭಗವಾನ್, ಎನ್.ಬಿ. ಪರಶಿವಮೂರ್ತಿ ಇದ್ದರು.
Published on: 

ಮೈಸೂರು: ವಿದ್ಯಾರ್ಥಿಗಳಲ್ಲಿ ಕ್ರೀಡಾಸ್ಫೂರ್ತಿ, ದೈಹಿಕ ಸದೃಢತೆ ಹಾಗೂ ಆರೋಗ್ಯದ ಅರಿವು ಮೂಡಿಸುವ ಉದ್ದೇಶದಿಂದ ಬೋಗಾದಿಯ ಹರಿವಿದ್ಯಾಲಯ ಆಯೋಜಿಸಿದ್ದ 5ನೇ ಆವೃತ್ತಿಯ ‘ಜಿಎಸ್‌ಎಸ್ ವಿದ್ಯಾರ್ಥಿ ರನ್-2026’ ಯಶಸ್ವಿಯಾಗಿ ನಡೆಯಿತು.

ಹರಿವಿದ್ಯಾಲಯದ ಆವರಣದಲ್ಲಿ ಇತ್ತೀಚೆಗೆ ನಡೆದ ಓಟದಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. 1, 2 ಹಾಗೂ 3 ಕಿ.ಮೀ. ವಿಭಾಗಗಳಲ್ಲಿ ವಿದ್ಯಾರ್ಥಿಗಳು ಓಟದಲ್ಲಿ ಭಾಗವಹಿಸಿ ಕ್ರೀಡಾಸ್ಫೂರ್ತಿ ಪ್ರದರ್ಶಿಸಿದರು.

2 ಮತ್ತು 3 ಕಿ.ಮೀ. ಓಟದ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಕ್ರಮವಾಗಿ 3,000 ರೂ., 2,000 ರೂ. ಹಾಗೂ 1,000 ರೂ. ನಗದು ಬಹುಮಾನ ನೀಡಲಾಯಿತು. ನಾಲ್ಕು, ಐದು ಮತ್ತು ಆರನೇ ಸ್ಥಾನ ಪಡೆದ ಸ್ಪರ್ಧಿಗಳಿಗೆ ಜಿಆರ್‌ಎಸ್ ವತಿಯಿಂದ ಎಂಟ್ರಿ ಪಾಸ್‌ಗಳನ್ನು ವಿತರಿಸಲಾಯಿತು. 1 ಕಿ.ಮೀ. ಓಟದಲ್ಲಿ ಭಾಗವಹಿಸಿದವರಿಗೆ ಆರನೇ ಸ್ಥಾನದವರೆಗೆ ಆಕರ್ಷಕ ಉಡುಗೊರೆ ನೀಡಿ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮಕ್ಕೆ ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಹಾಗೂ ಮರಿಮಲ್ಲಪ್ಪ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎನ್.ಬಿ. ಪರಶಿವಮೂರ್ತಿ ಚಾಲನೆ ನೀಡಿದರು. ಯೋಗಾತ್ಮ ಶ್ರೀಹರಿ ದ್ವಾರಕನಾಥ್ ಹಾಗೂ ಆದಿತ್ಯ ಆಸ್ಪತ್ರೆಯ ಅಧ್ಯಕ್ಷ ಡಾ.ಎನ್.ಚಂದ್ರಶೇಖರ್, ಹರಿವಿದ್ಯಾಲಯದ ಅಧ್ಯಕ್ಷ ಶ್ರೀನಿವಾಸ ಹೊಸಮನೆ ಹಾಗೂ ಕಾರ್ಯದರ್ಶಿ ಎ.ಆರ್.ಆರ್. ಭಗವಾನ್ ಉಪಸ್ಥಿತರಿದ್ದರು.

ಓಟದ ಕಾರ್ಯಕ್ರಮದ ಜತೆಗೆ ಆಯೋಜಿಸಿದ್ದ ಸೂಪರ್ ಬೈಕ್ ಪ್ರದರ್ಶನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಗಮನ ಸೆಳೆಯಿತು. ಬೈಕ್‌ಗಳ ಪ್ರದರ್ಶನ ವೀಕ್ಷಿಸಿದ ವಿದ್ಯಾರ್ಥಿಗಳಲ್ಲಿ ವಿಶೇಷ ಕುತೂಹಲ ಹಾಗೂ ಸಂಭ್ರಮ ಮನೆಮಾಡಿತ್ತು.

ಸೂಪರ್‌ವೇವ್ 365ರ ಸುಮನ್ ನೋವಾ, ಸುಶನ್, ಆಡಿಟರ್ ಪುರುಷೋತ್ತಮ್ ಕೆ., ಸುಮೇರ್ ಸ್ಪೈಸ್‌ನ ಸತೀಶ್ ಎಂ.ಎಸ್., ಎಸ್‌ಎಲ್‌ಡಿ ಡ್ಯಾನ್ಸ್ ಸ್ಟುಡಿಯೋ, ಜುಂಬಾ ಫಿಟ್ನೆಸ್‌ನ ರಾಘವ್ ಬಿ.ಎಸ್., ಮೈಸೂರು ಜಿಲ್ಲಾ ಅಮೆಚೂರ್ ಯೋಗ ಸ್ಪೋರ್ಟ್ಸ್ ಫೆಡರೇಷನ್ ಅಧ್ಯಕ್ಷೆ ಗೀತಾ ಕುಮಾರ್ ಹಾಗೂ ಜೀತು ಫೋಟೋಗ್ರಫಿಯ ವೀರೇಶ್ ಎಸ್. ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.