ಕ್ಯಾನ್ಸರ್‌ಪೀಡಿತ ಮಹಿಳಾ ರೋಗಿಗೆ ಶಾಸಕ ನೆರವು

ಹುಣಸೂರು ನಗರದ ಅಂಬೇಡ್ಕರ್ ಭವನದಲ್ಲಿ ಕ್ಯಾನ್ಸರ್ ಪೀಡಿತ ದಲಿತ ಮಹಿಳೆಯ ಚಿಕಿತ್ಸೆಗೆ ಅಗತ್ಯ ಆರ್ಥಿಕ ಸಹಾಯವನ್ನು  ಶಾಸಕ ಜಿ.ಡಿ.ಹರೀಶ್‌ಗೌಡ ನೀಡಿದರು. ನಿಂಗರಾಜ ಮಲ್ಲಾಡಿ, ಕುಮಾರ ಇತರರಿದ್ದರು.
ಹುಣಸೂರು ನಗರದ ಅಂಬೇಡ್ಕರ್ ಭವನದಲ್ಲಿ ಕ್ಯಾನ್ಸರ್ ಪೀಡಿತ ದಲಿತ ಮಹಿಳೆಯ ಚಿಕಿತ್ಸೆಗೆ ಅಗತ್ಯ ಆರ್ಥಿಕ ಸಹಾಯವನ್ನು ಶಾಸಕ ಜಿ.ಡಿ.ಹರೀಶ್‌ಗೌಡ ನೀಡಿದರು. ನಿಂಗರಾಜ ಮಲ್ಲಾಡಿ, ಕುಮಾರ ಇತರರಿದ್ದರು.
Published on
ಹುಣಸೂರು : ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ದಲಿತ ಮಹಿಳೆ ಪುಟ್ಟಸಾವಿತ್ರಿ ಅವರ ಚಿಕಿತ್ಸೆಗೆ ಶಾಸಕ ಜಿ.ಡಿ.ಹರೀಶ್‌ಗೌಡ ಧನಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದರು. 
ನಗರದ ಅಂಬೇಢ್ಕರ್ ಭವನದಲ್ಲಿ ಸಹಾಯಕ್ಕಾಗಿ ದಲಿತ ಸಂಘರ್ಷ ಸಮಿತಿ ಮುಖಂಡ ನಿಂಗರಾಜ ಮಲ್ಲಾಡಿ ಕೋರಿದಾಗ ಆರ್ಥಿಕ ಸಹಾಯ ನೀಡಿದರು. ಈ ವೇಳೆ ಮಾತನಾಡಿದ ನಿಂಗರಾಜ ಮಲ್ಲಾಡಿ, ತಾಲೂಕಿನ  ಹಳೇಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ  ಮೈದನಹಳ್ಳಿ ಗ್ರಾಮದ ಪರಿಶಿಷ್ಟ ಆದಿ ಕರ್ನಾಟಕ ಜಾತಿಗೆ ಸೇರಿದ ಕುಮಾರನ ಹೆಂಡತಿ ಪುಟ್ಟಸಾವಿತ್ರಿ (38 ವರ್ಷ) ಎಂಬುವರು ಕಳೆದೊಂದು ವರ್ಷದಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹಣವಿಲ್ಲದೆ ತುಂಬ ತೊಂದರೆಪಡುತ್ತಿತ್ತು. ಈ ಕುಟುಂಬವು ಬಡ ಕುಟುಂಬಕ್ಕೆ ಸೇರಿದವರಾಗಿದ್ದು, ಈ ನೊಂದ ಕುಟುಂಬಕ್ಕೆ ಚಿಕಿತ್ಸೆ ಪಡೆದುಕೊಳ್ಳಲು ಧನಸಹಾಯ ಮಾಡುವಂತೆ ಶಾಸಕರಲ್ಲಿ ಕೋರಲಾಯಿತು. ಈಗಾಗಲೇ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯರ ನಿರ್ದೇಶನದಂತೆ ರೋಗಿಯನ್ನು ಭಾರತ್ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ದೃಢೀಕರಿಸಿಕೊಟ್ಟಿದ್ದಾರೆ. ಆದರೆ ಸಾಕಷ್ಟು ಹಣ ವ್ಯಯವಾಗುತ್ತಿದ್ದು ಬಡಕುಟುಂಬದ ನೆರವಿಗೆ ಬರಬೇಕೆಂದು ಕೋರಿದಾಗ ಶಾಸಕರು ತಕ್ಷಣ ಚಿಕಿತ್ಸೆಗೆ ಅಗತ್ಯ ಹಣ ನೀಡುವ ಮೂಲಕ ಬಡಜನರಿಗೆ ಬದುಕುವ ಧೈರ್ಯ ತಂದುಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.
ಈ ವೇಳೆ ಪುಟ್ಟಸಾವಿತ್ರಿ ಕುಟುಂಬಸ್ಥರು ಮತ್ತು ದಲಿತ ಮುಖಂಡರು ಹಾಜರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net