ಬೆಂಗಳೂರು ನಗರ ಸ್ಪರ್ಧಿಗಳಿಗೆ ಪದಕ

Dasara Sports Meet CM Cup’ Swimming Competition
‘ದಸರಾ ಕ್ರೀಡಾಕೂಟ ಸಿಎಂ ಕಪ್’ ಈಜು ಸ್ಪರ್ಧೆ
Published on: 

ವಿಜಯವಾಣಿ ಸುದ್ದಿಜಾಲ ಮೈಸೂರು

ರಾಜ್ಯ ಮಟ್ಟದ ‘ದಸರಾ ಕ್ರೀಡಾಕೂಟ ಸಿಎಂ ಕಪ್’ ಈಜು ಸ್ಪರ್ಧೆಯ ಅಂತಿಮ ದಿನವಾದ ಮಂಗಳವಾರ ಬೆಂಗಳೂರು ನಗರ ಸ್ಪರ್ಧಿಗಳು ಹೆಚ್ಚು ಪದಕ ಬೇಟೆಯಾಡಿದರು.

ಪುರುಷರ ವಿಭಾಗದ 200 ಮೀ.ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಬೆಂಗಳೂರು ನಗರ ವಿಭಾಗದ ಜೆ.ಡ್ಯಾನಿಯಲ್ ಪಾಲ್ (2:23 ನಿ.) ಪ್ರಥಮ ಸ್ಥಾನ ಪಡೆದರು. ಯಶ್ ಎಚ್.ಪಾಲ್ ದ್ವಿತೀಯ ಹಾಗೂ ಬೆಳಗಾವಿಯ ತನುಜ್ ಸಿಂಗ್ ತೃತೀಯ ಸ್ಥಾನಪಡೆದರು. ಮಹಿಳಾ ವಿಭಾಗದ 200 ಮೀ.ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಬೆಂಗಳೂರು ನಗರದ ವಿ.ಹಿತೈಷಿ(2:55 ನಿ.) ಪ್ರಥಮ, ಮೈಸೂರು ವಿಭಾಗದ ಸಿದ್ದಿ ಶೆಟ್ಟಿ ದ್ವಿತೀಯ ಹಾಗೂ ಬೆಂ.ನಗರದ ಸಿ.ಎಂ.ಗಗನಾ ತೃತೀಯ ಸ್ಥಾನ ಪಡೆದರು.

ಪುರುಷರ ವಿಭಾಗದ ಫಲಿತಾಂಶ:

50 ಮೀ.ಬ್ಯಾಕ್ ಸ್ಟ್ರೋಕ್: 1.ಜಿ.ಉಜ್ವಲ್ ರೆಡ್ಡಿ(ಬೆಂ.ನ., 27 ಸೆ), 2.ಅಮನ್ ಅಭಿಜಿತ್ ಸುಂಗಾರ್(ಬೆಳಗಾವಿ), 3.ಚಿರಂತನ್ ಗೌಡ(ಬೆಂ.ನ.).,100 ಮೀ.ಬಟರ್ ಫ್ಲೈ: 1.ತನುಜ್ ಸಿಂಗ್(ಬೆಳಗಾವಿ 57 ಸೆ.), ಜೆ.ಆರವ್(ಬೆಂ.ನ.), 3.ಯಶ್ ಎಚ್.ಪಾಲ್(ಬೆಂ.ನ.)., 50 ಮೀ.ಫ್ರೀಸ್ಟೈಲ್: 1.ವಿವಾಂಕ್ ವಿಶ್ವನಾಥ್(ಬೆಂ.ನ. 25 ಸೆ.), 2.ಚಿನ್ಮಯ್ ಬಾಗೇವಾಡಿ(ಬೆಳಗಾವಿ), 3.ಪ್ರಹ್ಲಾದ್ ಶೆಟ್ಟಿ(ಮೈಸೂರು)., 4*100 ಮೀ.ಮೆಡ್ಲೆ ರಿಲೇ: 1.ಬೆಂಗಳೂರು ನಗರ, 2.ಬೆಳಗಾವಿ, 3.ಮೈಸೂರು., 4*50 ಮೀ.ಮಿಕ್ಸೆಡ್ ಫ್ರೀಸ್ಟೈಲ್ ರಿಲೇ: 1.ಬೆಂ.ನಗರ, 2.ಮೈಸೂರು, 3.ಬೆಂ.ಗ್ರಾಮಾಂತರ.

ಮಹಿಳೆಯರ ವಿಭಾಗದ ಫಲಿತಾಂಶ:

50 ಮೀ.ಬ್ಯಾಕ್‌ಸ್ಟ್ರೋಕ್: 1.ಕೆ.ಆರ್.ಶ್ರುತಿ(ಬೆಂ.ನ., 32 ಸೆ.), 2.ಲಾಸ್ಯಾ ಕಿಶನ್(ಮೈಸೂರು), 3.ಆರ್ಣಾ ಹೆಗ್ಡೆ(ಬೆಂ.ನ.)., 100 ಮೀ.ಬಟರ್ ಫ್ಲೈ: 1.ವಿ.ಹಿತೈಷಿ(ಬೆಂ.ನ., 1:07 ನಿ.), 2.ಮಾನ್ಯಾ ಆರ್.ವಾಧ್ವಾ(ಬೆಂ.ನ.), 3.ವೇದಾ ಖಾನೋಕರ್(ಬೆಳಗಾವಿ)., 50 ಮೀ.ಫ್ರೀಸ್ಟೈಲ್: 1.ಮಾನ್ಯಾ ಆರ್.ವಾಧ್ವಾ(ಬೆಂ.ನ., 29 ಸೆ.), 2.ಲಿಪಿಕಾ ದೇವ್(ಬೆಂ.ನ.), 3.ಡಿ.ಎಂ.ಲಿಪಿಕಾ(ಕಲಬುರಗಿ)., 4*100 ಮೀ.ಮೆಡ್ಲೆ ರಿಲೇ: 1.ಬೆಂಗಳೂರು ನಗರ, 2.ಮೈಸೂರು, 3.ಬೆಂ.ಗ್ರಾಮಾಂತರ.

ಚಿತ್ರ ಸಂಖ್ಯೆ...4,5

*ದಸರಾ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net