ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಸ್ಪರ್ಧೆ ಮುಖ್ಯ

ಡಾ.ಎ.ಎನ್. ಸಂತೋಷ್ ಕುಮಾರ್ ಅಭಿಪ್ರಾಯ ಮಹಿಳೆಯರ ಥ್ರೋಬಾಲ್ ಪಂದ್ಯಾವಳಿ
Competition is more important than winning or losing in sports.
ಮಹಿಳೆಯರ ಥ್ರೋಬಾಲ್ ಪಂದ್ಯಾವಳಿ
Published on: 

ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ದೊರೆಯುವ ಅನುಭವ ಹಾಗೂ ಕಲಿಯುವ ಪಾಠಗಳು ಹೆಚ್ಚು ಮಹತ್ವದ್ದಾಗಿವೆ ಎಂದು ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎ.ಎನ್. ಸಂತೋಷ್ ಕುಮಾರ್ ಹೇಳಿದರು.

ಜೆಎಸ್‌ಎಸ್ ಎಸ್‌ಟಿಯು ವತಿಯಿಂದ ಎಸ್‌ಜೆಸಿಇ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸ್ಮರಣಾರ್ಥ 10ನೇ ಆವೃತ್ತಿಯ ಪುರುಷರ ಬಾಸ್ಕೆಟ್‌ಬಾಲ್ ಹಾಗೂ ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ಕ್ರೀಡಾಪಟುಗಳು ಸೋಲು, ಗೆಲುವಿನಿಂದ ನಿರಾಶರಾಗದೆ, ಪ್ರತಿಯೊಂದು ಸ್ಪರ್ಧೆಯಿಂದಲೂ ಹೊಸ ಅನುಭವ ಪಡೆದು ನಿರಂತರವಾಗಿ ಕಲಿಯಬೇಕು. ಸ್ಪರ್ಧಾತ್ಮಕ ಮನೋಭಾವದ ಜತೆಗೆ ಕ್ರೀಡಾಸ್ಫೂರ್ತಿ, ಶಿಸ್ತು ಮತ್ತು ಪರಸ್ಪರ ಗೌರವವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ಪ್ರಕಟಣಾ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ, ಎಸ್‌ಜೆಸಿಇ ಪ್ರಾಂಶುಪಾಲ (ಪ್ರಭಾರ) ಹಾಗೂ ಡೀನ್ ಡಾ.ಸಿ.ನಟರಾಜು, ಎಸ್‌ಜೆಸಿಇ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ರೇವಣ್ಣ ಇದ್ದರು.

ಟೂರ್ನಿಯಲ್ಲಿ 9 ಇಂಜಿನಿಯರಿಂಗ್, 9 ಪದವಿ ಕಾಲೇಜು ಸೇರಿ 30 ತಂಡಗಳ 275ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. 20 ಮಹಿಳಾ ಥ್ರೋಬಾಲ್ ಹಾಗೂ 10 ಪುರುಷರ ಬಾಸ್ಕೆಟ್‌ಬಾಲ್ ತಂಡಗಳು ಕಣಕ್ಕಿಳಿದಿವೆ.

ಚಿತ್ರ ಸಂಖ್ಯೆ...1

*ಎಸ್‌ಜೆಸಿಇ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕ್ರೀಡಾಕೂಟವನ್ನು ಗಣ್ಯರು ಉದ್ಘಾಟಿಸಿದರು. ಡಾ.ಎ.ಎನ್. ಸಂತೋಷ್ ಕುಮಾರ್, ಪ್ರೊ.ಮೊರಬದ ಮಲ್ಲಿಕಾರ್ಜುನ, ಡಾ.ಸಿ.ನಟರಾಜು, ಡಾ.ಸಿ.ರೇವಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net