ಕಸಾಯಿಖಾನೆಗೆ ಸಾಗಿಸುತ್ತಿದ್ದ 19 ಕರುಗಳ ರಕ್ಷಣೆ

 ಹುಣಸೂರು ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡ ಕರುಗಳ ಸಾಗಣೆ ಮಾಡುತ್ತಿದ್ದ ಮಿನಿ ಗೂಡ್ಸ್ ವಾಹನ.
ಹುಣಸೂರು ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡ ಕರುಗಳ ಸಾಗಣೆ ಮಾಡುತ್ತಿದ್ದ ಮಿನಿ ಗೂಡ್ಸ್ ವಾಹನ.
Published on

ಪ್ರಮುಖ ಮುಖ್ಯಾಂಶಗಳು

  • ಹುಣಸೂರಿನಲ್ಲಿ ಆರೋಪಿ ಬಂಧನ, ಮಿನಿ ಗೂಡ್ಸ್ ವಾಹನ ವಶ
ಹುಣಸೂರು: ಕಸಾಯಿಖಾನೆಗೆ ಮಿನಿ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಕರುಗಳನ್ನು ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿದ ಡಿವೈಎಸ್‌ಪಿ ರವಿ ನೇತೃತ್ವದ ಪೊಲೀಸರ ತಂಡ ವಾಹನ ಸಹಿತ 19 ಕರುಗಳನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಹುಣಸೂರಿನ ಶಬ್ಬೀರ್‌ನಗರದ ಅಫ್ರಿದ್‌ಶರೀಫ್ ಬಂಧಿತ ಆರೋಪಿ.
ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯಿಂದ ಹಿರಿಕ್ಯಾತನಹಳ್ಳಿ-ಕಟ್ಟೆಮಳಲವಾಡಿ, ಹುಣಸೂರು ಮಾರ್ಗವಾಗಿ ಕೇರಳಕ್ಕೆ ಅಕ್ರಮವಾಗಿ ಜಾನುವಾರು ಸಾಗಿಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಆಧರಿಸಿ ಬುಧವಾರ ಡಿವೈಎಸ್‌ಪಿ ರವಿ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಸಂತೋಷ್ ಕಶ್ಯಪ್, ಎಸ್‌ಐ ರಾಧಾ ಹಾಗೂ ಸಿಬ್ಬಂದಿ ಕಟ್ಟೆಮಳಲವಾಡಿ ಸೇತುವೆ ಬಳಿ ವಾಹನ ತಪಾಸಣೆ ನಡೆಸಿದ ವೇಳೆ ಒಂದೇ ವಾಹನದಲ್ಲಿ 19 ಕರುಗಳನ್ನು ತುಂಬಿರುವುದು ಕಂಡು ಬಂತು. ಚಾಲಕ ಅಫ್ರಿದ್‌ಶರೀಫ್‌ನನ್ನು ವಿಚಾರಣೆಗೊಳಪಡಿಸಿದ ವೇಳೆ ಅಕ್ರಮವಾಗಿ ಕರುಗಳನ್ನು ಸಾಗಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ ಮೇರೆಗೆ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. 19 ಕರುಗಳನ್ನು ಪಿಂಜಾರಾಪೋಲ್‌ಗೆ ಕಳುಹಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net