ಶ್ರೀ ಹುಲಿಗೆಮ್ಮ ದೇವಿಗೆ ಸಿಂಹ ವಾಹನ ಪೂಜೆ

ಹುಲಿಗಿಯಲ್ಲಿ ಆರನೇ ದಿನ ಭಕ್ತರಿಂದ ಕುಂಕುಮಾರ್ಚನೆ ಕಬಡ್ಡಿಯಲ್ಲಿ ಜಬ್ಬಲಗುಡ್ಡ ಬಾಲಕಿಯರ ತಂಡಕ್ಕೆ ಅಗ್ರಸ್ಥಾನ
ಹುಲಿಗಿಯಲ್ಲಿ ಶುಕ್ರವಾರ ಶ್ರೀ ಹುಲಿಗೆಮ್ಮ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಹುಲಿಗಿಯಲ್ಲಿ ಶುಕ್ರವಾರ ಶ್ರೀ ಹುಲಿಗೆಮ್ಮ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
Published on: 

ಮುನಿರಾಬಾದ್ : ದಸರಾ ಮಹೋತ್ಸವ ಅಂಗವಾಗಿ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಸ್ಥಾನದಲ್ಲಿ ಆರನೇ ದಿನವಾದ ಶುಕ್ರವಾರ ಬೆಳ್ಳಿ ಮಂಟಪದಲ್ಲಿ ಸಿಂಹ ವಾಹನ ಪೂಜೆಯನ್ನು ಸಂಭ್ರಮ, ಸಡಗರದೊಂದಿಗೆ ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಯಿತು.

ಶುಕ್ರವಾರ ದೇವಿಗೆ ವಿವಿಧ ಬಗೆಯ ಸುಗಂಧ ಭರಿತ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ದೇವಿಗೆ ಸುಪ್ರಭಾತ ಸೇವೆ, ವಿಶೇಷ ಪೂಜೆ ಹಾಗೂ ಕುಂಕುಮಾರ್ಚನೆ ನೆರವೇರಿಸಲಾಯಿತು. ಮಧ್ಯಾಹ್ನ ದೇವಿಗೆ ಮಹಾನೈವೇದ್ಯ ಸಮರ್ಪಿಸಲಾಯಿತು. ಸಂಜೆ ಶ್ರೀದೇವಿ ಪಠಣ ಕಾರ್ಯಕ್ರಮ ಶ್ರದ್ಧಾಭಕ್ತಿಗಳಿಂದ ನಡೆಯಿತು.

ಕಬಡ್ಡಿ ಕ್ರೀಡಾಕೂಟ: ದಸರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕರ ಮತ್ತು ಬಾಲಕಿಯರ ಕಬಡ್ಡಿ ಕ್ರೀಡಾಕೂಟದ ಫೈನಲ್ ಪಂದ್ಯಾವಳಿ ನಡೆಯಿತು. ಬಾಲಕರ ವಿಭಾಗದಲ್ಲಿ ಲೇಬಗೇರಿ ತಂಡ (ಪ್ರಥಮ), ಅಗಳಕೇರಾ ತಂಡ (ದ್ವಿತೀಯ), ಹಿರೇಸಿಂದೋಗಿ ತಂಡ (ತೃತೀಯ), ಬೋಚನಹಳ್ಳಿ ತಂಡ ನಾಲ್ಕನೇ ಸ್ಥಾನ ಪಡೆದರೆ ಬೇಟಗೇರಿ ತಂಡವು ಉತ್ತಮ ತಂಡವಾಗಿ ಹೊರಹೊಮ್ಮಿತು. ಬಾಲಕಿಯರ ವಿಭಾಗದಲ್ಲಿ ಜಬ್ಬಲಗುಡ್ಡ ತಂಡ (ಪ್ರಥಮ), ಗಿಣಿಗೇರಾ (ದ್ವಿತೀಯ), ಬೋಚನಹಳ್ಳಿ (ತೃತೀಯ), ಚಿಕ್ಕಮ್ಯಾಗೇರಿ ತಂಡ ನಾಲ್ಕನೇ ಸ್ಥಾನ ಪಡೆದಿದ್ದು, ಗಿಣಿಗೇರಾ ‘ಬಿ’ ತಂಡವು ಉತ್ತಮ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರವಾಯಿತು.

ಸರ್ವೋತ್ತಮ ಆಟಗಾರರಾಗಿ ಹುಲಿಗೇಶ ಕಿನ್ನಾಳ ಹಾಗೂ ಕಾವ್ಯ ಬೋಚನಹಳ್ಳಿ, ಉತ್ತಮ ದಾಳಿಗಾರರಾಗಿ ಶಿವು ಅಗಳಕೇರಾ ಹಾಗೂ ಅಮೃತಾ ಜಬ್ಬಲಗುಡ್ಡ, ಉತ್ತಮ ಹಿಡಿತಗಾರರಾಗಿ ಮಾರುತಿ ಲೇಬಗೇರಿ ಹಾಗೂ ಕರಿಯಮ್ಮ ಗಿಣಿಗೇರಾ ಉತ್ತಮ ಪ್ರದರ್ಶನ ನೀಡಿ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು. ಗಣ್ಯರು ಟ್ರೋಫಿ ಹಾಗೂ ನಗದು ಬಹುಮಾನ ನೀಡಿ ಅಭಿನಂದಿಸಿದರು.

ದಸರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಜಬ್ಬಲಗುಡ್ಡ ಪ್ರೌಢಶಾಲೆ ಬಾಲಕಿಯರಿಗೆ ಪ್ರಶಸ್ತಿ ನೀಡಲಾಯಿತು.
ದಸರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಜಬ್ಬಲಗುಡ್ಡ ಪ್ರೌಢಶಾಲೆ ಬಾಲಕಿಯರಿಗೆ ಪ್ರಶಸ್ತಿ ನೀಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net