ಯೋಗಾಸನ, ಕೊಪ್ಪಳ ಜಿಲ್ಲೆ ಚಾಂಪಿಯನ್

ಕುಷ್ಟಗಿಯಲ್ಲಿ ವಿಭಾಗ ಮಟ್ಟದ ಪಂದ್ಯಾವಳಿ ಸಮಾರೋಪ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಣೆ
ಕುಷ್ಟಗಿಯಲ್ಲಿ ಆಯೋಜಿಸಿದ್ದ ಕಲಬುರಗಿ ವಿಭಾಗ ಮಟ್ಟದ ಯೋಗಾಸನ ಪಂದ್ಯದಲ್ಲಿ ವಿಜೇತರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ ಪ್ರಶಸ್ತಿ ಪತ್ರ, ಬಹುಮಾನ ವಿತರಿಸಿದರು.
ಕುಷ್ಟಗಿಯಲ್ಲಿ ಆಯೋಜಿಸಿದ್ದ ಕಲಬುರಗಿ ವಿಭಾಗ ಮಟ್ಟದ ಯೋಗಾಸನ ಪಂದ್ಯದಲ್ಲಿ ವಿಜೇತರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ ಪ್ರಶಸ್ತಿ ಪತ್ರ, ಬಹುಮಾನ ವಿತರಿಸಿದರು.
Published on: 

ಕುಷ್ಟಗಿ: ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಪಂ ಶಿಕ್ಷಣ ಇಲಾಖೆ ಸೇರಿ ವಿವಿಧ ಇಲಾಖೆಗಳಿಂದ ಆಯೋಜಿಸಿದ್ದ ಎರಡು ದಿನಗಳ ಕಲಬುರಗಿ ವಿಭಾಗ ಮಟ್ಟದ ಯೋಗಾಸನ ಪಂದ್ಯಾವಳಿ ಶನಿವಾರ ಸಮಾರೋಪಗೊಂಡಿತು.

ತಲಾ 105 ಬಾಲಕರು, ಬಾಲಕಿಯರು ಪಾಲ್ಗೊಂಡಿದ್ದರು. ಕೊಪ್ಪಳ ಜಿಲ್ಲೆಯು 9.5 ಅಂಕ ಪಡೆದು ವಿಭಾಗ ಮಟ್ಟದ ಚಾಂಪಿಯನ್ ಆಗಿ ಹೊರಹೊಮ್ಮಿತು. ವಿಜಯನಗರ ಜಿಲ್ಲೆ 8 ಅಂಕ ಪಡೆದು ರನ್ನರ್ ಅಪ್ ಹಾಗೂ ಬಳ್ಳಾರಿ ಜಿಲ್ಲೆಯೂ ಏಳು ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿತು.

ರಾಜ್ಯಮಟ್ಟಕ್ಕೆ ಆಯ್ಕೆ: 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಚಂದನ್ ಮತ್ತು ಶಕ್ತಿ ಹಾಗೂ ಬಾಲಕಿಯರ ವಿಭಾಗದಲ್ಲಿ ಸಹನಾ ಮತ್ತು ಸೌಮ್ಯಾ ಉತ್ತಮ ಪ್ರದರ್ಶನ ತೋರಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು. 17 ವರ್ಷದೊಳಗಿನ ಬಾಲಕಿಯರ ವಿಭಾಗ (ಸಿಂಗಲ್ಸ್)ದಲ್ಲಿ ನಿಹಾರಿಕಾ ಹಾಗೂ ಜೋಡಿ ವಿಭಾಗದಲ್ಲಿ ನಿಹಾರಿಕಾ ಮತ್ತು ಬಿಂದು ಕಲಾತ್ಮಕ ಯೋಗಾಸನ ಮೂಲಕ ಪ್ರಥಮ ಸ್ಥಾನ ಪಡೆದರೆ, ಬಾಲಕರ ವಿಭಾಗದಲ್ಲಿ ಮಣಿಕಂಠ ಮತ್ತು ಹನುಮೇಶ್ ಎರಡೂ ಸ್ಪರ್ಧೆಗಳ್ಲಲಿ ಮೊದಲ ಸ್ಥಾನ ಗಳಿಸಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದರು.

ವಿಜೇತ ತಂಡಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ ಪ್ರಶಸ್ತಿ ಪತ್ರ ವಿತರಣೆ ಮಾಡಿ, ರಾಜ್ಯಮಟ್ಟದಲ್ಲಿ ಕೂಡ ಅತ್ಯುತ್ತಮ ಯೋಗಾಸನ ಪ್ರದರ್ಶನ ನೀಡುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಬೇಕು. ಇದಕ್ಕಾಗಿ ಈಗಿಂದಲೇ ತಯಾರಿ ನಡೆಸಿ ಜಿಲ್ಲೆ, ಕಲಬುರಗಿ ವಿಭಾಗಕ್ಕೆ ಹೆಸರನ್ನು ತರಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕ ನಾಗಪ್ಪ ಬಿಳಿಯಪ್ಪನವರು, ಉರ್ದು ಶಾಲೆಯ ಮುಖ್ಯಶಿಕ್ಷಕ ಯಮನಪ್ಪ ಚೂರಿ, ಎಸ್ಡಿಎಂಸಿ ಅಧ್ಯಕ್ಷ ಸೈಯದ್ ಜಿಲಾನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net