ಪೊಲೀಸರಿಂದ ಮಹಾರಾಷ್ಟ್ರದ ವ್ಯಕ್ತಿಯ ವಿಚಾರಣೆ

ಸಂಭಾಜಿದು ಎನ್ನಲಾದ ಸಮಾಧಿಗೆ ಪೂಜೆ ಸಲ್ಲಿಸಲು ಬಂದಿದ್ದ
ಕನಕಗಿರಿಯಲ್ಲಿ ಸಂಭಾಜಿದು ಎನ್ನಲಾದ ಸಮಾಧಿಗೆ ಪೂಜೆ ಸಲ್ಲಿಸಲು ಅವಕಾಶ ನೀಡದ ಕಾರಣ ಪಕ್ಕದ ಸೂರ್ಯ ದೇಗುಲದಲ್ಲಿ ಮಹರಾಷ್ಟ್ರ ಹಾಗೂ ಸ್ಥಳೀಯರು ಪೂಜೆ ಮಾಡಿದರು.
ಕನಕಗಿರಿಯಲ್ಲಿ ಸಂಭಾಜಿದು ಎನ್ನಲಾದ ಸಮಾಧಿಗೆ ಪೂಜೆ ಸಲ್ಲಿಸಲು ಅವಕಾಶ ನೀಡದ ಕಾರಣ ಪಕ್ಕದ ಸೂರ್ಯ ದೇಗುಲದಲ್ಲಿ ಮಹರಾಷ್ಟ್ರ ಹಾಗೂ ಸ್ಥಳೀಯರು ಪೂಜೆ ಮಾಡಿದರು.
Published on: 

ಕನಕಗಿರಿ: ಛತ್ರಪತಿ ಶಿವಾಜಿ ಸಹೋದರ ಸಂಭಾಜಿದು ಎನ್ನಲಾದ ವಿವಾದಿತ ಸಮಾಧಿಗೆ ಪೂಜೆ ಸಲ್ಲಿಸಲು ಮಹಾರಾಷ್ಟದಿಂದ ಬಂದಿದ್ದ ವ್ಯಕ್ತಿಯನ್ನು ಪೊಲೀಸರು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.

ಶಿವಾಜಿ ಸಹೋದರ ಸಾಂಭಾಜಿ ಕನಕಗಿರಿಯಲ್ಲಿ ಹತನಾಗಿದ್ದಾನೆ ಎನ್ನಲಾಗಿದೆ. ಬಸ್ ನಿಲ್ದಾಣದಿಂದ ಕಾಲೇಜಿಗೆ ತೆರಳುವ ರಸ್ತೆಯ ಪಕ್ಕಕ್ಕೆ ಇರುವ ಸಮಾಧಿಯು ಸಂಭಾಜಿದು ಎಂಬುದು ಸ್ಥಳೀಯರು ಮತ್ತು ಮಹಾರಾಷ್ಟದ ಮೂಲದವರ ನಂಬಿಕೆಯಾಗಿದೆ. ಆದರೆ, ಈ ಬಗ್ಗೆ ಈವರೆಗೆ ಸ್ಪಷ್ಟತೆ ಸಿಕ್ಕಿಲ್ಲ. ಆದರೂ, ಅ.9ರ ಚತುರ್ದಶಿ ದಿನವಾದ ಶುಕ್ರವಾರ ಸಂಭಾಜಿ ಪುಣ್ಯಸ್ಮರಣೋತ್ಸವ ಹಿನ್ನೆಲೆಯಲ್ಲಿ ಸಮಾಧಿಗೆ ತರ್ಪಣ ಹಾಗೂ ಪುಷ್ಪ ನಮನ ಸಲ್ಲಿಸಲು ಮಹರಾಷ್ಟ ಮೂಲದವರು ಬಂದಿದ್ದರು.

ಅದರಲ್ಲಿ ಡಾ. ಸಂದೀಪ ಮಹೇಂದ್ರಕರ ಎನ್ನುವಾತನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದು, ಆಧಾರ್ ಕಾರ್ಡ್, ಲೆಟರ್ ಪ್ಯಾಡ್ ಸೇರಿದಂತೆ ವಿವಿಧ ದಾಖಲೆಗಳನ್ನು ಪಡೆದಿದ್ದಾರೆ. ಸಮಾಧಿಗೆ ತರ್ಪಣ ಹಾಗೂ ಪುಷ್ಪನಮನಕ್ಕೆ ಅವಕಾಶ ನೀಡದ ಕಾರಣ ಪಕ್ಕದಲ್ಲಿರುವ ಸೂರ್ಯ ಮಂದಿರದಲ್ಲಿ ಶಿವಾಜಿ ವಂಶಸ್ಥರು ಶ್ರಾದ್ಧ, ಪಿಂಡ ಪ್ರಧಾನ ಮಾಡಿದರು. ಅಲ್ಲದೆ ಭಜನೆ ಮಾಡಿ ಸಂಭಾಜಿಯನ್ನು ಸ್ಮರಿಸಿದರು.

ಸಂಭಾಜಿ ಸಮಾಧಿ ಎನ್ನುವುದಕ್ಕೆ ಪುರಾವೆಗಳಿಲ್ಲ. ಹೀಗಾಗಿ ಯಾರಿಗೂ ಪೂಜೆಗೆ ಅವಕಾಶ ನೀಡಿಲ್ಲ. ಅಹಿಕರ ಘಟನೆ ನಡೆಯದಂತೆ ಸಿಸಿ ಕ್ಯಾಮರಾ ಅಳವಡಿಸುವುದರ ಜತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಮಹಾರಾಷ್ಟ್ರ ಮೂಲದ ವ್ಯಕ್ತಿಯನ್ನು ವಿಚಾರಣೆ ನಡೆಸಲಾಗಿದೆ.
ಶಿವರಾಜ ಇಂಗಳೆ ಪಿಐ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net