ಗಂಗಾವತಿ ಎಂಸಿಎಚ್ ರಾಜ್ಯಕ್ಕೆ ಮಾದರಿ

ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿಕೆ
 ಗಂಗಾವತಿ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಶುಶ್ರೂಷಕಿಯರನ್ನು ಸನ್ಮಾನಿಸಿದರು. ಎಸಿ ಮೆಹಬೂಬ್ ಜಿಲಾನಿ ಖುರೇಷಿ, ಡಿಎಚ್‌ಒ ಡಾ.ಈಶ್ವರ ಸವಡಿ, ಆಸ್ಪತ್ರೆ ವೈದ್ಯಾಧಿಕಾರಿ ಸ್ಮಿತಾ ಐಲಿ ಇತರರಿದ್ದರು.
ಗಂಗಾವತಿ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಶುಶ್ರೂಷಕಿಯರನ್ನು ಸನ್ಮಾನಿಸಿದರು. ಎಸಿ ಮೆಹಬೂಬ್ ಜಿಲಾನಿ ಖುರೇಷಿ, ಡಿಎಚ್‌ಒ ಡಾ.ಈಶ್ವರ ಸವಡಿ, ಆಸ್ಪತ್ರೆ ವೈದ್ಯಾಧಿಕಾರಿ ಸ್ಮಿತಾ ಐಲಿ ಇತರರಿದ್ದರು.
Published on: 

ಗಂಗಾವತಿ: ನಗರದ ಆನೆಗೊಂದಿ ರಸ್ತೆಯಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ (ಎಂಸಿಎಚ್)ಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಶನಿವಾರ ರಾತ್ರಿ ಭೇಟಿ ನೀಡಿ ಪರಿಶೀಲಿಸಿದರು.

ಹೊಸಪೇಟೆಯಿಂದ ರಾಯಚೂರಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಚಿಕಿತ್ಸೆ ಮತ್ತು ಸ್ವಚ್ಛತೆ ಬಗ್ಗೆ ಮಾಹಿತಿ ಪಡೆದುಕೊಂಡರು. ಪ್ರತಿ ಘಟಕಕ್ಕೂ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಆಸ್ಪತ್ರೆ ಸ್ವಚ್ಛತಾ ನಿರ್ವಹಣೆ, ಸಿಬ್ಬಂದಿ ಸೇವಾ ಕಾರ್ಯ ಮತ್ತು ರೋಗಿಗಳು, ಸಂಬಂಧಿಕರ ಅಭಿಪ್ರಾಯ ಕೇಳಿ ಸಂತಸ ವ್ಯಕ್ತಪಡಿಸಿದರು. ಇಚ್ಛಾಶಕ್ತಿ ಇದ್ದರೆ ಸರ್ಕಾರಿ ಆಸ್ಪತ್ರೆಯಲ್ಲೂ ಗುಣಮಟ್ಟದ ಮತ್ತು ಸೇವಾ ಮನೋಭಾವದ ಚಿಕಿತ್ಸೆ ನೀಡಬಹುದು ಎಂಬುದಕ್ಕೆ ಈ ಆಸ್ಪತ್ರೆ ಸಾಕ್ಷಿ ಎಂದ ಸಚಿವರು, ಸಹಜ ಹೆರಿಗೆ ಘಟಕದ ಮಾಹಿತಿ ಪಡೆದರಲ್ಲದೆ, ಶುಶ್ರೂಷಕಿಯರನ್ನು ಸನ್ಮಾನಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವ ಎಂಸಿಎಚ್ ಸಿಬ್ಬಂದಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಆಸ್ಪತ್ರೆ ನಿರ್ವಹಣೆಗೆ ಬೇಕಾದ ಅನುದಾನ ಮತ್ತು ಸೌಲಭ್ಯಗಳು ಒದಗಿಸಲಾಗುವುದು,.ಆಶಾ ಕಾರ್ಯಕರ್ತೆಯರೊಂದಿಗೆ ಸರ್ಕಾರ ನಡೆಸಿದ ಮಾತುಕತೆ ಫಲಪ್ರದವಾಗಿದ್ದು, 2000 ರೂ. ಹೆಚ್ಚುವರಿ ಗೌರವ ಧನ ನೀಡಲು ನಿರ್ಧರಿಸಲಾಗಿದೆ ಎಂದರು.

ಡಿಎಚ್‌ಒ ಡಾ.ಈಶ್ವರ ಸವಡಿ, ಆಸ್ಪತ್ರೆ ವೈದ್ಯಾಧಿಕಾರಿ ಸ್ಮಿತಾ ಐಲಿ ಸೇರಿದಂತೆ ವೈದ್ಯ ಮತ್ತು ವೈದ್ಯಕೇತರ ಸಿಬ್ಬಂದಿ ಇದ್ದರು.