ಶ್ರೀ ಶಂಕರಾಚಾರ್ಯರ ರಥೋತ್ಸವದ ಸಡಗರ

ಭಾಗ್ಯನಗರದ ಶ್ರೀ ಶಂಕರಚಾರ್ಯರ ಮಹಾರಥೋತ್ಸವ ಮಂಗಳವಾರ ಅದ್ದೂರಿಯಾಗಿ ಜರುಗಿತು.
ಭಾಗ್ಯನಗರದ ಶ್ರೀ ಶಂಕರಚಾರ್ಯರ ಮಹಾರಥೋತ್ಸವ ಮಂಗಳವಾರ ಅದ್ದೂರಿಯಾಗಿ ಜರುಗಿತು.
Published on

ಪ್ರಮುಖ ಮುಖ್ಯಾಂಶಗಳು

  • ಭಾಗ್ಯನಗರದಲ್ಲಿ ಜಾತ್ರೆ
ಕೊಪ್ಪಳ : ತಾಲೂಕಿನ ಭಾಗ್ಯನಗರದಲ್ಲಿರುವ ಶ್ರೀ ಶಂಕರಾಚಾರ್ಯ ಮಠದ ಆವರಣದಲ್ಲಿ ಮಂಗಳವಾರ ಶ್ರೀ ಶಂಕರಾಚಾರ್ಯರ ಮಹಾರಥೋತ್ಸವವು ವಿಜೃಂಭಣೆಯಿಂದ ನೆರವೇರಿತು.
ಮಠದಿಂದ ಉತ್ಸವ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಕ್ತಿಪೂರ್ವಕ ಮೆರವಣಿಗೆಯ ಮೂಲಕ ಕರೆತರಲಾಗಿದ್ದು, ಬಳಿಕ ಅದನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಸಂಜೆ ಗೋಧೂಳಿ ಸಮಯದಲ್ಲಿ ರಥೋತ್ಸವಕ್ಕೆ ಚಾಲನೆ ದೊರೆತು. ರಥ ಸಾಗುವ ಸಂದರ್ಭದಲ್ಲಿ ಭಕ್ತರು ಉತ್ಸಾಹದಿಂದ ಘೋಷಣೆಗಳನ್ನು ಕೂಗಿ ಭಕ್ತಿ ಭಾವ ವ್ಯಕ್ತಪಡಿಸಿದರು. ಉತ್ತತ್ತಿ ಹಾಗೂ ಬಾಳೆಹಣ್ಣು ಸಮರ್ಪಣೆ ಮೂಲಕ ಭಕ್ತರು ತಮ್ಮ ನಿಷ್ಠೇಯನ್ನು ತೋರಿಸಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶ್ರೀ ಶಂಕರಾಚಾರ್ಯರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಜಾತ್ರೆಗೆ ಸುತ್ತ ಮುತ್ತಲಿನ ಭಕ್ತರು ಬಂದು ಶ್ರೀ ಶಂಕರ ಚಾರ್ಯರ ಕೃಪೆಗೆ ಪಾತ್ರರಾದರು.
ಜಮಖಂಡಿಯ ಸಹಜಾನಂದ ಸ್ವಾಮಿ, ಬೀದರಿನ ಗಣೇಶಾನಂದ ಮಹಾರಾಜ್​, ಕೃಷ್ಣಾನಂದ ಅವಧೂತರು, ಜ್ಞಾನಾನಂದ ಮಹಾರಾಜರು, ಶಿವರಾಮಾನಂದ ಭಾರತಿ ಸ್ವಾಮೀಜಿ, ಸ್ವರೂಪಾನಂದ ಸ್ವಾಮಿ, ಅನುಸೂಯಾ ದೇವಿ ಅಮ್ಮ ಹಾಗೂ ಆನಂದಮಯಿ ಅಮ್ಮನವರು ಸೇರಿದಂತೆ ಹಲವು ಧಾರ್ಮಿಕ ಗುರುಗಳು ಸಾನಿಧ್ಯ ವಹಿಸಿದ್ದರು.
ಪಪಂ ಅಧ್ಯಕ್ಷ ರಮೇಶ ಹ್ಯಾಟಿ, ಮುಖಂಡರಾದ ಕೃಷ್ಣಾ ಪಾನಘಂಟಿ, ನಾಗೂಸಾ ಮೇಘರಾಜ್​, ಜವಾಹರಲಾಲಸಾ ಅಂಟಾಳಮರದ, ಚಂದ್ರು ಮಾಳ್ವಾದಿ ಇತರರಿದ್ದರು.

ಶ್ರೀ ಶಾರದಾಂಬಾ ದೇವಿ ಮೂರ್ತಿ ಪ್ರತಿಷ್ಠಾಪನೆ

ಸೋಮವಾರ ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಮತ್ತು ಅಭಿಶೇಕದೊಂದಿಗೆ ಶ್ರೀ ಶಾರದಾಂಬಾ ಮೂರ್ತಿ ಪ್ರತಿಷ್ಠಾಪನೆ. ನೂತನ ದೇವಸ್ಥಾನ ಉದ್ಘಾಟನೆ ಜರುಗಿತು. ಪ್ರತಿಷ್ಠಾಂಗ ಹೋಮ, ಚಂಡಿಹೋಮ, ಡಾ.ಶಿವಾನಂದ ಭಾರತಿ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ ಅಮೃತಾಸ್ತದಿಂದ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಜರುಗಿತು. ಮಂಗಳವಾರ ಶಂಕರಾಚಾರ್ಯ ಮಠದಲ್ಲಿ ನೂತನವಾಗಿ ನಿರ್ಮಿಸಲಾದ ಶಾರದಾಂಬಾ ಶಾಲಾ ವಿದ್ಯಾರ್ಥಿ ಕೊಠಡಿಗಳನ್ನು ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ವಿಪ ಸದಸ್ಯೆ ಹೇಮಲತಾ ನಾಯಕ್​ ಸೇರಿ ಉದ್ಘಾಟಿಸಿದರು. ಜೆಡಿಎಸ್​ ಕೋರ್​ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್​, ಬಿಜೆಪಿ ನಾಯಕ ಡಾ.ಬಸವರಾಜ ಕ್ಯಾವಟರ್​ ಸಾಥ್​ ನೀಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net