ತಾಂಡಾಗಳಲ್ಲಿ ಕಾರ್ಮಿಕ ಸಂಘದ ಘಟಕಗಳ ಆರಂಭ

ವಿರುಪಾಪುರ ತಾಂಡಾ ಗೋರಸೇನಾ ಸ್ಥಳೀಯ ಕಚೇರಿ ಆವರಣದಲ್ಲಿ ಕಾರ್ಮಿಕರಿಗೆ ವೃತ್ತಿಪರ ಸಲಕರಣೆಗಳ ಕಿಟ್‌ಗಳನ್ನು ಸೋಮವಾರ ವಿತರಿಸಲಾಯಿತು. ಸೇವಾಲಾಲ್ ಮಹಾರಾಜ ಕಟ್ಟಡ ಕಾರ್ಮಿಕರ ಸಂಘ ತಾಲೂಕಾಧ್ಯಕ್ಷ ಪಾಂಡುನಾಯ್ಕ, ಪ್ರಮುಖರಾದ ಶಿವಪ್ಪ ನಾಯ್ಕ ಬಾಲಾಜಿ, ಹನುಮಂತಪ್ಪ ಇತರರಿದ್ದರು.

Published on
ಗಂಗಾವತಿ: ನಗರದ ವಿರುಪಾಪುರ ತಾಂಡಾ ಗೋರಸೇನಾ ಸ್ಥಳೀಯ ಕಚೇರಿ ಆವರಣದಲ್ಲಿ ಕಾರ್ಮಿಕ ಇಲಾಖೆಯಿಂದ ಕಟ್ಟಡ ನಿರ್ಮಾಣದ ವೃತ್ತಿಪರ ಸಲಕರಣೆಗಳನ್ನೊಳಗೊಂಡ ಕಿಟ್‌ಗಳನ್ನು ಸೋಮವಾರ ವಿತರಿಸಲಾಯಿತು.
ಸೇವಾಲಾಲ್ ಮಹಾರಾಜ ಕಟ್ಟಡ ಕಾರ್ಮಿಕರ ಸಂಘದ ಸಹಯೋಗದೊಂದಿಗೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸುಮಾರು 1.50 ಲಕ್ಷ ರೂ. ಮೌಲ್ಯದ ಕಿಟ್‌ಗಳನ್ನು ವಿತರಿಸಲಾಯಿತು.
ಸಂಘದ ಅಧ್ಯಕ್ಷ ಪಾಂಡು ನಾಯ್ಕ ಮಾತನಾಡಿ, ಕಟ್ಟಡ ನಿರ್ಮಾಣದ ಕಾರ್ಮಿಕರಿಗೆ ಮೂರು ಹಂತಗಳಲ್ಲಿ ಸಲಕರಣೆಗಳ ಕಿಟ್‌ಗಳನ್ನು ವಿತರಿಸಲಾಗುತ್ತಿದ್ದು, ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕಿಟ್‌ಗಳ ವಿತರಣೆಯ ಜತೆಗೆ ಕಾರ್ಮಿಕರ ಮಕ್ಕಳ ಶಿಕ್ಷಣ ಉತ್ತೇಜನಕ್ಕೆ ಪೂರಕವಾದ ಯೋಜನೆಗಳನ್ನು ಸಹ ಜಾರಿಗೊಳಿಸಬೇಕಿದೆ. ತಾಲೂಕಿನ ಕಾರ್ಮಿಕರ ಹಿತಕ್ಕಾಗಿ ಅಸ್ತಿತ್ವಕ್ಕೆ ಬಂದಿರುವ ಈ ಸಂಘವು ಮುಂಬರುವ ದಿನಗಳಲ್ಲಿ ಸಂಗಾಪುರ ಮತ್ತು ಸೂರ್ಯನಾಯಕನ ತಾಂಡದಲ್ಲಿಯೂ ತನ್ನ ಘಟಕಗಳನ್ನು ಆರಂಭಿಸಲಿದೆ ಎಂದು ಅವರು ಮಾಹಿತಿ ನೀಡಿದರು.
ಸಂಘದ ಪ್ರಮುಖರಾದ ಶಿವಪ್ಪ ನಾಯ್ಕ ಬಾಲಾಜಿ, ಹನುಮಂತಪ್ಪ, ರವಿಚಂದ್ರ, ಕೃಷ್ಣ, ಭೋಜಾರವಿ ನಾಯ್ಕ, ಸೇಟುನಾಯ್ಕ ಸೇರಿದಂತೆ ಶ್ರಮಿಕ ವರ್ಗದ ಹಲವು ಸದಸ್ಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net