ಪರಿಸರ ಸ್ವಚ್ಛತೆಗೆ ಜಾಗೃತಿ ಮೂಡಿಸಲಿ

ಗಂಗಾವತಿ ತಾಲೂಕಿನ ಹನುಮನಹಳ್ಳಿ ಬಳಿಯ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿ ಕಿಷ್ಕಿಂಧ ಯುವ ಚಾರಣ ಬಳಗ ಮತ್ತು ಲಿವ್ ವಿತ್ ಹುಮ್ಯಾನಿಟಿ ತಂಡದಿಂದ ಮೂರನೇ ಹಂತದ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಲಾಗಿತ್ತು. ಸದಸ್ಯರಾದ ಸಂತೋಷ ಕುಂಬಾರ, ಮುತ್ತರಾಜ್ ಬಂಗಿ, ಎಸ್.ಪಿ.ಸೌಮ್ಯ, ಮಂಜುನಾಥ ಇತರರಿದ್ದರು.
ಗಂಗಾವತಿ ತಾಲೂಕಿನ ಹನುಮನಹಳ್ಳಿ ಬಳಿಯ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿ ಕಿಷ್ಕಿಂಧ ಯುವ ಚಾರಣ ಬಳಗ ಮತ್ತು ಲಿವ್ ವಿತ್ ಹುಮ್ಯಾನಿಟಿ ತಂಡದಿಂದ ಮೂರನೇ ಹಂತದ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಲಾಗಿತ್ತು. ಸದಸ್ಯರಾದ ಸಂತೋಷ ಕುಂಬಾರ, ಮುತ್ತರಾಜ್ ಬಂಗಿ, ಎಸ್.ಪಿ.ಸೌಮ್ಯ, ಮಂಜುನಾಥ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಿಷ್ಕಿಂಧ ಯುವ ಚಾರಣ ಬಳಗದಿಂದ ಸ್ವಚ್ಛತಾ ಆಂದೋಲನ
  • ಗಂಗಾವತಿ ಅಂಜನಾದ್ರಿ ಬೆಟ್ಟ ಸ್ವಚ್ಛತಾ ಅಂದೋಲನ
ಗಂಗಾವತಿ: ತಾಲೂಕಿನ ಹನುಮನಹಳ್ಳಿ ಬಳಿಯ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿ ಕಿಷ್ಕಿಂಧ ಯುವ ಚಾರಣ ಬಳಗದಿಂದ 3ನೇ ಹಂತದ ಸ್ವಚ್ಛತಾ ಅಂದೋಲನ ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಲಿವ್ ವಿತ್ ಹ್ಯುಮ್ಯಾನಿಟಿ ಸಹಭಾಗಿತ್ವದಿಂದ ಹಮ್ಮಿಕೊಂಡ ಅಂದೋಲನದಲ್ಲಿ ಬೆಟ್ಟದ ಕೆಳಭಾಗದಿಂದ ಮೇಲ್ಭಾಗದಲ್ಲಿದ್ದ ಪ್ಲಾಸ್ಟಿಕ್‌ಪ್ರೇರಿತ ವಸ್ತುಗಳು ಸೇರಿ ಇತರೆ ತ್ಯಾಜ್ಯವನ್ನು ಸಂಗ್ರಹಿಸಲಾಯಿತು. ಬಿಸಿಲಿನ ಪ್ರಖರತೆಯನ್ನು ಲೆಕ್ಕಿಸದೇ ತಂಡದ ಸದಸ್ಯರು ಬೆಟ್ಟ ಮತ್ತು ದೇವಾಲಯ ವ್ಯಾಪ್ತಿಯನ್ನು ಸ್ವಚ್ಛಗೊಳಿಸಿದರು. 150 ಕೆಜಿ ಪ್ಲಾಸ್ಟಿಕ್ ಸಂಗ್ರಹಿಸಿದರಲ್ಲದೇ, ಬೆಟ್ಟಕ್ಕೆ ಬಂದ ಪ್ರವಾಸಿಗರು ಮತ್ತು ಭಕ್ತರಿಗೆ ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆ ಕುರಿತು ಜಾಗೃತಿ ಮೂಡಿಸಿದರು.
2023ರಿಂದಲೇ ಸ್ವಚ್ಛತಾಂದೋಲನ ಕೈಗೊಳ್ಳಲಾಗುತ್ತಿದ್ದು, ಅಂಜನಾದ್ರಿ ಬೆಟ್ಟಕ್ಕೆ ಮೂರನೇ ಬಾರಿಗೆ ತ್ಯಾಜ್ಯ ಸಂಗ್ರಹಿಸಲಾಗಿದೆ. ದೇವಾಲಯದ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಬಗ್ಗೆ ಭಕ್ತರಿಗೆ ಆಡಳಿತ ಮಂಡಳಿ ಜಾಗೃತಿ ಮೂಡಿಸಬೇಕಿದ್ದು, ಪ್ಲಾಸ್ಟಿಕ್‌ಪ್ರೇರಿತ ವಸ್ತುಗಳನ್ನು ಕೊಂಡಯ್ಯದಂತೆ ಸೂಚನೆ ನೀಡಲು ತಂಡದ ಸದಸ್ಯರು ಒತ್ತಾಯಿಸಿದರು.
ಚಾರಣ ಬಳಗದ ಸದಸ್ಯರಾದ ಸಂತೋಷ ಕುಂಬಾರ, ಮುತ್ತರಾಜ್ ಬಂಗಿ, ಎಸ್.ಪಿ.ಸೌಮ್ಯ, ವಿಜಯ ಬಳ್ಳಾರಿ, ಮಂಜುನಾಥ, ಪ್ರತೀಕ, ಶೋಭಾ ಆನೆಗೊಂದಿ, ಮಂಜುಳಾ ಶೆಟ್ಟಿ, ಕಲ್ಯಾಣ, ಅಭಿಜಿತ್ ತಾಂಡೂರ್, ಅಭಿಷೇಕ, ಸುರೇಶ ಸಮಗಂಡಿ, ಶ್ರೀಧರ ಐಲಿ, ಜಿ.ಆರ್.ಅರ್ಜುನ, ಆನಂದ ಕೆಲೋಜಿ, ಮಲ್ಲಿಕಾರ್ಜುನ ಹಿರೇಮಠ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net