ಹನುಮನ ಕೃಪೆಯಿಂದ ಕ್ಷೇತ್ರ ಸಮೃದ್ಧಿ

ಗಂಗಾವತಿ ಅಯ್ಯಪ್ಪಗಿರಿಯ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಹನುಮಮಾಲಾಧಾರಿಗಳಿಂದ ಇರುಮುಡಿ ಪೂಜೆ ನೆರವೇರಿತು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಲಾಧಾರಿಗಳಾದ ಪರಶುರಾಮ್ ಮಡ್ಡೇರ್, ಉಮೇಶ ಸಿಂಗನಾಳ್, ಅಯ್ಯನಗೌಡ ಹೇರೂರು ಇತರರಿದ್ದರು.
ಗಂಗಾವತಿ ಅಯ್ಯಪ್ಪಗಿರಿಯ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಹನುಮಮಾಲಾಧಾರಿಗಳಿಂದ ಇರುಮುಡಿ ಪೂಜೆ ನೆರವೇರಿತು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಲಾಧಾರಿಗಳಾದ ಪರಶುರಾಮ್ ಮಡ್ಡೇರ್, ಉಮೇಶ ಸಿಂಗನಾಳ್, ಅಯ್ಯನಗೌಡ ಹೇರೂರು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಪರಣ್ಣ ಮುನವಳ್ಳಿ ಅಭಿಮತ
  • ಗಂಗಾವತಿ ಇರುಮುಡಿ ಪೂಜೆ
ಗಂಗಾವತಿ: ನಗರದ ಅಯ್ಯಪ್ಪಗಿರಿಯ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ನಿಮಿತ್ತ ಹನುಮಮಾಲಾಧಾರಿಗಳಿಂದ ಇರುಮುಡಿ ಪೂಜೆ ನೆರವೇರಿಸಲಾಯಿತು.
ಕಳೆದ 40 ದಿನಗಳಿಂದ ವ್ರತ ಕೈಗೊಂಡ ಮಾಲಾಧಾರಿಗಳು ಏ.2ರಂದು ತಾಲೂಕಿನ ಹನುಮನಹಳ್ಳಿಯ ಅಂಜನಾದ್ರಿಯಲ್ಲಿ ಮಾಲಾ ವಿಸರ್ಜಿಸಲಿದ್ದು, ಪೂರ್ವಭಾವಿಯಾಗಿ ಇರುಮುಡಿ ಪೂಜೆ ಹಮ್ಮಿಕೊಳ್ಳಲಾಗಿತ್ತು. ದೇವಾಲಯದಲ್ಲಿನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಮಾಲಾಧಾರಿಗಳು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಇರುಮುಡಿ ಪೂಜೆಯೊಂದಿಗೆ ಮಾಲೆ ವಿಸರ್ಜನೆಗೆ ಅಂಜನಾದ್ರಿ ಬೆಟ್ಟದತ್ತ ತೆರಳಿದರು. ಸಾಮೂಹಿಕ ಪ್ರಸಾದ ವಿತರಣೆ ಹಮ್ಮಿಕೊಳ್ಳಲಾಗಿತ್ತು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಆರಾಧ್ಯ ದೈವ ಹನುಮನ ಕೃಪೆಯಿಂದ ಕ್ಷೇತ್ರ ಸಮೃದ್ಧಿಯಾಗಿದ್ದು, ಅಂಜನಾದ್ರಿ ಬೆಟ್ಟ ವಿಶ್ವವಿಖ್ಯಾತವಾಗಿದೆ. ವರ್ಷದಿಂದ ವರ್ಷಕ್ಕೆ ಮಾಲಾಧಾರಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದರು.
ಮಾಲಾಧಾರಿಗಳಾದ ಪರಶುರಾಮ್ ಮಡ್ಡೇರ್, ಉಮೇಶ ಸಿಂಗನಾಳ್, ಅಯ್ಯನಗೌಡ ಹೇರೂರು, ನಂದಿಕಿಶೋರ್, ಮಂಜುನಾಥ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net