ಸಮಾಜಮುಖಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ

ಮಲ್ಲಾಪುರದಲ್ಲಿ ಗಂಗಾಪರಮೇಶ್ವರಿ ಜಯಂತಿ ನಿಮಿತ್ತ ವಿಶೇಷ ಪೂಜೆ ಗುರುವಾರ ನೆರವೇರಿಸಲಾಯಿತು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಎಚ್.ಎಂ. ಸಿದ್ರಾಮಯ್ಯಸ್ವಾಮಿ, ಎಚ್.ಸಿ. ಯಾದವ್ ಇತರರಿದ್ದರು.
ಮಲ್ಲಾಪುರದಲ್ಲಿ ಗಂಗಾಪರಮೇಶ್ವರಿ ಜಯಂತಿ ನಿಮಿತ್ತ ವಿಶೇಷ ಪೂಜೆ ಗುರುವಾರ ನೆರವೇರಿಸಲಾಯಿತು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಎಚ್.ಎಂ. ಸಿದ್ರಾಮಯ್ಯಸ್ವಾಮಿ, ಎಚ್.ಸಿ. ಯಾದವ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಪರಣ್ಣ ಮುನವಳ್ಳಿ ಕರೆ
  • ಮಲ್ಲಾಪುರದಲ್ಲಿ ಗಂಗಾಪರಮೇಶ್ವರಿ ಜಯಂತ್ಯುತ್ಸವ ಸಂಭ್ರಮ
ಗಂಗಾವತಿ: ಮಲ್ಲಾಪುರದಲ್ಲಿ ಗಂಗಾಮತ ಸಮಾಜದಿಂದ ಶ್ರೀ ಗಂಗಾಪರಮೇಶ್ವರಿ ಜಯಂತ್ಯುತ್ಸವ ಗುರುವಾರ ಹಮ್ಮಿಕೊಳ್ಳಲಾಗಿತ್ತು.
ಗಂಗಾಪರಮೇಶ್ವರಿ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಹೂವಿನ ಅಲಂಕಾರ ನೆರವೇರಿಸಲಾಯಿತು. ನಂತರ ಸಾರ್ವಜನಿಕರಿಗೆ ಸಾಮೂಹಿಕ ಅನ್ನಸಂತರ್ಪಣೆ ಜರುಗಿತು. ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳ ಜತೆಗೆ ಸಮಾಜಮುಖಿ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುವ ಅವಶ್ಯಕತೆಯಿದೆ. ಪ್ರತಿಯೊಬ್ಬರೂ ಶಿಕ್ಷಣವಂತರಾಗುವ ಮೂಲಕ ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಜಿಪಂ ಮಾಜಿ ಸದಸ್ಯ ಎಚ್.ಎಂ. ಸಿದ್ರಾಮಯ್ಯಸ್ವಾಮಿ, ವಕೀಲ ಎಚ್.ಸಿ. ಯಾದವ್, ಪ್ರಮುಖರಾದ ಯರ‌್ರಿಸ್ವಾಮಿ, ಜೈಪ್ರಕಾಶ, ನಾರಾಯಣಗೌಡ, ಮಾನಪ್ಪ, ಲಕ್ಷ್ಮ್ಮಣ, ವಿರುಪಣ್ಣ, ಚಂದ್ರಶೇಖರ, ಅಯ್ಯಪ್ಪ, ನಾಗರಾಜ್, ಸಿದ್ದಪ್ಪ, ಹೊನ್ನಪ್ಪ ರಾಂಪುರ, ಕರಿಯಪ್ಪ ಕುರುಬರ್ ಸೇರಿದಂತೆ ವಿವಿಧ ಸಮಾಜದ ಮುಖಂಡರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net