ಕೊಪ್ಪಳ, ಹಾಲವರ್ತಿ, ಭಾಗ್ಯನಗರ, ಬಗನಾಳ, ಅಲ್ಲಾನಗರ, ಕುಣಿಕೇರಿ ಸೇರಿ 10ಕ್ಕೂ ಹೆಚ್ಚು ಗ್ರಾಮಗಳು ಕಾರ್ಖಾನೆಗಳ ವಿಷಾನಿಲದಿಂದ ನರಳುತ್ತಿವೆ. ಇದೀಗ ಬಿಎಸ್ಪಿಲ್, ಭದ್ರಶ್ರೀ, ಕಿರ್ಲೊಸ್ಕರ್ ಸೇರಿ ಇನ್ನಿತರ ಕಾರ್ಖಾನೆಗಳ ಟಕ ವಿಸ್ತರಣೆಗೆ ಸರ್ಕಾರ ಅನುಮೋದನೆ ನೀಡಿದೆ. ಇದರಿಂದ ಕೊಪ್ಪಳ ಮತ್ತಷ್ಟು ಕಪ್ಪಾಗಲಿದೆ. ವಿಸ್ತರಣೆ ಖಂಡಿಸಿ ಗವಿಶ್ರೀಗಳ ನೇತೃತ್ವದಲ್ಲಿ ಕಳೆದ ವರ್ಷ ಬೃಹತ್ ಪ್ರತಿಭಟನೆ ನಡೆದರೂ ಸರ್ಕಾರ, ಜಿಲ್ಲೆಯ ಜನಪ್ರತಿನಿಧಿಗಳು ಎಚ್ಚೆತ್ತಿಲ್ಲ. ಕಳೆದ 116 ದಿನಗಳಿಂದಲೂ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ, ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಜಂಟಿಯಾಗಿ ಮುಷ್ಕರ ನಡೆಸಿವೆ. ನಾಡಿನ ಮಠಾಧೀಶರು, ಚಿಂತಕರು, ಹೋರಾಟಗಾರರು ಭಾಗಿಯಾಗಿ ಬೆಂಬಲ ನೀಡಿದ್ದಾರೆ.