ಆರೋಗ್ಯ ಸೇವೆ ಬಲಪಡಿಸಲು ಸಹಕಾರ ಅಗತ್ಯ

ಅಳವಂಡಿ ಗ್ರಾಪಂನಲ್ಲಿ ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿ ಗ್ರಾಮಸಭೆ ನಡೆಯಿತು. ಪಿಡಿಒ ಕೊಟ್ರಪ್ಪ ಅಂಗಡಿ, ಪ್ರಮುಖರಾದ ರವೀಂದ್ರ, ಸೈಯದ್ ಅಬ್ಬಾಸ್, ಸಾವಿತ್ರಿ, ಗುರುಬಸವರಾಜ, ಮಲ್ಲಪ್ಪ , ಹನುಮಂತ, ರೇಣುಕಪ್ಪ ಇತರರಿದ್ದರು.
ಅಳವಂಡಿ ಗ್ರಾಪಂನಲ್ಲಿ ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿ ಗ್ರಾಮಸಭೆ ನಡೆಯಿತು. ಪಿಡಿಒ ಕೊಟ್ರಪ್ಪ ಅಂಗಡಿ, ಪ್ರಮುಖರಾದ ರವೀಂದ್ರ, ಸೈಯದ್ ಅಬ್ಬಾಸ್, ಸಾವಿತ್ರಿ, ಗುರುಬಸವರಾಜ, ಮಲ್ಲಪ್ಪ , ಹನುಮಂತ, ರೇಣುಕಪ್ಪ ಇತರರಿದ್ದರು.
Published on

ಅಳವಂಡಿ: ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆಗಳನ್ನು ಮತ್ತಷ್ಟು ಬಲಪಡಿಸಲು ಸಮುದಾಯದ ಸಕ್ರಿಯ ಭಾಗವಹಿಸುವಿಕೆ ಅಗತ್ಯವಾಗಿದೆ ಎಂದು ಪಿಡಿಒ ಕೊಟ್ರಪ್ಪ ಅಂಗಡಿ ಹೇಳಿದರು.

ಗ್ರಾಪಂ ಆವರಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಏರ್ಪಡಿಸಿದ್ದ ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿ ಸಭೆಯಲ್ಲಿ ಮಾತನಾಡಿದರು. ಗ್ರಾಮದ ಪ್ರತಿಯೊಬ್ಬರಿಗೂ ಸರ್ಕಾರದ ಆರೋಗ್ಯ ಸೇವೆಗಳು ಸಮರ್ಪಕವಾಗಿ ತಲುಪುವಂತೆ ನೋಡಿಕೊಳ್ಳಬೇಕು. 
ಆರೋಗ್ಯ ಇಲಾಖೆಯ ವಿವಿಧ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಹಾಗೂ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಸಮಿತಿಯ ಪಾತ್ರ ಮಹತ್ವದ್ದಾಗಿದೆ. ಗ್ರಾಮದ ಆರೋಗ್ಯ ಸುಧಾರಣೆಗೆ ಪಂಚಾಯಿತಿ, ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿ ಸೈಯದ್ ಅಬ್ಬಾಸ್ ಮಾತನಾಡಿ, ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡುವುದು, ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದು ಹಾಗೂ ಆರೋಗ್ಯ ಸಮಸ್ಯೆಗಳ ಕುರಿತು ತಕ್ಷಣ ಆರೋಗ್ಯ ಸಿಬ್ಬಂದಿಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
ಪಿಎಚ್‌ಸಿಒ ಸಾವಿತ್ರಿ ಹಂಚಿನಾಳ,  ಎಸ್‌ಎಚ್‌ಐಒ ರವೀಂದ್ರ ಕಮ್ಮಾರ, ಪ್ರಮುಖರಾದ ತೋಟಯ್ಯ, ಅಶೋಕ, ಮಂಜುನಾಥ, ವಿಶ್ವನಾಥ, ಮಲ್ಲಮ್ಮ, ಅನ್ನಪೂರ್ಣ, ಗೀತಾ, ಶಾಹಿನಾಬೇಗಂ, ಫಕೀರಮ್ಮ, ಮಹಾದೇವಿ, ಜಾನಕಿ, ರಾಧಾಬಾಯಿ, ಶಕುಂತಲಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net