ಹರಾಜು ಪ್ರಕ್ರಿಯೆಯಲ್ಲಿ ಆಹಾರ ಇಲಾಖೆ ಡಿಡಿ ವಿಶ್ವನಾಥ ಗೈರಾಗಿದ್ದರಲ್ಲದೆ, ಮಾಹಿತಿಯಿಲ್ಲದ ತಹಸೀಲ್ದಾರ್ ಯು.ವಸಂತಕುಮಾರಿ ಅವರು ನಿರ್ವಹಿಸುವಲ್ಲಿ ವಿಲರಾದರು. ಗೊಂದಲದ ಸಮಯದಲ್ಲಿ ಕಾರಟಗಿ ಆಹಾರ ನಿರೀಕ್ಷಕ ನವೀನ ಮಠದ್ ವರ್ತನೆ ಬಿಡ್‌ದಾರರನ್ನು ರೇಗಿಸಿತ್ತಲ್ಲದೆ, ವಿಕೋಪಕ್ಕೆ ಹೋಗಲು ಕಾರಣವಾಯಿತು. ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪಿದ್ದರಿಂದ ಹರಾಜು ಪ್ರಕ್ರಿಯೆ ರದ್ದುಗೊಳಿಸಿ, ಮುಂದಿನ ದಿನಾಂಕ ತಿಳಿಸುವುದಾಗಿ ಹೇಳಿ ಅಧಿಕಾರಿಗಳು ಹೊರ ನಡೆದರು. ಬಿಡ್‌ದಾರರು ಅಸಮಾಧಾನ ವ್ಯಕ್ತಪಡಿಸಿ ನಿರಾಸೆಯಿಂದ ವಾಪಾಸಾದರು. ಡಿಡಿ ವಿಶ್ವನಾಥ ಯಾವುದೇ ಕರೆಗಳನ್ನು ಸ್ವೀಕರಿಸಲ್ಲ. ಕೊಪ್ಪಳದ ಕಚೇರಿಗೆ ತೆರಳಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಬಿಡ್‌ದಾರರು ಆಕ್ರೋಶ ವ್ಯಕ್ತಪಡಿಸಿದರು.