ಬಿಜೆಪಿ ಪಾದಯಾತ್ರೆ ಕೊಪ್ಪಳಕ್ಕೆ ಸೆ.4ರಂದು

ನವೀನ್​ ಗುಳಗಣ್ಣನವರ
ನವೀನ್​ ಗುಳಗಣ್ಣನವರ
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧ್ಯಕ್ಷ ನವೀನ್​ ಗುಳಗಣ್ಣವರ ಮಾಹಿತಿ
ಕೊಪ್ಪಳ: ರಾಜ್ಯ ಸರ್ಕಾರದ ವೈಲ್ಯ ಖಂಡಿಸಿ ಹಮ್ಮಿಕೊಂಡಿರುವ ಬಳ್ಳಾರಿ ಪಾದಯಾತ್ರೆ ಶುಕ್ರವಾರ (ಸೆ.4) ಕಾರಟಗಿ ತಾಲೂಕಿನ ಚನ್ನಳ್ಳಿ ಮೂಲಕ ಜಿಲ್ಲೆ ಪ್ರವೇಶಿಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ್​ ಗುಳಗಣ್ಣನವರ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಯಚೂರು ಜಿಲ್ಲೆಯ ಲಿಂಗಸ್ಗೂರಿನಿಂದ ಯಾತ್ರೆ ಆರಂಭವಾಗಿದ್ದು ಅಭೂತಪೂರ್ವ ಸ್ಪಂದನೆ ದೊರೆತಿದೆ. ಕಾಂಗ್ರೆಸ್​ ದುರಾಡಳಿತದಿಂದ ಬೇಸತ್ತ ಜನರು ಬೆಂಬಲ ನೀಡುತ್ತಿದ್ದಾರೆ. ಮಾಜಿ ಸಚಿವ ಬಿ.ನಾಗೇಂದ್ರ ರಾಜೀನಾಮೆ ಪಡೆಯುವುದು ಯಾತ್ರೆ ಉದ್ದೇಶವಲ್ಲ. 187 ಕೋಟಿ ರೂ. ಹಣ ವಾಪಸ್​ ಅರ್ಹ ಲಾನುಭವಿಗಳಿಗೆ ಸಿಗಬೇಕು. ಗೃಹಲಕ್ಷಿ$್ಮಯರ 5 ಸಾವಿರ ಕೋಟಿ ರೂ. ಲೆಕ್ಕ ಬೇಕು. ರಾಜ್ಯದ ಬರ ಪೀಡಿತ ತಾಲೂಕುಗಳಿಗೆ ನ್ಯಾಯ ಒದಗಿಸುವುದು ಸೇರಿ ಅನೇಕ ಬೇಡಿಕೆಗಳಿವೆ ಎಂದರು.
ಸೆ.4ರಂದು ಸಂಜೆ 4 ಗಂಟೆಗೆ ಚನ್ನಳ್ಳಿ ಕ್ರಾಸ್​ ಹತ್ತಿರ ಪಾದಯಾತ್ರೆ ಸ್ವಾಗತಿಸಲಾಗುವುದು. ಕಾರಟಗಿಯ ನವಲಿ ವೃತ್ತದಲ್ಲಿ ಬಹಿರಂಗ ಸಭೆ ಇರಲಿದ್ದು ರಾತ್ರಿ ಅಮ್ಮ ಮಹೇಶ್ವರಿ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಇರಲಿದೆ. ಸೆ.5ರ ಶನಿವಾರ ನವಲಿ ವೃತ್ತದಿಂದ ಆರಂಭವಾಗುವ ಪಾದಯಾತ್ರೆ ಮರ್ಲಾನಹಳ್ಳಿ, ಸಿದ್ದಾಪುರ, ಗುಂಡೂರು ಕ್ರಾಸ್​, ಶ್ರೀರಾಮನಗರ, ಮರಳಿ ಮಾರ್ಗವಾಗಿ ಜಂಗಮರ ಕಲ್ಗುಡಿಗೆ ಬರಲಿದೆ. ಸಂಜೆ ಬಹಿರಂಗ ಸಭೆ ಮೂಲಕ ಆ ದಿನದ ಕಾರ್ಯಕ್ರಮ ಮುಗಿಯುವುದು. ಸೆ.6ರಭಾನುವಾರ ಬೆಳಗ್ಗೆ 9ಕ್ಕೆ ಪಾದಯಾತ್ರೆ ಪ್ರಾರಂಭವಾಗಲಿದೆ. ಗಂಗಾವತಿ ಟಿಎಪಿಸಿಎಂಎಸ್​, ಚನ್ನಬಸವಸ್ವಾಮಿ ವೃತ್ತ, ದೇವಿನಗರ, ವಿನೋಬ ನಗರ ಮಾರ್ಗವಾಗಿ ಬಳ್ಳಾರಿ ಜಿಲ್ಲೆ ಕಂಪ್ಲಿಗೆ ಪ್ರವೇಶಿಸಲಿದೆ ಎಂದು ಮಾಹಿತಿ ನೀಡಿದರು.
ಪದಾಧಿಕಾರಿಗಳಾದ ಚಂದ್ರಶೇಖರಗೌಡ, ಸುನಿಲ್​ ಹೆಸರೂರು, ಶಿವಪ್ಪ ವಾದಿ, ವಿಜಯ ತಾಳಕೇರಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net