ತರಗತಿಗೆ ಚಕ್ಕರ್ ಹಾಕಿ ಸಮವಸ್ತ್ರದಲ್ಲಿಯೇ ಬಾವಿಯಲ್ಲಿ ಮೈ ಮರೆತ ಜೋಡಿ
ಜೋಡಿಯ ಕೆಸಲಕ್ಕೆ ಸಾರ್ವಜನಿಕರ ಬೇಸರ
ಕನಕಗಿರಿ:ಇಲ್ಲಿನ ಐತಿಹಾಸಿಕ ವೆಂಕಟಪತಿ ಬಾವಿಯಲ್ಲಿ ಹಾಡುಹಗಲೇ ಜೋಡಿಯೊಂದು ಮೈಮರೆತು ಸರಸದಲ್ಲಿ ತೊಡಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸ್ಮಾರಕ ಪ್ರಿಯರ ಬೇಸರಕ್ಕೆ ಕಾರಣವಾಗಿದೆ.
ಶಾಲಾ-ಕಾಲೇಜಿಗೆ ಬರುವ ವಿದ್ಯಾರ್ಥಿಗಳು ತರಗತಿಗೆ ಚಕ್ಕರ್ ಹಾಕಿ ಸಮವಸ್ತ್ರದಲ್ಲಿಯೇ ಈ ಬಾವಿಗೆ ಬಂದು ಮೈ ಮರೆತು ಸರಸದಲ್ಲಿ ತೊಡಗಿಕೊಳ್ಳುವುದು ಸಾಮಾನ್ಯವಾಗಿದೆ. ಈ ಹಿಂದೆ ಇಂತಹದ್ದೇ ಅಚಾತುರ್ಯವಾದಾಗ ಸಂಬಂಧಿಸಿದ ಕಾಲೇಜಿನವರು ವಿದ್ಯಾರ್ಥಿಗಳಿಗೆ ಬುದ್ಧಿವಾದ ಹೇಳಿದ್ದರು.
ಅದರಂತೆ ಬೇರೆಡೆ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಈ ಬಾವಿಗೆ ಬಂದು ಇಂಥ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಬಾವಿಯಲ್ಲಿ ಇತ್ತೀಚೆಗೆ ಆಗಾಗ ಸ್ವಚ್ಛತೆ ಮಾಡುತ್ತಿರುವುದರಿಂದ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ. ಅಲ್ಲದೇ, ವಾಯು ವಿಹಾರಕ್ಕೆ, ದಣಿವಾರಿಕೆಗೆ ಈ ಬಾವಿಯನ್ನು ಆಶ್ರಯಿಸಿದ್ದಾರೆ.
ಇದರಿಂದ ಜನರಿಂದ ಕೂಡಿರುತ್ತದೆ. ಕೆಲ ದಿನಗಳ ಹಿಂದೆಯಷ್ಟೇ ಈ ಬಾವಿಯ ರಕ್ಷಣೆಗಾಗಿ ಪ್ರವಾಸೋದ್ಯಮ ಇಲಾಖೆಯಿಂದ ಸಿಬ್ಬಂದಿ ನೇಮಿಸಲಾಗಿದೆ. ಆದರೂ ಅವರ ಕಣ್ತಪ್ಪಿಸಿ ಶುಕ್ರವಾರ ಶಾಲಾ ಅವಧಿಯಲ್ಲಿಯೇ ಸಮವಸ್ತ್ರದೊಂದಿಗೆ ವಿದ್ಯಾರ್ಥಿನಿ ಯುವಕನೊಂದಿಗೆ ಚುಂಬನದಲ್ಲಿ ತೊಡಗಿಕೊಂಡಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.