ಕನ್ನಡಿಗರು ಹೃದಯ ಶ್ರೀಮಂತರು

ಸಿಂಧನೂರು ತಾಲೂಕಿನ ಗಾಂಧಿನಗರದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ದಸರಾ ಕಾರ್ಯಕ್ರಮವನ್ನು ತೆಲುಗು ಚಿತ್ರನಟ ಮೇಕಾ ಶ್ರೀಕಾಂತ ಉದ್ಘಾಟಿಸಿದರು. ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ನಗರಸಭೆ ಅಧ್ಯಕ್ಷೆ ಮಂಜುಳಾ ಪ್ರಭುರಾಜ, ತಹಸೀಲ್ದಾರ್ ಅರುಣ್ ದೇಸಾಯಿ ಇತರರಿದ್ದರು.
ಸಿಂಧನೂರು ತಾಲೂಕಿನ ಗಾಂಧಿನಗರದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ದಸರಾ ಕಾರ್ಯಕ್ರಮವನ್ನು ತೆಲುಗು ಚಿತ್ರನಟ ಮೇಕಾ ಶ್ರೀಕಾಂತ ಉದ್ಘಾಟಿಸಿದರು. ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ನಗರಸಭೆ ಅಧ್ಯಕ್ಷೆ ಮಂಜುಳಾ ಪ್ರಭುರಾಜ, ತಹಸೀಲ್ದಾರ್ ಅರುಣ್ ದೇಸಾಯಿ ಇತರರಿದ್ದರು.
Published on

ಸಿಂಧನೂರು: ನಾನು ತೆಲಗು ಭಾಷಿಕನಾದರೂ, ಕನ್ನಡ ಇಷ್ಟ. ಕನ್ನಡಿಗರು ಹೃದಯವಂತರು. ಈ ಭಾಗದಲ್ಲಿ ಸಂಚರಿಸಲು ರೋಮಾಂಚನವಾಗುತ್ತದೆ ಎಂದು ತೆಲುಗು ಚಿತ್ರನಟ ಮೇಕಾ ಶ್ರೀಕಾಂತ ಹೇಳಿದರು.

ದಸರಾ ನಿಮಿತ್ತ ತಾಲೂಕಿನ ಗಾಂಧಿನಗರ ಶಿವಾಲಯದ ಸಮುದಾಯ ಭವನದಲ್ಲಿ ತಾಲೂಕಾಡಳಿತ, ತಾಪಂ, ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸಿಂಧನೂರು ದಸರಾ ಉತ್ಸವ ಸಮಿತಿ ಬುಧವಾರ ಹಮ್ಮಿಕೊಂಡಿದ್ದ ಗ್ರಾಮೀಣ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡಿಗರು ಸರಳ, ಸಜ್ಜನಿಕೆ, ಮೃದು ಸ್ವಭಾವದವರು. ಅನ್ಯ ಭಾಷಿಕರನ್ನು ಸಹೋದರರಂತೆ ಕಾಣುವುದು ಕನ್ನಡಿಗರ ವಿಶೇಷತೆ. ಕನ್ನಡ ಮತ್ತು ತೆಲುಗು ಭಾಷೆಗಳು ಸಹೋದರ ಭಾಷೆಗಳಾಗಿವೆ. ಗಂಗಾವತಿ ತಾಲೂಕಿನ ಬಸಾಪಟ್ಟಣದಲ್ಲಿ ಜನಿಸಿದ ನಾನು ನಟನಾಗಿ ಬೆಳೆದಿದ್ದು ಆಂಧ್ರಪ್ರದೇಶದಲ್ಲಿ. ಅಲ್ಲಿ ಹೆಸರುವಾಸಿಯಾಗಿದ್ದರೂ ಕನ್ನಡಿಗರನ್ನು ಎಂದಿಗೂ ಮರೆಯಲಾರೆ ಎಂದು ತಿಳಿಸಿದರು.

ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಕಳೆದ 40 ವರ್ಷಗಳ ಹಿಂದೆ ಎಲ್ಲ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಈಗ ದಸರಾ ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದರು. ಮಾಜಿ ಸಂಸದ ಕೆ.ವಿರೂಪಾಕ್ಷಪ ್ಪ ಮಾತನಾಡಿ, ಸಾಮರಸ್ಯ ಹೆಚ್ಚಿಸುವ ದಸರಾ ಆಚರಣೆ ಹೀಗೆ ಮುಂದುವರೆಯಲಿ. ಬನ್ನಿ ಹಂಚಿ ದ್ವೇಷ, ವೈಮನಸ್ಸನ್ನು ಮರೆತು ಪರಸ್ಪರ ಒಂದಾಗಿ ಬಾಳುವುದೇ ದಸರಾ ಹಬ್ಬದ ಮಹತ್ವ ಎಂದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ನಗರಸಭೆ ಅಧ್ಯಕ್ಷೆ ಮಂಜುಳಾ ಪ್ರಭುರಾಜ, ತಹಸೀಲ್ದಾರ್ ಅರುಣ್ ದೇಸಾಯಿ, ತಾಪಂ ಇಒ ಚಂದ್ರಶೇಖರ, ರೈಲ್ವೆ ಭೂಸ್ವಾಧೀನ ವಿಶೇಷ ಅಧಿಕಾರಿ ಕೆ.ಶ್ರುತಿ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಪನಗೌಡ ಬಾದರ್ಲಿ, ಎಸ್‌ಐಗಳಾದ ಎರಿಯಪ್ಪ, ಸುಜಾತಾ, ಮೌನೇಶ ರಾಠೋಡ್, ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ, ಅಂಬಾಮಠದ ಅಂಬಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ರಂಗನಗೌಡ ಗೊರೇಬಾಳ, ಪ್ರಮುಖರಾದ ಲಿಂಗರಾಜ ಪಾಟೀಲ್ ಹಂಚಿನಾಳ, ಬಸವರಾಜ ಹಿರೇಗೌಡರ್, ಗೋಪಿನೀಡಿ ಕೃಷ್ಣ, ಖಾಜಿಮಲಿಕ್ ವಕೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net