ದಸರಾ ಉತ್ಸವ ಭಾವೈಕ್ಯಕ್ಕೆ ಹೆಸರು

22Huk2
Published on

ಹುಕ್ಕೇರಿ: ಸ್ಥಳೀಯ ಹಿರೇಮಠದ ದಸರಾ ಉತ್ಸವವು ಭಾವೈಕ್ಯಕ್ಕೆ ಹೆಸರಾಗಿದೆ ಎಂದು ಎಂ.ಚಂದರಗಿ ಗುರು ಗಡದೇಶ್ವರ ಮಠದ ವೀರಭದ್ರ ಶಿವಯೋಗಿ ಶಿವಾಚಾರ್ಯರು ಹೇಳಿದರು.

ಹುಕ್ಕೇರಿ ಹಿರೇಮಠದ ದಸರಾ ಉತ್ಸವವನ್ನು ಸೋಮವಾರ ಉದ್ಘಾಟಸಿ ಮಾತನಾಡಿದರು. ಕೋಮು ಸೌಹಾರ್ದ ಮತ್ತು ಭಾವೈಕ್ಯ ಹೆಚ್ಚಿಸಲು ಹಬ್ಬ-ಹರಿದಿನಗಳು ಸಹಕಾರಿ. ಈ ಬಾರಿ ೯ ದಿನ ಭಕ್ತರಿಗೆ ಹೋಳಿಗೆ ಊಟ ನೀಡಲು ಮುಂದಾಗಿರುವುದು ಮೆಚ್ಚುಗೆಯ ಸಂಗತಿ ಎಂದರು.

ಮಹಾವೀರ ಸಮೂಹ ಸಂಸ್ಥೆಗಳ ಅಧ್ಯಕ್ಷ ಮಹಾವೀರ ನಿಲಜಗಿ ಮಾತನಾಡಿ, ಜನರಿಗೆ ಹೊಸತು ನೀಡುವ ಮನಸ್ಸಿನಿಂದ ಚಂದ್ರಶೇಖರ ಶಿವಾಚಾರ್ಯರು ಹೋಳಿಗೆ ಊಟ ಮಾಡಿಸುವುದು ಅಭಿಮಾನದ ಸಂಗತಿ ಎಂದರು.

ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ನವರಾತ್ರಿ ಅಸೂಯೆ ಗುಣ ಕಡಿಮೆ ಮಾಡಿ ದೈವಿಗುಣಗಳನ್ನು ಬೆಳೆಸುತ್ತದೆ. ದಸರಾ ಉತ್ಸವದ ೯ ದಿನ ಹೂರಣ, ಶೇಂಗಾ, ಗೆಣಸು ಸೇರಿ ವಿವಿಧ ಪ್ರಕಾರದ ಹೋಳಿಗೆ ಊಟ ಭಕ್ತರಿಗೆ ಏರ್ಪಡಿಸಲಾಗಿದೆ. ಪ್ರತಿದಿನ ರುದ್ರಾಭಿಷೇಕ, ದೇವಿ ಪಾರಾಯಣ, ಚಂಡಿಕಾ ಹೋಮ, ಪಲ್ಲಕ್ಕಿ ಮತ್ತು ರಥೋತ್ಸವ ಜರುಗಲಿವೆ ಎಂದರು.

ತಹಸೀಲ್ದಾರ್ ಬಲರಾಮ ಕಟ್ಟಿಮನಿ ದಸರಾ ಮಹೋತ್ಸವದ ಧ್ವಜಾರೋಹಣ ನೆರವೇರಿಸಿದರು. ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಸಂಪತಕುಮಾರ ಶಾಸ್ತಿçಗಳು, ದಿವಾಕರಭಟ್ಟ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾರದ ಸಹಾಯಕ ಅಭಿಯಂತ ಬಸವರಾಜ ಹಿರೇಮಠ, ಪುರಸಭೆ ಅಧ್ಯಕ್ಷ ಇಮ್ರಾನ್ ಮೊಮಿನ್, ಅಶೋಕ ಪಾಟೀಲ, ಸುಭಾಸ ನಾಯಿಕ, ಪರಗೌಡ ಪಾಟೀಲ, ಚನ್ನಪ್ಪ ಗಜಬರ, ಸುರೇಶ ಜಿನರಾಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net