ಆಪದ್ ಮಿತ್ರ ಯೋಜನೆಯಡಿ 300 ಸ್ವಯಂಸೇವಕರಿಗೆ ರಕ್ಷಣಾ ಕಿಟ್ ವಿತರಿಸಿದ ಡಿಸಿ ಇಕ್ರಮ್ ಶರೀಫ್

ಆಪದ್ ಮಿತ್ರ ಯೋಜನೆಯಡಿ 300 ಸ್ವಯಂಸೇವಕರಿಗೆ ರಕ್ಷಣಾ ಕಿಟ್ ವಿತರಿಸಿದ ಡಿಸಿ ಇಕ್ರಮ್ ಶರೀಫ್
Published on: 

ಕಲಬುರಗಿ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕೇಂದ್ರ ಪುರಸ್ಕೃತ ಆಪದ್ ಮಿತ್ರ ಯೋಜನೆಯಡಿ ವಿಪತ್ತಿನ ಸಂದರ್ಭದಲ್ಲಿ ತುರ್ತಾಗಿ ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗುವ ಜಿಲ್ಲೆಯ 300 ಸ್ವಯಂ ಸೇವಕರಿಗೆ ಜಿಲ್ಲಾಧಿಕಾರಿ ಇಕ್ರಂ ಶರೀಫ್ ಅವರು ಬುಧವಾರ ತಮ್ಮ ಕಚೇರಿಯಲ್ಲಿ ರಕ್ಷಣಾ ಸಾಮಗ್ರಿ ಒಳಗೊಂಡ ಕಿಟ್ ಗಳನ್ನು ಸ್ವಯಂ ಸೇವಕರಿಗೆ ವಿತರಣೆ ಮಾಡಿದರು.

ಪ್ರವಾಹ, ಚಂಡಮಾರುತ, ಭೂಕುಸಿತ ಹಾಗೂ ಭೂಕಂಪ ಸೇರಿದಂತೆ ವಿವಿಧ ವಿಪತ್ತುಗಳ ಸಂದರ್ಭದಲ್ಲಿ ಜನರ ರಕ್ಷಣೆಗೆ ತುರ್ತಾಗಿ ಧಾವಿಸಲು ಕಲಬುರಗಿ ಜಿಲ್ಲೆಯಿಂದ 300 ಸ್ವಯಂಸೇವಕರನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಆಯ್ಕೆ ಮಾಡಿ ಅಗತ್ಯ ತರಬೇತಿ‌ ಸಹ ನೀಡಲಾಗಿರುತ್ತದೆ.

ವಿಪತ್ತು ಪರಿಸ್ಥಿತಿಯಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆಗಳಿಗೆ ನೆರವಾಗುವಂತೆ ಅಗತ್ಯ ರಕ್ಷಣಾ ಸಾಮಗ್ರಿಗಳನ್ನು ಒಳಗೊಂಡ Emergency Responder Kits‌ಗಳನ್ನು ಇಂದಿಲ್ಲಿ ಆಯ್ದ ಸ್ವಯಂ ಸೇವಕರಿಗೆ ಡಿ.ಸಿ ಸಾಂಕೇತಿಕವಾಗಿ ವಿತರಿಸಿದರು.

ಪ್ರಭಾರಿ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ವಿಶ್ವನಾಥ, ಅಗ್ನಿಶಾಮಕ ಠಾಣಾಧಿಕಾರಿ ಪ್ರವೀಣ್, ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಉದನೂರ, ಆನಂದ ಸಿರಗಾಪೂರ, ಯುಸುಫ್ ರಾಜಾಪುರ, ಮಹಿಮೂದ್ದಿನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net