ವಿಕಸಿತ ಭಾರತ ಸಾಧನೆಗೆ ಕೊಡುಗೆ ನೀಡಿ

ಕಲಬುರಗಿ ಸಿಯುಕೆನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೌದ್ಧಿಕ ಆಸ್ತಿ- ನೈತಿಕತೆ ರಾಷ್ಟ್ರೀಯ ಕಾರ್ಯಾಗಾರಕ್ಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಚಾಲನೆ ನೀಡಿದರು. ಡಾ.ಕನಿಕಾ ಮಲಿಕ್​, ಪ್ರೊ.ಎಂ.ಅಮರೇಂದ್ರ ಮತ್ಸ, ಪ್ರೊ.ಬಸವರಾಜ ಕುಬಕಡ್ಡಿ, ಡಾ.ಅಶೋಕ್​ ವಾಡ್ಜೆ ಇತರರಿದ್ದರು.
ಕಲಬುರಗಿ ಸಿಯುಕೆನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೌದ್ಧಿಕ ಆಸ್ತಿ- ನೈತಿಕತೆ ರಾಷ್ಟ್ರೀಯ ಕಾರ್ಯಾಗಾರಕ್ಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಚಾಲನೆ ನೀಡಿದರು. ಡಾ.ಕನಿಕಾ ಮಲಿಕ್​, ಪ್ರೊ.ಎಂ.ಅಮರೇಂದ್ರ ಮತ್ಸ, ಪ್ರೊ.ಬಸವರಾಜ ಕುಬಕಡ್ಡಿ, ಡಾ.ಅಶೋಕ್​ ವಾಡ್ಜೆ ಇತರರಿದ್ದರು.
Published on: 

ಕಲಬುರಗಿ: ವಿದ್ಯಾರ್ಥಿಗಳು ತಮ್ಮ ಆಲೋಚನೆಗಳ ಆವಿಷ್ಕಾರಗಳನ್ನು ಪೇಟೆಂಟ್​, ನವೀನ ಉತ್ಪನ್ನ ಮತ್ತು ಸ್ಟಾರ್ಟಪ್​ಗಳಾಗಿ ಪರಿವರ್ತಿಸಿ ವಿಕಸಿತ ಭಾರತ-2047 ಗುರಿ ಸಾಧನೆಗೆ ಕೊಡುಗೆ ನೀಡಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ವಿಭಾಗದ ಆಂತರಿಕ ಗುಣಮಟ್ಟ ಭರವಸೆ ಕೋಶದ (ಐಕ್ಯೂಎಸಿ) ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೌದ್ಧಿಕ ಆಸ್ತಿ ಮತ್ತು ನೈತಿಕತೆ ಕುರಿತು ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸಂಶೋಧನೆ, ನಾವೀನ್ಯತೆ ಹಾಗೂ ನೈತಿಕ ಸಂಶೋಧನಾ ಪದ್ಧತಿಗಳಿಗೆ ಆದ್ಯತೆ ನೀಡಿ ರಾಷ್ಟ್ರೀಯ ಅಭಿವೃದ್ಧಿ ಮತ್ತು ಆತ್ಮನಿರ್ಭರ ಭಾರತ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ನವದೆಹಲಿಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಹಿರಿಯ, ಪ್ರಧಾನ ವಿಜ್ಞಾನಿ ಡಾ.ಕನಿಕಾ ಮಲಿಕ್​ ಮಾತನಾಡಿ, ಪೇಟೆಂಟ್​ ಕರಡು ರಚನೆ, ಪರವಾನಗಿ ಮತ್ತು ಬೌದ್ಧಿಕ ಆಸ್ತಿ ನಿರ್ವಹಣೆಯ ಕುರಿತು ಅರಿವು ಬೆಳೆಸಿಕೊಳ್ಳಬೇಕು. ವೈಜ್ಞಾನಿಕ ಸಂಶೋಧನೆಗಳನ್ನು ನವೀನ ಪರಿಹಾರಗಳಾಗಿ ಪರಿವರ್ತಿಸುವ ಮೂಲಕ ರಾಷ್ಟ್ರೀಯ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಬೇಕು ಎಂದರು.

ಕಾನೂನು ಅಧ್ಯಯನ ನಿಕಾಯದ ಡೀನ್​ ಪ್ರೊ.ಬಸವರಾಜ ಕುಬಕಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪೇಟೆಂಟ್​ಗಳ ಮೂಲಕ ತಮ್ಮ ಆವಿಷ್ಕಾರಗಳಿಗೆ ರಕ್ಷಣೆ ಒದಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರೊ.ಎಂ.ಅಮರೇಂದ್ರ, ಭೌತ ವಿಜ್ಞಾನಗಳ ನಿಕಾಯದ ಡೀನ್​ ಪ್ರೊ.ರಾಜೀವ್​ ಜೋಶಿ, ಐಕ್ಯೂಎಸಿ ನಿರ್ದೇಶಕ, ಇಂಜಿನಿಯರಿಂಗ್​ ನಿಕಾಯದ ಡೀನ್​ ಪ್ರೊ.ಎಂ.ಅಮರೇಂದ್ರ ಮತ್ಸ, ಸಹ ಪ್ರಾಧ್ಯಾಪಕ ಡಾ.ಅಶೋಕ್​ ವಾಡ್ಜೆ, ಗಣಕ ವಿಜ್ಞಾನ ನಿಕಾಯದ ಡೀನ್​ ಪ್ರೊ.ಆರ್​.ಎಸ್​.ಹೆಗಡಿ, ರಾಸಾಯನಿಕ ವಿಜ್ಞಾನಗಳ ನಿಕಾಯದ ಡೀನ್​ ಪ್ರೊ.ಪಲ್ಲೆಪೋಗು ರಾವಯ್ಯ, ಸಹ&ಸಂಯೋಜಕಿ ಜುನು ದಾಸ್​, ಪ್ರಮುಖರಾದ ಪ್ರೊ.ಪ್ರಮೋದ್​ ಕುಮಾರ್​, ಡಾ.ರೇಣುಕಾ ಗುಬ್ಬೇವಾಡ, ಡಾ. ಜಗದೀಶ್​ ಚಂದ್ರ, ಡಾ.ವೈಷ್ಣವಿ ನಾರಾಯಣಿ, ಡಾ.ಕೃಷ್ಣಕುಮಾರ್​ ಶರ್ಮಾ, ಡಾ.ತಿಲಕಾ, ಡಾ.ಗುರುರಾಜ ಮುಕರಂಬಿ, ಡಾ.ಮಯೂರ್​ ಪೂಜಾರ್​, ಡಾ.ಜಗದೀಶ್​ ಬಿರಾದಾರ, ಡಾ.ಮಲ್ಲಿಕಾರ್ಜುನ ಆನಂದ ಹಳ್ಳಿ ಇತರರಿದ್ದರು.

ಸಂಯೋಜಕಿ ಡಾ.ಶಶಿರೇಖಾ ಮಾಳಗಿ ಸ್ವಾಗತಿಸಿದರು. ಕಾನೂನು ವಿಭಾಗದ ಮುಖ್ಯಸ್ಥ ಡಾ.ಅನಂತ ಚಿಂಚುರೆ ವಂದಿಸಿದರು.

ವಿಕಸಿತ ಭಾರತ ನಿರ್ಮಾಣಕ್ಕೆ ಪೇಟೆಂಟ್​ಗಳ ಕುರಿತು ಅರಿವು ಮತ್ತು ತಾಂತ್ರಿಕ ನಾವೀನ್ಯತೆ ಅತ್ಯಗತ್ಯ. ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ.
> ಪ್ರೊ.ಎಂ.ಅಮರೇಂದ್ರ ಮತ್ಸ, ಡೀನ್​, ಇಂಜಿನಿಯರಿಂಗ್​ ನಿಕಾಯ, ಸಿಯುಕೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net