Gold jeweller ಕಳವಾಗಿದ್ದ 185 ಗ್ರಾಂ ಚಿನ್ನಾಭರಣ ವಶ

ಮುಂಡರಗಿ ಪಟ್ಟಣದ ಎ.ಡಿ. ನಗರದಲ್ಲಿ ಕಳ್ಳತನವಾಗಿದ್ದ ಬಂಗಾರದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿರುವುದು.
ಮುಂಡರಗಿ ಪಟ್ಟಣದ ಎ.ಡಿ. ನಗರದಲ್ಲಿ ಕಳ್ಳತನವಾಗಿದ್ದ ಬಂಗಾರದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿರುವುದು.
Published on

ಪಟ್ಟಣದ ಎ.ಡಿ. ನಗರದ ಮನೆಯೊಂದರಲ್ಲಿ ಕಳ್ಳತನವಾಗಿದ್ದ ಲಕ್ಷಾಂತರ ರೂ. ಮೌಲ್ಯದ ಬಂಗಾರದ ಆಭರಣಗಳನ್ನು 21 ಗಂಟೆಗಳಲ್ಲಿ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಗುರುವಾರ ಯಶಸ್ವಿಯಾಗಿದ್ದಾರೆ.

ಕಳ್ಳತನವಾಗಿದ್ದ ಮನೆಯಲ್ಲಿ ಸುಮಾರು 12 ವರ್ಷಗಳಿಂದ ಮನೆಕೆಲಸ ಮಾಡುತ್ತಿದ್ದ ಪಟ್ಟಣದ ಲಲಿತಾ ಈರಪ್ಪ ಗೊಂಡಬಾಳ ಬಂಧಿತ ಆರೋಪಿ. ಎ.ಡಿ. ನಗರದಲ್ಲಿ ಶಿಕ್ಷಣ ಇಲಾಖೆಯ ಎಫ್‌ಡಿಎ ವಸಂತ ಮೊರಬ ಎಂಬುವವರ ಮನೆಯಲ್ಲಿ ಆಭರಣಗಳ ಕಳವಾಗಿತ್ತು. ಈ ಕುರಿತು ಆ. 26ರಂದು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಎಸ್‌ಪಿ ರೋಹನ್ ಜಗದೀಶ ಅವರು ಪ್ರಕರಣದ ಪತ್ತೆ ಕಾರ್ಯಕ್ಕೆ ವಿಶೇಷ ತಂಡ ರಚಿಸಿದ್ದರು. ಪೊಲೀಸರು ಆರೋಪಿತ ಮಹಿಳೆಯನ್ನು ಬಂಧಿಸಿ ಅಂದಾಜು 14,80,000 ರೂ. ಮೌಲ್ಯದ 185 ಗ್ರಾಂ. ಬಂಗಾರದ ವಿವಿಧ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿಎಸ್‌ಪಿ ಪ್ರಭುಗೌಡ ಡಿ.ಕೆ, ಸಿಪಿಐ ಅಯ್ಯನಗೌಡ ಪಾಟೀಲ, ಪಿಎಸ್‌ಐ ಬಿ.ಎನ್.ಯಳವತ್ತಿ, ಪೊಲೀಸ್ ಸಿಬ್ಬಂದಿ ಜೆ.ಐ.ಬಚ್ಚೇರಿ, ಅಶೋಕ ಬೂದಿಹಾಳ, ಮಂಜುನಾಥ ಅಗಸಿಮನಿ, ಗಂಗಾಧರ ಮಜ್ಜಗಿ, ಎಚ್.ಕೆ. ನದಾಫ್, ಶರಣಪ್ಪ ಓಜನಹಳ್ಳಿ, ಭಾಗ್ಯ ಪತ್ತಾರ, ಎಂ.ಎ. ಕೋಟಗಿ, ಜಿ.ಎಫ್. ಉಪ್ಪಾರ ಅವರಿಗೆ ಎಸ್‌ಪಿ ಬಹುಮಾನ ಘೋಷಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net