ಸರ್ವ ಕಾಲೇಜು ವಿದ್ಯಾರ್ಥಿ ಪದಗ್ರಹಣ ವೇಳೆ ದುರಂತ

ಸಭಾಂಗಣದ ವರಾಂಡ ಆವರಣ ಗೋಡೆ ಕುಸಿದು ಓರ್ವ ವಿದ್ಯಾರ್ಥಿ ಗಂಭಿರ
Tragedy during college convocation
Student dies after auditorium veranda wall collapses
ಸಭಾಂಗಣದ ಮೊದಲ ಮಹಡಿಯ ವರಾಂಡದ ಆವರಣ ಗೋಡೆ ಕುಸಿದು ಬಿದ್ದಿರುವುದು.
Published on: 

ಮಂಗಳೂರು: ನಗರದ ಎಮ್ಮೆಕೆರೆ ರಮಾಲಕ್ಷ್ಮೀ ನಾರಾಯಣ ಕನ್ವೆನ್‌ಷನ್ ಸಭಾಂಗಣದಲ್ಲಿ ಶನಿವಾರ ಸರ್ವ ಕಾಲೇಜು ವಿದ್ಯಾರ್ಥಿಗಳ ಚುನಾವಣೆ ಹಾಗೂ ಪದಗ್ರಹಣ ಕಾರ್ಯಕ್ರಮದ ವೇಳೆ ಸಭಾಂಗಣದ ವರಾಂಡದ ಆವರಣ ಗೋಡೆ ಕುಸಿದು ಬಿದ್ದ ಪರಿಣಾಮ ಒಬ್ಬ ವಿದ್ಯಾರ್ಥಿ ಗಂಭಿರ ಗಾಯಗೊಂಡಿದ್ದಾರೆ.

ಹಳೆಯಂಗಡಿ ನಿವಾಸಿ ಮಹಮ್ಮದ್ ಶಮಾಜ್ (16) ಗಂಭಿರ ಗಾಯಗೊಂಡ ವಿದ್ಯಾರ್ಥಿ. ಘಟನೆಯಲ್ಲಿ ಸೂರಿಂಜೆ ನಿವಾಸಿ ಮಹಮ್ಮದ್ ಶನಾನ್ ಅಹಮ್ಮದ್ (18), ಅಡ್ಯಾರ್ ನಿವಾಸಿ ಹನ್ೀ (23), ಕಾವೂರು ಗಾಂಧಿನಗರ ನಿವಾಸಿ ದಾವೂದ್ ರ್ಸಿನ್ ಅಹಮ್ಮದ್ (18) ಗಾಯಗೊಂಡಿದ್ದಾರೆ.

ಘಟನೆ ವಿವರ: ಶನಿವಾರ ಮಧ್ಯಾಹ್ನ ವೇಳೆ ಚುನಾವಣೆ ನಡೆದು ವಿಜೇತರ ಘೋಷಣೆಯಾಗಿ ಪದಗ್ರಹಣ ನಡೆಯುತ್ತಿದ್ದ ವೇಳೆ ಸಭಾಂಗಣದ ಒಂದನೇ ಮಹಡಿಯ ಪ್ಯಾಸೇಜ್‌ನ ತಡೆಗೋಡೆಗೆ ಹಲವು ವಿದ್ಯಾರ್ಥಿಗಳು ಒರಗಿದ್ದರು. ಈ ಸಂದರ್ಭ ಏಕಾಏಕಿ ತಡೆಗೋಡೆ ಕುಸಿದು ಕೆಳಕ್ಕೆ ಬಿದ್ದಿದ್ದು, ಇದರಿಂದ ಮೂವರು ವಿದ್ಯಾರ್ಥಿಗಳು ಕೂಡಾ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಇದೇ ವೇಳೆ ಕೆಳಗೆ ನಿಂತಿದ್ದ ವಿದ್ಯಾರ್ಥಿ ಸೇರಿದಂತೆ ಒಟ್ಟು 4 ಮಂದಿ ಗಂಭಿರ ಗಾಯಗೊಂಡಿದ್ದಾರೆ. ಈ ಪೈಕಿ ಮಹಮ್ಮದ್ ಶಮಾಜ್ ಮೃತಪಟ್ಟಿದ್ದಾರೆ.

ವಿದ್ಯಾರ್ಥಿಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಡಿಕ್ಕಿಯಾಗಿ ಗಾಯ:

ಚುನಾವಣೆ ನಡೆಯುತ್ತಿದ್ದ ವೇಳೆ ರಸ್ತೆಯಲ್ಲಿ ತೆರಳುತ್ತಿದ್ದ ಕಾರೊಂದು ಡಿಕ್ಕಿಯಾಗಿ ಕಸಬ ಬೆಂಗ್ರೆ ನಿವಾಸಿ ಮಹಮ್ಮದ್ ಶಾಕೀಲ್ ಹುಸೈನ್(18) ಗಾಯಗೊಂಡಿದ್ದಾರೆ. ಆತನನ್ನು ಕೂಡಾ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net