

ಶಿರ್ವ: ಮಸ್ಕತ್‌ನಲ್ಲಿ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿದ್ದ ಶಿರ್ವದ ಮೂಲದ ಯುವಕ ಜೀವನ್ ಶೇಖರ ಪೂಜಾರಿ(35) ಹೃದಯಾಘಾತದಿಂದ ಶನಿವಾರ ಮೃತಪಟ್ಟಿದ್ದಾರೆ.
ಮೂಲತಃ ಕಟಪಾಡಿ ಸಸಿತೋಟ ಏಣಗುಡ್ಡೆಯ ನಿವಾಸಿ ಪ್ರಸ್ತುತ ಶಿರ್ವ ಮಿತ್ರಬೆಟ್ಟುವಿನಲ್ಲಿ ವಾಸ್ತವ್ಯ ಹೂಡಿದ್ದ ಅವರು ಕಳೆದ 10 ವರ್ಷಗಳಿಂದ ಮಸ್ಕತ್‌ನಲ್ಲಿ ಉದ್ಯೋಗಿಯಾಗಿದ್ದರು.
ಒಮನ್ ಬಿಲ್ಲವಾಸ್ ವಾಜಿ ಅಧ್ಯಕ್ಷ ಸುಜಿತ್ ಅಂಚನ್ ಪಾಂಗಾಳ ಸಹಕಾರದಿಂದ ಶವವನ್ನು ಮಂಗಳೂರಿಗೆ ವಿವಾನದ ಮೂಲಕ ರವಾನಿಸಲಾಗಿತ್ತು. ತಂದೆ, ತಾಯಿ, ಇಬ್ಬರು ಸಹೋದರಿಯರು, ಸಹೋದರನನ್ನು ಅಗಲಿದ್ದಾರೆ.
ಸೆ.22ರಂದು ಬೆಳಗ್ಗೆ ಮಂಜು ಮುಸುಕಿದ ವಾತಾವರಣದ ಕಾರಣ ಲ್ಯಾಂಡಿಂಗ್ ಸಾಧ್ಯವಾಗದೆ ವಿವಾನವು ಬೆಂಗಳೂರು ವಿವಾನ ನಿಲ್ದಾಣಕ್ಕೆ ತೆರಳಿತ್ತು. ಬಳಿಕ ಮಧ್ಯಾಹ್ನ 11 ಗಂಟೆಯ ಸುವಾರಿಗೆ ಹಿಂತಿರುಗಿ ಮಂಗಳೂರು ವಿವಾನ ನಿಲ್ದಾಣದಲ್ಲಿ ಲ್ಯಾಂಡ್ ಆದಾಗ ಬಳಿಕ ಸಹೋದರ ರಿಶಾನ್ ಶವ ಸ್ವೀಕರಿಸಿ ಮಿತ್ರಬೆಟ್ಟುವಿನ ಮನೆಗೆ ಕರೆತಂದರು. ಮನೆಯಲ್ಲಿ ಅಂತಿಮ ವಿಧಿ ವಿಧಾನ ನೆರವೇರಿಸಿ ಬಳಿಕ ಪದವು ಹಿಂದೂ ರುದ್ರ ಭೂಮಿಯಲ್ಲಿ ಅಂತಿಮ ವಿಧಿವಿದಾನ ನಡೆಸಲಾಯಿತು.