ವಿಟ್ಲ: ಹಿಂದಿನ ಕಾಲದಲ್ಲಿ ಸಭೆ, ಸಮಾರಂಭ ತೆಂಗಿನ ಗರಿ ಚಪ್ಪರದಲ್ಲಿ ನಡೆಯುತ್ತಿತ್ತು. ಇಂದು ಶಾಮಿಯಾನದವರು ಇಲ್ಲದಿದ್ದರೆ ಯಾವುದೇ ಕಾರ್ಯಕ್ರಮ ನಡೆಯದ ಪರಿಸ್ಥಿತಿಯಿದೆ. ಮಿಲನೋತ್ಸವ ಕಾರ್ಯಕ್ರಮ ವಿಶಿಷ್ಟವಾಗಿ ನಡೆದಿದ್ದು, ಮುಂದೆ ಇನ್ನಷ್ಟು ದೊಡ್ಡ ಮಟ್ಟದಲ್ಲಿ ನಡೆಯುವಂತಾಗಲಿ ಎಂದು ವಿಟ್ಲ ಅರಮನೆಯ ಬಂಗಾರು ಅರಸರು ಹೇಳಿದರು.
ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲೀಕರ ಸಂಘದ ವಾರ್ಷಿಕ ಮಿಲನೋತ್ಸವ-೨೦೨೬ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ವಿಟ್ಲ ಗ್ರಾಮೀಣ ಸಹಕಾರಿ ಸಂಘದ ಅಧ್ಯಕ್ಷ ಎಚ್.ಜಗನ್ನಾಥ ಸಾಲಿಯಾನ್ ಮಾತನಾಡಿ, ಕಠಿಣ ಪರಿಶ್ರಮದ ಕೆಲಸವನ್ನು ಅಚ್ಚುಕಟ್ಟಾಗಿ ನಡೆಸುವವರು ಶಾಮಿಯಾನದವರು. ಸವಾಲುಗಳ ನಡುವೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರಿಗೆ ಇನ್ನಷ್ಟು ಯಶಸ್ಸು ಲಭಿಸಲಿ ಎಂದು ಹಾರೈಸಿದರು.
ಗೌರವಾರ್ಪಣೆ: ದೈಹಿಕ ಶಿಕ್ಷಣ ಶಿಕ್ಷಕ ಭಾನುಪ್ರಕಾಶ್ ತಂಡಕ್ಕೆ ಜವಾಬ್ದಾರಿ ಹಂಚಲಾಯಿತು. ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷ ಶ್ರೀಧರ ಶೆಟ್ಟಿ, ಪ್ರಾಂಶುಪಾಲ ಜಯರಾಮ ರೈ, ಸಂಗೀತ ಸ್ಪರ್ಧೆ ವಿಜೇತ ಅಶ್ಮಿತ್ ಎ.ಜೆ. ಅವರನ್ನು ಗೌರವಿಸಲಾಯಿತು.
ದ.ಕ.ಜಿಲ್ಲಾ ಶಾಮಿಯಾನ ಮಾಲೀಕರ ಸಂಘದ ಅಧ್ಯಕ್ಷ ಬಾಬು ಕೆ.ವಿ.ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ಪಪಂ ಅಧ್ಯಕ್ಷ ಕರುಣಾಕರ ಗೌಡ, ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷ ಶ್ರೀಧರ್ ಶೆಟ್ಟಿ, ದ.ಕ. ಶಾಮಿಯಾನ ಮಾಲೀಕರ ಸಂಘ ಮಂಗಳೂರು ಘಟಕದ ಅಧ್ಯಕ್ಷ ನಿಶಿತ್ ಪೂಜಾರಿ, ಬಂಟ್ವಾಳ ಘಟಕದ ಅಧ್ಯಕ್ಷ ಐವನ್ ಡಿಸೋಜ, ಮೂಡುಬಿದಿರೆ ಘಟಕ ಅಧ್ಯಕ್ಷ ರಮಾನಾಥ ಸಾಲ್ಯಾನ್, ಬೆಳ್ತಂಗಡಿ ಘಟಕದ ಅಧ್ಯಕ್ಷ ಅರುಣ್ ಮೋರಾಸ್, ದ.ಕ. ಧ್ವನಿ, ಬೆಳಕು ಮತ್ತು ಶಾಮಿಯಾನ ಡೆಕೋರೇಶನ್ ಮಾಲೀಕರ ಸಂಘ ಕಡಬ ಘಟಕದ ಅಧ್ಯಕ್ಷ ಉಮೇಶ್, ಪುತ್ತೂರು ಘಟಕದ ಅಧ್ಯಕ್ಷ ಯೋಗೀಶ್ ಕಾವು, ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಶಿವಪ್ರಸಾದ್ ಹೆಗಡೆ, ಸುಭಾಶ್ಚಂದ್ರ ಜೈನ್, ಕ್ಲೆವರ್ ಡಿಸೋಜ, ಅಬ್ದುಲ್ ಲತೀಫ್, ವಿಟ್ಲ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.
ವಿಟ್ಲ ಘಟಕದ ಅಧ್ಯಕ್ಷ ಪದನಾಭ ಶೆಟ್ಟಿ ಸ್ವಾಗತಿಸಿದರು. ಇಸ್ಮಾಯಿಲ್ ಬನಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಟ್ಲ ಘಟಕದ ಕ್ರೀಡಾ ಕಾರ್ಯದರ್ಶಿ ರಾಜಶೇಖರ ಶೆಟ್ಟಿ ವಂದಿಸಿದರು.