ವಿಶ್ವ ಸಂಭ್ರಮ ಮಹೋತ್ಸವದಲ್ಲಿ ನ್ಯಾಯ ಸುಧಾ ವಿದ್ಯಾರ್ಥಿಗಳ ಸುಧಾನುವಾದವು ಪಂಡಿತರ ಸಮಕ್ಷಮದಲ್ಲಿ ನೆರವೇರಿತು. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಶ್ರೀ ಮಠದ ದಿವಾನ ಸುದರ್ಶನ ಜೋಯೀಸ ಇತರರಿದ್ದರು.
Published on:
Copied
Follow Us
ಬೆಳಗ್ಗೆ ಅನೇಕ ಪಂಡಿತರು, ಮಹಿಳೆಯರಿಂದ ವಿಷ್ಣುಸಹಸ್ರನಾಮ ಪಾರಾಯಣ, ಶ್ರೀ ನ್ಯಾಯ ಸುಧಾ ವಿದ್ಯಾರ್ಥಿಗಳ ಸುಧಾನುವಾದವು ಪಂಡಿತರ ಸಮಕ್ಷಮದಲ್ಲಿ ನೆರವೇರಿತು.
ಪ್ರಥಮ ಸಮ್ಮೇಳನ
ಮಧ್ಯ ಸಿದ್ಧಾಂತದ ಅಸಾಧಾರಣ ಕೊಡುಗೆಗಳು ವಿಷಯದಲ್ಲಿ ಪ್ರಥಮ ಸಮ್ಮೇಳನ ಜರುಗಿತು. ವಿದ್ವಾಂಸ ಡಾ.ಆನಂದತೀರ್ಥ ನಾಗಸಂಪಿಗೆ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಮಧ್ವ ಸಿದ್ಧಾಂತದಲ್ಲಿ ತಂತ್ರಶಾಸ್ತ್ರ ಕುರಿತು ವಿವರಿಸಿದರು. ಡಾ.ವಂಶಿಕೃಷ್ಣ ಆಚಾರ್ಯರು ಮಧ್ವ ಸಿದ್ಧಾಂತದಲ್ಲಿರುವ ಅಷ್ಟಾಂಗ ಯೋಗದ ಕುರಿತು ಪ್ರಬಂಧ ಮಂಡಿಸಿದರು. ವಿದ್ವಾನ್ ಕಿರಣ ಆಚಾರ್ಯರು ಉಪಾಸನೆ ಬಗ್ಗೆ ಮಾಹಿತಿ ನೀಡಿದರು. ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಶ್ರೀನಿವಾಸ ವರಖೇಡಿ ಗಣರಾಜ್ಯೋತ್ಸವದ ಸಂದೇಶದೊಂದಿಗೆ ನಮಗಿರಬೇಕಾದ ಧರ್ಮ ದೇಶದ ಜಾಗೃತಿ ಬಗ್ಗೆ ಉಪನ್ಯಾಸ ನೀಡಿದರು. ವಿದ್ವಾನ್ ಹರೀಶ್ ಸರಳಾಯ ಕೊಂಡಾಡಿ ಕಾರ್ಯಕ್ರಮ ನಿರೂಪಿಸಿದರು.