ತಾಳಮದ್ದಳೆಗಿದೆ ಅಪಾರ ಅಭಿಮಾನಿ ಬಳಗ

ತಾಳಮದ್ದಳೆ ’ಯಕ್ಷತ್ರಿವೇಣಿ’
ಯಕ್ಷತ್ರಿವೇಣಿ ತಾಳಮದ್ದಳೆ ಕಾರ್ಯಕ್ರಮಕ್ಕೆ  ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ಚಾಲನೆ ನೀಡಿದರು. ಕಶೆಕೋಡಿ ಸೂರ್ಯನಾರಾಯಣ ಭಟ್, ಹರೀಶ ಮಾಂಬಾಡಿ ಮತ್ತಿತರರು ಇದ್ದರು.
ಯಕ್ಷತ್ರಿವೇಣಿ ತಾಳಮದ್ದಳೆ ಕಾರ್ಯಕ್ರಮಕ್ಕೆ ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ಚಾಲನೆ ನೀಡಿದರು. ಕಶೆಕೋಡಿ ಸೂರ್ಯನಾರಾಯಣ ಭಟ್, ಹರೀಶ ಮಾಂಬಾಡಿ ಮತ್ತಿತರರು ಇದ್ದರು.
Published on: 

ಬಂಟ್ವಾಳ: ಯಕ್ಷಗಾನವನ್ನು ಉಳಿಸಿ ಪೋಷಿಸುವ ಕಾರ್ಯ ಮಹತ್ತರವಾದದ್ದು. ಆಧುನಿಕ ಸೌಕರ್ಯಗಳಿರುವ ಹಿನ್ನೆಲೆ ಕಾರ್ಯಕ್ರಮಗಳಿಗೆ ಆಗಮಿಸುವ ಪ್ರೇಕ್ಷಕರ ಸಂಖ್ಯೆ ವಿರಳವಾದರೂ ತಾಳಮದ್ದಳೆಯ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿದ್ದಾರೆ ಎಂದು ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ಹೇಳಿದರು.

ಮುಡಿಪು ವಿಶ್ವಭಾರತಿ ಯಕ್ಷಸಂಜೀವಿನಿ ಟ್ರಸ್ಟ್ ವತಿಯಿಂದ ಕಲಾಶ್ರಯ ದಾಸಕೋಡಿ ಸಹಭಾಗಿತ್ವದಲ್ಲಿ ವಿಶ್ವಭಾರತಿ ಯಕ್ಷಸಂಭ್ರಮ- 900ರ ಸಂಭ್ರಮ ಯಕ್ಷತ್ರಿವೇಣಿ ಎಂಬ ಹೆಸರಲ್ಲಿ ದಾಸಕೋಡಿಯ ಕಲಾಶ್ರಯದಲ್ಲಿ ಆರಂಭಗೊಂಡ ಮೂರು ದಿನಗಳ ತಾಳಮದ್ದಳೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್, ತಾಳಮದ್ದಳೆಯಲ್ಲಿ ಅರ್ಥ ಹೇಳುವುದು ಮತ್ತು ರಂಗಸ್ಥಳದಲ್ಲಿ ವೇಷ ಹಾಕಿ ಅರ್ಥ ಹೇಳುವುದರ ನಡುವಿನ ವ್ಯತ್ಯಾಸಗಳನ್ನು ಕಲಾವಿದ ಗಮನಿಸಬೇಕು ಎಂದರು.

ಪತ್ರಕರ್ತ ಹರೀಶ ಮಾಂಬಾಡಿ ಮಾತನಾಡಿ, ಸಾಮಾಜಿಕ ಜಾಲತಾಣಗಳ ಕಾಲದಲ್ಲಿ ಕಲಾವಿದರು ಹಾಗೂ ಸಂಘಟಕರಿಗೆ ಕಾರ್ಯಕ್ರಮಗಳನ್ನು ಆಯೋಜಿಸುವುದು ದೊಡ್ಡ ಸವಾಲು ಎಂದರು. ಸರಯೂ ಯಕ್ಷ ಬಳಗ ಕೋಡಿಕಲ್ ಸಂಚಾಲಕ ರವಿ ಅಲೆವೂರಾಯ ಮಾತನಾಡಿದರು. ಟ್ರಸ್ಟ್ ಮುಖ್ಯಸ್ಥ ಪ್ರಶಾಂತ್ ಹೊಳ್ಳ ಸ್ವಾಗತಿಸಿದರು. ಕೀರ್ತನಾ ಹೊಳ್ಳ ನಿರ್ವಹಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net