ಮೌಲ್ಯಾಧಾರಿತ ಶಿಕ್ಷಣದಿಂದ ಯಶಸ್ಸು

ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಮಹಿಳಾ ಕಬಡ್ಡಿ ವಿಶ್ವ ಚಾಂಪಿಯನ್ ತಂಡದ ಕ್ರೀಡಾಪಟು ಧನಲಕ್ಷ್ಮೀ, ಸಮಾಜ ಸೇವಕ ಜಯರಾಜ್ ಶೆಟ್ಟಿ, ಕಿಲ್ಪಾಡಿ, ಭಾನುಮತಿ ಶೆಟ್ಟಿ ಕಕ್ವಗುತ್ತು ಹಾಗೂ ಹಿಂದೂ ಯುವಸೇನೆ ಸಂಘಟನಾ ಕಾರ್ಯದರ್ಶಿ ಶಂಕರ್ ಪಡಂಗ ಅವರನ್ನು ಗೌರವಿಸಲಾಯಿತು.
ಮಹಿಳಾ ಕಬಡ್ಡಿ ವಿಶ್ವ ಚಾಂಪಿಯನ್ ತಂಡದ ಕ್ರೀಡಾಪಟು ಧನಲಕ್ಷ್ಮೀ, ಸಮಾಜ ಸೇವಕ ಜಯರಾಜ್ ಶೆಟ್ಟಿ, ಕಿಲ್ಪಾಡಿ, ಭಾನುಮತಿ ಶೆಟ್ಟಿ ಕಕ್ವಗುತ್ತು ಹಾಗೂ ಹಿಂದೂ ಯುವಸೇನೆ ಸಂಘಟನಾ ಕಾರ್ಯದರ್ಶಿ ಶಂಕರ್ ಪಡಂಗ ಅವರನ್ನು ಗೌರವಿಸಲಾಯಿತು.
Published on: 

ಮೂಲ್ಕಿ: ಯುವ ಸಮಾಜ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣದ ವ್ಯಾಮೋಹವನ್ನು ಬದಿಗೆ ಸರಿಸಿ ಮೌಲ್ಯಾಧಾರಿತ ಶಿಕ್ಷಣ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಯಶಸ್ಸು ಸಾಧಿಸಲು ಪ್ರಯತ್ನಿಸಬೇಕು ಎಂದು ಹಿರಿಯ ವಾಗ್ಮಿ ವಿದ್ಯಾಧರ್ ಶೆಟ್ಟಿ ಕೋಲ್ನಾಡ್ ಗುತ್ತು ಹೇಳಿದರು.

ಹಿಂದೂ ಯುವಸೇನೆ ಮತ್ತು ಮಹಿಳಾ ಮಂಡಳಿ ಆಶ್ರಯದಲ್ಲಿ 28ನೇ ವರ್ಷದ ಸಾರ್ವಜನಿಕ ಶಾರದಾ ಮಹೋತ್ಸವದ ಅಂಗವಾಗಿ ಧಾರ್ಮಿಕ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹಿಳಾ ಕಬಡ್ಡಿ ವಿಶ್ವ ಚಾಂಪಿಯನ್ ತಂಡದ ಕ್ರೀಡಾಪಟು ಧನಲಕ್ಷ್ಮೀ, ಸಮಾಜ ಸೇವಕ ಜಯರಾಜ್ ಶೆಟ್ಟಿ, ಕಿಲ್ಪಾಡಿ, ಭಾನುಮತಿ ಶೆಟ್ಟಿ ಕಕ್ವಗುತ್ತು ಹಾಗೂ ಹಿಂದೂ ಯುವಸೇನೆ ಸಂಘಟನಾ ಕಾರ್ಯದರ್ಶಿ ಶಂಕರ್ ಪಡಂಗ ಅವರನ್ನು ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಜನಾರ್ದನ ಬಂಗೇರ ಕೆ.ಎಸ್.ರಾವ್ ನಗರ, ಮೂಲ್ಕಿ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ರಕ್ಷಿತ್ ಪೂಜಾರಿ ಕೊಳಚಿ ಕಂಬಳ, ಕೆ.ಎಸ್.ರಾವ್ ನಗರ ಶ್ರೀನಾರಾಯಣ ಗುರು ಸಮಾಜ ಸೇವಾ ಸಂಘದ ಅಧ್ಯಕ್ಷ ಮಹಾಬಲ ಸನಿಲ್, ಮೂಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಹಿಂದೂ ಯುವ ಸೇನೆ ಮೂಲ್ಕಿ ಘಟಕದ ಅಧ್ಯಕ್ಷ ಗಿರೀಶ್ ಸಾಲ್ಯಾನ್ ಕೆ.ಎಸ್ ರಾವ್ ನಗರ, ಪ್ರಧಾನ ಕಾರ್ಯದರ್ಶಿ ಅಶ್ವಥ್ ಕೊಲಕಾಡಿ, ಮಹಿಳಾ ಮಂಡಳಿ ಅಧ್ಯಕ್ಷೆ ಲತಾ ಶೇಖರ್, ಕಾರ್ಯದರ್ಶಿ ರೇಷ್ಮಾ ಬೇಕಲ್ ಉಪಸ್ಥಿತರಿದ್ದರು. ಶಂಕರ್ ಪಡಂಗ ಸ್ವಾಗತಿಸಿದರು, ದಿನೇಶ್ ಕೋಲ್ನಾಡ್ ನಿರೂಪಿಸಿದರು.ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net