ಮಂಗಳೂರು ದಸರಾಕ್ಕೆ ರಾಜ್ಯದ ಕಲಾತಂಡಗಳು

ಪದ್ಮರಾಜ್ ಆರ್. ಮಾಹಿತಿ, ಪೂರ್ವಭಾವಿ ಸಭೆ
ಮಂಗಳೂರು ದಸರಾ ಶೋಭಾಯಾತ್ರೆ ಪೂರ್ವಭಾವಿ ಸಭೆಯಲ್ಲಿ ಪದ್ಮರಾಜ್ ಆರ್.ಮಾತನಾಡಿದರು. ಜೈರಾಜ್ ಎಚ್. ಸೋಮಸುಂದರ್, ರವೀಶ್ ನಾಯಕ್ ಮೊದಲಾದವರಿದ್ದರು.
ಮಂಗಳೂರು ದಸರಾ ಶೋಭಾಯಾತ್ರೆ ಪೂರ್ವಭಾವಿ ಸಭೆಯಲ್ಲಿ ಪದ್ಮರಾಜ್ ಆರ್.ಮಾತನಾಡಿದರು. ಜೈರಾಜ್ ಎಚ್. ಸೋಮಸುಂದರ್, ರವೀಶ್ ನಾಯಕ್ ಮೊದಲಾದವರಿದ್ದರು.
Published on: 

ಮಂಗಳೂರು: ’ಮಂಗಳೂರು ದಸರಾ’ದಲ್ಲಿ ಈ ಬಾರಿಯೂ ರಾಜ್ಯದ ವಿವಿಧ ಕಲಾತಂಡಗಳು ಭಾಗವಹಿಸಲಿದ್ದು, ವಿಶೇಷ ಆಕರ್ಷಣೆಯಾಗಲಿದೆ. ಮೆರವಣಿಗೆಯಲ್ಲಿ ಭಾಗವಹಿಸಲಿರುವ ಟ್ಯಾಬ್ಲೋ ತಂಡಗಳು ಈಗಾಗಲೇ ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ನೀಡಿದ್ದು, ಅ.16ರೊಳಗೆ ಭಾಗವಹಿಸುವ ತಂಡಗಳು ಖಾತರಿಪಡಿಸಿಕೊಳ್ಳಬೇಕು ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ಹೇಳಿದರು.

ಮಂಗಳೂರು ದಸರಾ ಮಹೋತ್ಸವದ ಶೋಭಾಯಾತ್ರೆ ಹಿನ್ನೆಲೆಯಲ್ಲಿ ಕುದ್ರೋಳಿ ದೇವಸ್ಥಾನದ ಸಭಾಂಗಣದಲ್ಲಿ ಶುಕ್ರವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಮಂಗಳೂರು ದಸರಾ ವೈಭವದಲ್ಲಿ ಈ ಬಾರಿಯೂ ಧಾರ್ಮಿಕ, ಸಾಂಸ್ಕೃತಿಕ ಜತೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಂಗಳೂರು ದಸರಾದಲ್ಲಿ ಶೋಭಾಯಾತ್ರೆ ವಿಶೇಷ ಆಷರ್ಕಣೆ, ವೈಭವವನ್ನು ಪಡೆದುಕೊಂಡಿದೆ. ಇದಕ್ಕೆ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಎಲ್ಲ ತಂಡಗಳು ಕಾರಣ ಎಂದರು.

ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರವೀಶ್ ನಾಯಕ್ ಮಾತನಾಡಿ, ಟ್ಯಾಬ್ಲೋಗಳಲ್ಲಿ ಬಳಕೆ ಮಾಡುವ ಸೊತ್ತುಗಳು ಯಾವುದೇ ರೀತಿಯ ಅಪಾಯಕ್ಕೆ ಅವಕಾಶವಾಗದಂತೆ ನೋಡಿಕೊಳ್ಳಬೇಕು. ದೇವಸ್ಥಾನ ಆಡಳಿತ ಮಂಡಳಿ ಹಾಗೂ ಇಲಾಖೆ ನೀಡುವ ನಿರ್ದೇಶನಗಳನ್ನು ಪಾಲಿಸಬೇಕು ಎಂದರು.

ಕುದ್ರೋಳಿ ದೇವಸ್ಥಾನದ ಅಧ್ಯಕ್ಷ ಜೈರಾಜ್ ಎಚ್.ಸೋಮಸುಂದರ್ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಟ್ರಸ್ಟಿ ಕಿಶೋರ್ ಕುಮಾರ್ ದಂಡೆಕೇರಿ, ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ನಜ್ಮಾ ಫಾರೂಕಿ, ಬಂದರು ಠಾಣಾ ನಿರೀಕ್ಷಕ ಸಚಿನ್, ಉಪನಿರೀಕ್ಷಕಿ ಫೈಝನ್ನೀಸಾ, ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯರಾದ ಲೀಲಾಕ್ಷ ಕರ್ಕೇರ, ರಾಧಾಕೃಷ್ಣ, ಲತೀಶ್ ಎಂ.ಸುವರ್ಣ, ರಮಾನಂದ ಕಾರಂದೂರು ಉಪಸ್ಥಿತರಿದ್ದರು. ವಿಜಯ್ ಕೋಟ್ಯಾನ್ ಪಡು ಶೋಭಾಯಾತ್ರೆ ಮಾರ್ಗಸೂಚಿಗಳನ್ನು ವಾಚಿಸಿ, ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net