

ಉಳ್ಳಾಲ: ನಾಟೆಕಲ್ ಸಮೀಪದ ಪನೀರ್ ಬಳಿ ಗುರುವಾರ ಆಟೋರಿಕ್ಷಾ ಮತ್ತು ವ್ಯಾನ್ ಮುಖಾಮುಖಿ ಡಿಕ್ಕಿಯಲ್ಲಿ ಆಟೋದಲ್ಲಿದ್ದ ಪ್ರಯಾಣಿಕ ಅಡ್ಕರೆಪಡ್ಡು ನಿವಾಸಿ ಇಬ್ರಾಹಿಂ(61) ಎಂಬುವರು ಮೃತಪಟ್ಟಿದ್ದಾರೆ. ಮರ್ಝೂಕ್ ಎಂಬುವರ ರಿಕ್ಷಾದಲ್ಲಿ ಇಬ್ರಾಹಿಂ, ನಾಟೆಕಲ್ನಿಂದ ಕೆ.ಸಿ.ರೋಡ್ ಕಡೆಗೆ ಹೋಗುತ್ತಿದ್ದರು.
ಪನೀರು ತಲುಪಿದಾಗ ಕೆ.ಸಿ.ರೋಡು ಕಡೆಯಿಂದ ನಾಟೆಕಲ್ನತ್ತ ಬರುತ್ತಿದ್ದ ವ್ಯಾನ್ ಸ್ಕೂಟರ್ಗೆ ಡಿಕ್ಕಿ ಹೊಡೆದು ಬಳಿಕ ರಿಕ್ಷಾಕ್ಕೆ ಗುದ್ದಿದೆ. ಇದರ ಪರಿಣಾಮ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಇಬ್ರಾಹಿಂ ತೀವ್ರ ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮೃತಪಟ್ಟಿದ್ದರು.
ರಿಕ್ಷಾ ಚಾಲಕ ಮರ್ಝೂಕ್, ವ್ಯಾನ್ ಚಾಲಕ ಮನೋಜ್ ಡಿಸೋಜ, ಸ್ಕೂಟರ್ ಸವಾರ ವಿನಯ್ ಕ್ರಾಸ್ತಾ ಚಿಕಿತ್ಸೆ ಪಡೆಯುತ್ತಿದ್ದಾರೆ.