ಸಂಸ್ಕೃತ ವಿಶ್ವದ ಜ್ಞಾನ, ವೈಭವದ ಭಾಷೆ

ಆಳ್ವಾಸ್ ಕಾಲೇಜಿನಲ್ಲಿ ಸಂಸ್ಕೃತೋತ್ಸವ
 ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾದ ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ಡಾ.ಜಯಶಂಕರ್ ಕಂಗಣ್ಣಾರು ಸಂಸ್ಕೃತದ ವಿಶ್ವ ವೈಭವ ಕುರಿತು ಮಾತನಾಡಿದರು. ಡಾ.ಸೌಮ್ಯಾ ಸರಸ್ವತಿ, ಡಾ.ವಿನಾಯಕ ಭಟ್ ಗಾಳಿಮನೆ ಉಪಸ್ಥಿತರಿದ್ದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾದ ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ಡಾ.ಜಯಶಂಕರ್ ಕಂಗಣ್ಣಾರು ಸಂಸ್ಕೃತದ ವಿಶ್ವ ವೈಭವ ಕುರಿತು ಮಾತನಾಡಿದರು. ಡಾ.ಸೌಮ್ಯಾ ಸರಸ್ವತಿ, ಡಾ.ವಿನಾಯಕ ಭಟ್ ಗಾಳಿಮನೆ ಉಪಸ್ಥಿತರಿದ್ದರು.pgjournalism
Published on: 

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ವೇದ, ಉಪನಿಷತ್ತು, ದರ್ಶನ, ಸಾಹಿತ್ಯ ಹಾಗೂ ಭಾರತೀಯ ಜ್ಞಾನ ಪರಂಪರೆಯ ಅಪಾರ ಸಂಪತ್ತನ್ನು ಒಳಗೊಂಡಿರುವ ಸಂಸ್ಕೃತವು ಕೇವಲ ಪ್ರಾಚೀನ ಭಾಷೆಯಲ್ಲ, ಜಗತ್ತಿಗೆ ಜ್ಞಾನ ಮತ್ತು ಚಿಂತನೆಯ ಬೆಳಕು ನೀಡಿದ ಸಮೃದ್ಧ ಭಾಷೆಯಾಗಿದೆ ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಜಯಶಂಕರ್ ಕಂಗಣ್ಣಾರು ಹೇಳಿದರು.

ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗದ ವತಿಯಿಂದ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ಸಂಸ್ಕೃತದ ವಿಶ್ವ ವೈಭವ ಕುರಿತು ಮಾತನಾಡಿದರು.

ವೇದಗಳ ಮೂಲಕ ಸಂಸ್ಕೃತವು ಶಾಂತಿ, ಸಹಬಾಳ್ವೆ ಹಾಗೂ ಲೋಕಕಲ್ಯಾಣದ ಸಂದೇಶ ನೀಡಿದ್ದು, ಸರ್ವೇ ಜನಾಃ ಸುಖಿನೋ ಭವಂತು ಎಂಬ ಆಶಯವು ಸಮಸ್ತ ಮಾನವಕುಲದ ಒಳಿತನ್ನು ಬಯಸುವ ಭಾರತೀಯ ಚಿಂತನೆಯ ಪ್ರತೀಕವಾಗಿದೆ ಎಂದರು.

ಆಳ್ವಾಸ್ ಆಯುರ್ವೇದ ಕಾಲೇಜಿನ ಸಂಹಿತಾ ಹಾಗೂ ಸಿದ್ಧಾಂತ ವಿಭಾಗದ ಮುಖ್ಯಸ್ಥೆ ಡಾ.ಸೌಮ್ಯ ಸರಸ್ವತಿ ತಂತ್ರಾಂಶಗಳಲ್ಲಿ ಸಂಸ್ಕೃತವನ್ನು ಬಳಸುವುದರ ಕುರಿತು ತಿಳಿಸಿದರು.

ಆಳ್ವಾಸ್ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ವಿನಾಯಕ ಭಟ್ ಗಾಳಿಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾನ್ಯ ಸ್ವಾಗತಿಸಿದರು. ಚೇತನಾ ವಂದಿಸಿದರು. ತೇಜಸ್ವಿ ಅತಿಥಿಗಳನ್ನು ಪರಿಚಯಿಸಿದರು. ಶಮಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net