ರೋಹಿತ್ ನಾಯ್ಕಗೆ 1 ಕೋಟಿ ರೂ. ಲಾಟರಿ

ರೋಹಿತ್ ನಾಯ್ಕಗೆ 1 ಕೋಟಿ ರೂ. ಲಾಟರಿ
Published on: 

ಬಂಟ್ವಾಳ: ಕೇರಳದ ತಿರುವೋಣಂ ಲಾಟರಿಯ ಎರಡನೇ ಬಹುಮಾನ 1 ಕೋಟಿ ರೂ. ತಾಲೂಕಿನ ನಗ್ರಿ ಸಮೀಪದ ಕೇಪುಳಗುಡ್ಡೆ ನಿವಾಸಿ ರೋಹಿತ್ ನಾಯ್ಕ ಅವರು ಖರೀದಿಸಿದ ಟಿಕೆಟ್‌ಗೆ ಒಲಿದಿರುವುದಾಗಿ ತಿಳಿದು ಬಂದಿದೆ. ರೋಹಿತ್ ಅವರು ಕಾಸರಗೋಡಿನ ನ್ಯೂ ಲಕ್ಕಿ ಸೆಂಟರ್ ಏಜೆನ್ಸಿಯಲ್ಲಿ ಈ ಟಿಕೆಟ್ ಖರೀದಿಸಿದ್ದರು. ಕೇವಲ ಒಂದು ಟಿಕೆಟ್ ಮಾತ್ರ ಖರೀದಿಸಿದ್ದು ಅದಕ್ಕೆ 1 ಕೋಟಿ ರೂ. ಬಂದಿರುವುದಾಗಿ ತಿಳಿದು ಬಂದಿದೆ. ಅದೃಷ್ಟ ತಂದ ಟಿಕೆಟ್‌ನೊಂದಿಗೆ ರೋಹಿತ್ ಅವರು ಸಬ್ ಏಜೆಂಟ್ ಮಂಜುನಾಥ್ ಅವರೊಂದಿಗೆ ಕಾಸರಗೋಡಿನ ನ್ಯೂ ಲಕ್ಕಿ ಸೆಂಟರ್ ಏಜೆನ್ಸಿಗೆ ಭೇಟಿ ನೀಡಿದರು. ಈ ವೇಳೆ ತಮ್ಮ ಟಿಕೆಟ್‌ಗೆ ಅದೃಷ್ಟ ತಂದ ಸಂಸ್ಥೆಯ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net